Karnataka Times
Trending Stories, Viral News, Gossips & Everything in Kannada

BSNL: ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ ಕೇವಲ 91 ರೂಪಾಯಿಗಳಿಗೆ ಪಡೆಯಿರಿ ಮೂರು ತಿಂಗಳ ರಿಚಾರ್ಜ್ ಪ್ಲಾನ್!

advertisement

ದೇಶದಲ್ಲಿ Jio, Airtel ಹಾಗೂ Vi ಟೆಲಿಕಾಂ ಕಂಪನಿಗಳನ್ನು ಹೊರತುಪಡಿಸಿ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದ್ರೆ BSNL ಕೂಡ ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಗಮನ ಸೆಳೆಯುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಘೋಷಣೆ ಮಾಡಿದೆ. BSNL ಇತರ ಟೆಲಿಕಾಂ ಕಂಪನಿಗಳ ಜೊತೆಗೆ ಸ್ಪರ್ಧೆ ನಡೆಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಗ್ರಾಹಕರನ್ನ ಕಳೆದುಕೊಂಡಿತ್ತು. ಆದರೆ ಈಗ ಮತ್ತೆ ಅತ್ಯುತ್ತಮ ಯೋಜನೆಗಳ ಮೂಲಕ ಹೊಸದಾಗಿ ಆರಂಭಗೊಂಡಿರುವ BSNL ನ ರಿಚಾರ್ಜ್ ಪ್ಲಾನ್ ಗಳು ಗ್ರಾಹಕರನ ಆಕರ್ಷಿಸುತ್ತಿದೆ.

BSNL ನ ಅಗ್ಗದ ರಿಚಾರ್ಜ್ ಪ್ಲಾನ್:

 

 

advertisement

ನೀವು BSNL ನ ಗ್ರಾಹಕರಾಗಿದ್ದರೆ ಅಗ್ಗದ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಿ. ಇದು ದೀರ್ಘಾವಧಿಯ ಮಾನ್ಯತೆಯನ್ನು ಹೊಂದಿರುವ ಅಂದರೆ 90 ದಿನಗಳ ವರೆಗಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ. ಸಾಮಾನ್ಯವಾಗಿ ಮೂರು ತಿಂಗಳ ಅವಧಿಯ ರಿಚಾರ್ಜ್ ಪ್ಲಾನ್ ಸಾವಿರ ರೂಪಾಯಿಗಳವರೆಗೆ ಇರುತ್ತದೆ ಆದರೆ ಬಿಎಸ್ಎನ್ಎಲ್ ಕೇವಲ 91 ರೂಪಾಯಿಗಳಿಗೆ, ಮತ್ತು ದಿನಗಳ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಅನ್ನು ವಿಶೇಷವಾಗಿ ಪರಿಚಯಿಸಿದೆ.

BSNL ಈ ರೀಚಾರ್ಜ್ ಪ್ಲಾನ್ ನಲ್ಲಿ ಫೋನ್ ಕರೆಗೆ ನಿಮಿಷಕ್ಕೆ 15 ಪೈಸೆ ಚಾರ್ಜ್ ವಿಧಿಸಲಾಗುತ್ತದೆ. ಹಾಗೂ ಪ್ರತಿ MB ಡಾಟಾ ಬಳಕೆ ಮಾಡಿದ್ರೆ ಒಂದು ಪೈಸಾ, ಅಂದರೆ ಒಂದು ಜಿಬಿ ಡಾಟಾ ಕೆ 10.24 ಮಾಡಲಾಗುತ್ತದೆ. ಇದರ ಜೊತೆಗೆ ಪ್ರತಿ SMS ಗೆ 25 ಪೈಸೆ ವಿಧಿಸಲಾಗುವುದು.

90 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್:

ಇದು ವ್ಯಾಲಿಡಿಟಿ ರಿಚಾರ್ಜ್ ಆಗಿದ್ದು ನೀವು ಅನಿಯಮಿತ ಕರೆ ಪ್ರಯೋಜನ ಪಡೆದುಕೊಳ್ಳಲು 499 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಇದರಲ್ಲಿ ಅನಿಯಮಿತ ಕರೆ ಮಾತ್ರವಲ್ಲದೆ 300 ಎಸ್ಎಂಎಸ್ ಗಳನ್ನು ಕೂಡ ಉಚಿತವಾಗಿ ಪಡೆದುಕೊಳ್ಳುತ್ತೀರಿ. ನಿಮಗೆ ಇಂಟರ್ನೆಟ್ ಸೌಲಭ್ಯದ ಅಗತ್ಯ ಇಲ್ಲದೆ ಕೇವಲ ಕರೆ ಮಾಡುವುದಕ್ಕಾಗಿ ಬಳಕೆ ಮಾಡುವುದಿದ್ದರೆ ಬಿಎಸ್ಎನ್ಎಲ್ ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.

advertisement

Leave A Reply

Your email address will not be published.