Karnataka Times
Trending Stories, Viral News, Gossips & Everything in Kannada

Drought Relief Money: ರಾಜ್ಯದಲ್ಲಿ ಬರಗಾಲ ಪರಿಹಾರ ನಿಧಿ ಬಿಡುಗಡೆ, ಹೀಗೆ ಚೆಕ್ ಮಾಡಿಕೊಳ್ಳಿ!

advertisement

ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮಳೆ ಪ್ರಮಾಣ ಬಹಳ ಕಡಿಮೆ ಇದ್ದು ಇದರಿಂದಾಗಿ ನೈಜ ಸಂಕಷ್ಟ ಅನುಭವಿಸಿದ್ದು ಮಾತ್ರ ರೈತರು ಅಧಿಕ ಎನ್ನಬಹುದು. ರೈತರು ಸಂಕಷ್ಟ ಅನುಭವಿಸುವ ಜೊತೆಗೆ ಬೆಳೆಗಾಗಿ ಸಾಲ ಸೂಲ ಮಾಡಿ ಅತ್ತ ಬೆಳೆಯೂ ಬಾರದೇ ಕಂಗಾಲಾಗುತ್ತಿದ್ದಾರೆ‌. ಹಾಗಾಗಿ ಕಾಂಗ್ರೆಸ್ ಸರಕಾರ ಬರಗಾಲ ಪರಿಹಾರ ಘೋಷಣೆ ಮಾಡಿದ್ದು ಕೇಂದ್ರದ ಅನುದಾನ ಬಿಡುಗಡೆಗಾಗಿ ಕಾಯುತ್ತಲಿತ್ತು ಆದರೆ ಈಗ ಅನುದಾನ ಬಿಡುಗಡೆ ಆಗದ ಹಿನ್ನೆಲೆ ರಾಜ್ಯ ಸರಕಾರವೇ ಅನುದಾನವನ್ನು ನೀಡುತ್ತಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ:

ಬರಗಾಲ ಪರಿಹಾರ ಹಣ (Drought Relief Money) ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ಜನರಿಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಪತ್ರಿಕಾ ಗೋಷ್ಠಿಯಲ್ಲಿ ಕೆಲ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರದ ಅನುದಾನ ಬರಲು ಬಾಕಿ ಇದೆ ಹಾಗಿದ್ದರೂ ರಾಜ್ಯ ಸರಕಾರ ನುಡಿದಂತೆ ನಡೆಯುವ ಸಲುವಾಗಿ ಬರಗಾಲ ಪರಿಹಾರ ಮೊತ್ತ ಬಿಡುಗಡೆ ಮಾಡಿದೆ. 33 ಲಕ್ಷ ರೈತರಿಗೆ ಬರಗಾಲ ಪರಿಹಾರ ನೀಡಿದೆ ಎಂದು ಕಂದಾಯ ಸಚಿವರು ಮಾಧ್ಯಮದ ಮುಂದೆ ಈ ವಿಚಾರವಾಗಿ ಮಾತನಾಡಿದ್ದಾರೆ.

 

 

advertisement

ಕೇಂದ್ರ ಸರಕಾರದಿಂದ 18, 178ಕೋಟಿ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿ ಅವರು ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರ ಬಳಿ ನಾಲಗಕು ತಿಂಗಳ ಹಿಂದೆ ಮನವಿ ಮಾಡಿತ್ತು ಆದರೂ ಇನ್ನು ಅನುದಾನ ಬಂದಿಲ್ಲ. ಈ ಹಿಂದೆ ರೈತರಿಗೆ ಬರಗಾಲ ಪರಿಹಾರಕ್ಕಾಗಿ 2000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿತ್ತು ಅದರ ಪ್ರಾಥಮಿಕ ಭಾಗವಾಗಿ 628ಕೋಟಿ ರೂಪಾಯಿ ದೊರೆತಿದ್ದು ಅದನ್ನು 33 ಲಕ್ಷ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ‌. ಬರಗಾಲ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ ಉಳಿದ 1.6ಲಕ್ಷ ರೈತರ ಖೆತೆಗಳು ಕೆಲ ಅಪ್ಡೇಟ್ ಸಮಸ್ಯೆ ಎದುರಿಸುತ್ತಲಿದೆ. ಅದನ್ನು ಸರಿಮಾಡಿ ಬಳಿಕ ಅವರ ಖಾತೆಗೆ ಸಹ ಹಣ ಜಮೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಸಭೆ:

ರೈತರಿಗೆ ಈ ಒಂದು ಹಣವು ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವಂತೆ ಮಾಡಬೇಕು ಎಂಬ ಉದ್ದೇಶಕ್ಕಾಗಿ ರಾಜ್ಯಾದ್ಯಂತ ಜಿಲ್ಲಾವಾರು 223ಬರ ಪೀಡಿತ ತಾಲೂಕು ಗಳನ್ನು ಘೋಷಣೆ ಮಾಡಿ ಬಳಿಕ ಅಲ್ಲಿ ಬರ ಟಾಸ್ಕ್ ಫೋರ್ಸ್ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಮೂಲಕ ಕೃಷಿ ಪರಿಕರ, ಮೇವು, ನೀರಿನ ಲಭ್ಯತೆ ವಿವಿಧ ವಿಚಾರಗಳ ಬಗ್ಗೆ ಇರುವ ಸಮಸ್ಯೆಯು ಡಿಸಿ ಹಾಗೂ ತಹಶೀಲ್ದಾರರ ಸಹಯೋಗದೊಂದಿಗೆ ಪರಿಹಾರವಾಗಲಿದೆ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಕೂಡ ಅಧಿಕವಾಗಿ ಕಂಡುಬಂದ ಹಿನ್ನೆಲೆ ಹೆಚ್ಚುವರಿ ಕೊಳವೆ ಬಾವಿ ತೆರೆಯಲು ಸಹ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವರು ಸಭೆಯಲ್ಲಿ ತಿಳಿಸಿದ್ದಾರೆ.

ಈಗಲೇ ಪರಿಶೀಲಿಸಿ ಕೊಳ್ಳಿ:

ಬರಗಾಲ ಪರಿಹಾರವನ್ನು ಎಲ್ಲರಿಗೂ ನೀಡಲಾಗುತ್ತಿಲ್ಲ ಬದಲಿಗೆ ಆಯಾ ಗ್ರಾಮ ಪಂಚಾಯತ್ ಗಳಿಗೆ ಅರ್ಹರಿಗೆ ಅನುದಾನ ಬಿಡುಗಡೆ ಮಾಡುವ ಸಲುವಾಗಿ ರೈತರ ಪಟ್ಟಿ ನೀಡಲಾಗಿದೆ.ಅಲ್ಲಿ ಪರಿಶೀಲನೆ ಆದ ಬಳಿಕವೇ ಹಣ ಜಮೆ ಆಗಲಿದೆ. ರೈತರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹಣ ಬರಲಾರದು ಹಾಗಾಗಿ ಈ ಬಗ್ಗೆ ಕೂಡ ಗಮನಿಸುವುದು ಅತ್ಯವಶ್ಯಕವಾಗಿದೆ‌. ನೀವು ರೈತರಾಗಿದ್ದು ನಿಮಗೆ ಬರಗಾಲ ಪರಿಹಾರ ಮೊತ್ತ ಬಾರದೇ ಇದ್ದರೆ ಕೂಡಲೆ ಪರಿಶೀಲನೆ ಮಾಡಿಕೊಳ್ಳಿ. ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಸ್ಥಳೀಯ ಕಂದಾಯ ಇಲಾಖೆಗೆ ಭೇಟಿ ನೀಡಿ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.