Karnataka Times
Trending Stories, Viral News, Gossips & Everything in Kannada

RBL Bank: ಉಳಿತಾಯ ಹಣಕ್ಕೆ ಹೆಚ್ಚಿನ ಬಡ್ಡಿ ಬೇಕೇ? ಹಾಗಿದ್ರೆ ಈ ಬ್ಯಾಂಕ್ ನಲ್ಲಿ ಖಾತೆ ತೆಗೆಯಿರಿ.

advertisement

ಉಳಿತಾಯ ಮಾಡಬೇಕಾದರೆ ನಾವು ಪರಿಗಣಿಸುವ ಎರಡು ಮುಖ್ಯಗಳ ಅಂಶಗಳೆಂದರೆ ಒಂದು ಬಡ್ಡಿ ದರ ಹಾಗೂ ಎರಡನೆಯದು ಸುರಕ್ಷತೆ. ಎಫ್ ಡಿ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. ಎಫ್ ಡಿ ಸುರಕ್ಷಿತವಾದ ಉಳಿತಾಯ ಯೋಜನೆಯಾಗಿದ್ದು ಇತ್ತೀಚಿಗೆ ಬಡ್ಡಿ ದರಗಳು ಕೂಡ ಹೆಚ್ಚಾಗಿ ರಿಟರ್ನ್ಸ್ ಜಾಸ್ತಿ ಸಿಗುತ್ತದೆ.

ಆದರೆ ಎಫ್ ಡಿ ಎನ್ನು ಒಂದು ನಿಗದಿತ ಸಮಯದ ವರೆಗೆ ಇಡಬೇಕಾಗುತ್ತದೆ. ಆ ಸಮಯದ ಒಳಗೆ ಯಾವುದಾದರೂ ಹಣಕಾಸಿನ ಅಗತ್ಯ ಬಂದಾಗ ಒಂದು FD ಅನ್ನು ಮಧ್ಯದಲ್ಲಿ ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ. ಅಥವಾ ಬೇರೆ ಕಡೆಯಿಂದ ಹಣವನ್ನು ತೆಗೆದುಕೊಳ್ಳಬೇಕಾಗುತ್ತದೆ ಅದಕ್ಕೂ ಕೂಡ ಬಡ್ಡಿ ಕಟ್ಟಬೇಕಾಗುತ್ತದೆ.

ನಮ್ಮ Savings Account ನಲ್ಲಿ ಇಟ್ಟ ಹಣಕ್ಕೆ FD ಗಿಂತ ಕಡಿಮೆ ಬಡ್ಡಿ ದರ ಇರುತ್ತದೆ. ಆದರೆ ಸೇವಿಂಗ್ಸ್ ಅಕೌಂಟ್ ಯಲ್ಲಿನ ಹಣ ನಮಗೆ ಯಾವಾಗ ಬೇಕೋ ಆವಾಗ ತೆಗೆದುಕೊಳ್ಳಲು ಆಗುತ್ತದೆ. ಒಂದು ವೇಳೆ ಸೇವಿಂಗ್ಸ್ ಅಕೌಂಟ್ ನಲ್ಲಿ ಇಟ್ಟ ಹಣಕ್ಕೆ ಎಫ್ ಡಿ ಯ ಬಡ್ಡಿ ದರಗಳು ಸಿಗುತ್ತವೆ ಎಂದಾದರೆ ನಮ್ಮ ಹಣವು ಬೆಳೆಯುತ್ತಿರುತ್ತದೆ ಜೊತೆಗೆ ಅಗತ್ಯಕ್ಕೆ ಬೇಕಾದಾಗ ಹಣವು ಸಿಗುವಂತಾಗುತ್ತದೆ.

RBL Go Account:

 

 

ಇದೇ ಸಮಸ್ಯೆಗೆ ಪರಿಹಾರ ಎಂಬಂತೆ ಒಂದು ಹೊಸ ಖಾತೆಯನ್ನು RBL Bank ನಮಗಾಗಿ ತಂದಿದೆ. ಗೋ ಖಾತೆಯ ಹೆಸರಿನಲ್ಲಿ ಡಿಜಿಟಲ್ ಉಳಿತಾಯ ಖಾತೆಯನ್ನು RBL Bank ಪರಿಚಯಿಸಿದೆ. ಇದು ಶೂನ್ಯ ಬ್ಯಾಲೆನ್ಸ್ ಖಾತೆಯಾಗಿದ್ದು ಇಲ್ಲಿ 7.5% Interest Rate ನೀಡಲಾಗುತ್ತದೆ.

advertisement

ಒಂದು ಕೋಟಿ ವಿಮೆ:

RBL Bank ತನ್ನ ವೆಬ್ಸೈಟ್ನಲ್ಲಿ ಹೇಳಿರುವ ಪ್ರಕಾರ ಈ ಗೋ ಖಾತೆಯ ಜೊತೆಗೆ Free Premium Go Debit Card, ಉಚಿತ ಕ್ರೆಡಿಟ್ ವರದಿ, Cyber ಮತ್ತು ಅಪಘಾತ ವಿಮೆ ರಕ್ಷಣೆ ಮತ್ತು ಒಂದು ಕೋಟಿ ರೂಪಾಯಿಯ ಪ್ರಯಾಣ ವಿಮೆಯನ್ನು ಪಡೆಯಲಿದ್ದೇವೆ.

ಚಂದಾದಾರಿಕೆಯ ಮಾದರಿಯ ಅಕೌಂಟ್:

RBL ನ Zero Balance Account ಯು ಸಬ್ ಸ್ಕ್ರಿಪ್ಷನ್ ಬೇಸ್ಡ್ ಅಕೌಂಟ್ ಆಗಿದೆ. ಈ ಪ್ರಯೋಜನವನ್ನು ಪಡೆಯಲು ಮೊದಲ ವರ್ಷ ಚಂದದಾರಿಕೆಯಾಗಿ 1999 ರೂಪಾಯಿಗಳನ್ನು ಪಾವತಿಸಬೇಕು ಮತ್ತು ಪ್ರತಿ ವರ್ಷ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಖಾತೆಯೊಂದಿಗೆ ಬರುವ ಡೆಬಿಟ್ ಕಾರ್ಡ್ ನ ಮೂಲಕ ನಾವು ವರ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ಖಾತೆ ತೆರೆಯುವುದು ಹೇಗೆ?

RBL Bank ನ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಲು ಆರ್ ಬಿ ಎಲ್ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕಾಗುತ್ತದೆ. Aadhaar ಮತ್ತು PAN Card ವಿವರಗಳನ್ನು ನೀಡಿ ಮನೆಯಿಂದಲೇ ಈ ಖಾತೆಯನ್ನು ತೆರೆಯಬಹುದು.

advertisement

Leave A Reply

Your email address will not be published.