Karnataka Times
Trending Stories, Viral News, Gossips & Everything in Kannada

RBI: ದೇಶದ ಯಾವುದೇ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್! ರಿಸರ್ವ್ ಬ್ಯಾಂಕ್ ಆದೇಶ

advertisement

ಇತ್ತೀಚಿನ ದಿನದಲ್ಲಿ ಎಲ್ಲರ ಬಳಿ ಬ್ಯಾಂಕಿನ ಖಾತೆ ಇರುವುದು ಸಾಮಾನ್ಯ. ಬ್ಯಾಂಕ್ ಕಾತೆ ಹೊಂದಿರುವಂತೆ ಅದನ್ನು ಕಾಲಕ್ರಮೇಣ ಬಳಕೆ ಮಾಡುವುದು ಕೂಡ ಬಹಳ ಮುಖ್ಯ. ಅನೇಕ ಜನರು ವಿವಿಧ ಉದ್ದೇಶಕ್ಕಾಗಿ ಎರಡು ಮೂರು ಬ್ಯಾಂಕ್ ನಲ್ಲಿ ಖಾತೆ ತೆರೆಯುತ್ತಾರೆ ಆದರೆ ಬಳಿಕ ಖಾತೆ ಬಳಕೆ ಮಾಡದೆ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕೂಡ ಇಡಲಾರರು ಅಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆ (Bank Account) ನಿಷ್ಕ್ರಿಯ ಆಗಲಿದೆ. ಇಂತಹ ನಿಷ್ಕ್ರಿಯ ಬ್ಯಾಂಕ್ ಖಾತೆ ಪುನಃ ಸಕ್ರಿಯ ಖಾತೆಯಾಗಿ ಮಾಡಲು ನಿಗಧಿತ ಶುಲ್ಕ ಪಾವತಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಇನ್ನು ಮುಂದೆ ಈ ನಿಯಮ ಬದಲಾಗಲಿದೆ ಎಂದು ಹೇಳಬಹುದು.

WhatsApp Join Now
Telegram Join Now

ನಿಷ್ಕ್ರಿಯ ಆಗಿ ಎರಡು ಮೂರು ವರ್ಷ ಆಗಿದ್ದರೆ ಅದರ ಶುಲ್ಕ ಬಹಳ ಅಧಿಕ ಇರಲಿದೆ ಹೀಗಾಗಿ ಬ್ಯಾಂಕ್ ಶುಲ್ಕ ವಿಧಿಸುವುದು ಸಾರ್ವಜನಿಕರಿಗೆ ಒಂದು ತರನಾಗಿ ಹೊರೆ ಇದ್ದಂತೆ ಎಂದು ಹೇಳಬಹುದು. ಇಂತಹ ಹೊರೆ ಇನ್ನು ಮುಂದೆ ಇರಲಾರದು. ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ (Minimum Balance) ಕಾಯ್ದಿಲ್ಲ ಹಾಗೂ ಅಕೌಂಟ್ ಸಕ್ರಿಯವಾಗಿ ಇಟ್ಟಿಲ್ಲ ಎಂಬ ಕಾರಣಕ್ಕೆ ವಿಧಿಸಲಾಗುವ ಶುಲ್ಕಕ್ಕೆ RBI ಕೆಲವು ಅಗತ್ಯ ಮಾರ್ಗದರ್ಶನ ನೀಡಿದ್ದು ಅದನ್ನು ಇನ್ನು ಮುಂದೆ ಎಲ್ಲ ದೇಶೀಯ ಬ್ಯಾಂಕ್ ಪಾಲಿಸಬೇಕು.

 

Image Source: News24

 

ಬ್ಯಾಂಕ್ ನಲ್ಲಿ  ಅನೇಕ  ಉದ್ದೇಶಕ್ಕಾಗಿ ಖಾತೆ ತೆರೆಯಲಾಗುವುದು. ವಿದ್ಯಾರ್ಥಿ ವೇತನ (Student Scholarship), ಪಿಂಚಣಿ (Pension) ಪಡೆಯಲು ಇತರ ಯೋಜನೆಗಳ ಹಣ ಬರಲಿ ಎಂಬ ಉದ್ದೇಶಕ್ಕಾಗಿ ಕೂಡ ಖಾತೆ ತೆಗೆಯುತ್ತಾರೆ. ಸ್ಕಾಲರ್ ಶಿಪ್ ಒಂದು ವರ್ಷಕ್ಕೆ ಒಮ್ಮೆ ಮಾತ್ರವೇ ಬರುವುದು ಆಗ ಖಾತೆ ಮತ್ತೆ ಬಳಕೆ ಆಗದಿರುವ ಸಾಧ್ಯತೆ ಇದೆ. ಒಂದು ವೇಳೆ ಮತ್ತೆ ಆ ಬ್ಯಾಂಕಿನ ಖಾತೆ ಸಕ್ರಿಯವಾಗಿ ಮಾಡಲು ಶುಲ್ಕ ವಿಧಿಸುವುದು ಸರಿಯಾದ ಕ್ರಮ ಅಲ್ಲ ಎಂದು RBI ತಿಳಿಸಿದೆ. ಹಾಗಾಗಿ ನಿಷ್ಕ್ರಿಯ ಆದ ಖಾತೆಯ ಮೇಲೆ ಕನಿಷ್ಟ ಬ್ಯಾಲೆನ್ಸ್ ಕಾಯ್ದಿಲ್ಲ ಎಂದು ಶುಲ್ಕ ವಿಧಿಸುವ ಕ್ರಮ ಕೂಡ ಸರಿಯಲ್ಲ ಎಂದು ಭಾರತೀಯ ಕೇಂದ್ರ ಬ್ಯಾಂಕ್ ತಿಳಿಸಿದೆ.

advertisement

RBI ನಿಂದ ಸುತ್ತೊಲೆ:

 

Image Source: NDTV

 

RBI ಬ್ಯಾಂಕ್ ವಿಧಿಸುವ ಅನಗತ್ಯ ಠೇವಣಿ ಮೇಲೆ ನಿಗಾವಹಿಸಿದೆ. ಬ್ಯಾಂಕ್ ನಲ್ಲಿ ಠೇವಣಿ ಇಟ್ಟಾಗ ಕ್ಲೈಮ್ ಮಾಡಿದ್ದ ಪ್ರಮಾಣ ಅಧಿಕ ಇದೆ. ಈ ಹಣವನ್ನು ಸಂಬಂಧ ಪಟ್ಟವರಿಗೆ ಹಿಂದಿರುಗಿಸಬೇಕು ಎಂಬ ನಿಯಮ ಇದೆ. ಆದರೆ ಹಣವನ್ನು ಕ್ಲೈಮ್ ಮಾಡಿ ಪಡೆಯದೇ ಇದ್ದದ್ದಕ್ಕೆ ಕಾರಣ ನೋಡುವಾಗ ಅನೇಕರ ಖಾತೆ ನಿಷ್ಕ್ರಿಯ ಹಾಗೂ ಮಿನಿಮಮ್ ಬ್ಯಾಲೆನ್ಸ್ (Minimum Balance) ಇಲ್ಲ ಎಂದು ಅನಗತ್ಯ ಶುಲ್ಕ ಸಹ ಬ್ಯಾಂಕ್ ಗಳು ವಿಧಿಸುವುದು RBI ಗಮನಕ್ಕೆ ಬಂದಿದೆ. ಹಾಗಾಗಿ ಇನ್ನು ಮುಂದೆ ಬ್ಯಾಂಕ್ ನ ಖಾತೆಯಲ್ಲಿ ಕನಿಷ್ಟ ಮೊತ್ತ ಇಟ್ಟಿಲ್ಲ, ಖಾತೆ ನಿಷ್ಕ್ರಿಯ ಸರಿಪಡಿಸುವಂತಹ ಕಾರಣಕ್ಕೆ ಶುಲ್ಕ ವಿಧಿಸದಂತೆ ಬ್ಯಾಂಕ್ ಗೆ RBI ಸುತ್ತೊಲೆ ಹೊರಡಿಸಿದೆ.

ಬ್ಯಾಂಕ್ ನ ಗ್ರಾಹಕರ ಖಾತೆ ನಿಷ್ಕ್ರಿಯ ಗೊಳಿಸುವುದಕ್ಕೂ ಮೊದಲೇ ಗ್ರಾಹಕರಿಗೆ ಈ ಬಗ್ಗೆ SMS, E mail,  ಪತ್ರದ ಮೂಲಕ ಮಾಹಿತಿ ರವಾನಿಸಬೇಕು. ನಿಷ್ಕ್ರಿಯ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ ಕಾಯ್ದಿಲ್ಲ ಎಂದು ದಂಡ ವಿಧಿಸುವ ಹಕ್ಕು ಯಾವುದೇ ಬ್ಯಾಂಕ್ ಹೊಂದಿರಲಾರದು ಎಂದು RBI ಈ ಬಗ್ಗೆ ಸ್ಪಷ್ಟೀಕರಣ ಕೂಡ ನೀಡಿದೆ

advertisement

Leave A Reply

Your email address will not be published.