Karnataka Times
Trending Stories, Viral News, Gossips & Everything in Kannada

BSNL: ಜಿಯೋ ದ ರಿಚಾರ್ಜ್ ಪ್ಲಾನ್ ಗಳಿಗೆ ಠಕ್ಕರ್ ಕೊಟ್ಟ ಬಿ ಎಸ್ ಎನ್ ಎಲ್ ನ ಈ ರಿಚಾರ್ಜ್ ಪ್ಲಾನ್!

advertisement

ಭಾರತೀಯ ಟೆಲಿಕಾಂ ಕಂಪನಿಯಲ್ಲಿ ರಿಲಯನ್ಸ್ ಜಿಯೋ (Reliance Jio) ಹಾಗೂ ಏರ್ಟೆಲ್ (Airtel) ಅತ್ಯುತ್ತಮ ಟೆಲಿಕಾಂ ಸರ್ವಿಸ್ ನೀಡುವ ಕಂಪನಿಗಳು ಎನಿಸಿವೆ. ತಮ್ಮ ತಮ್ಮ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಈ ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ ಕೆಲವು ಕೈಗೆಟುಕುವ ಬೆಲೆಯದಾಗಿದ್ದು ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ಆದರೆ ನಾವಿಂದು ಈ ಲೇಖನದಲ್ಲಿ ಜಿಯೋ (Jio) ಅಥವಾ ಏರ್ಟೆಲ್ (Airtel) ಪ್ಲಾನ್ ಗಳ ಬಗ್ಗೆ ಮಾತನಾಡುತ್ತಿಲ್ಲ. ಅದಕ್ಕೆ ಹೊರತಾಗಿ ಬಿಎಸ್ಎನ್ಎಲ್ (BSNL) ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಒಂದಷ್ಟು ವರ್ಷ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಕಳೆದುಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಗ್ರಾಹಕರಿಗೆ ಬೇಕಾಗಿರುವ ಅಗತ್ಯಗಳನ್ನು ಬಿಎಸ್ಎನ್ಎಲ್ ಪೂರೈಸದೆ ಇದ್ದಿದ್ದು. ಆದರೆ ಈಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿ ಎಚ್ಚೆತ್ತುಕೊಂಡಿದ್ದು, ತನ್ನ ಗ್ರಾಹಕರನ್ನು ಮತ್ತೆ ಸೆಳೆಯಲು ಒಂದಲ್ಲ ಒಂದು ರೀತಿಯ ಕೈಗೆಟುಕುವ ಬೆಲೆಯಲ್ಲಿ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.

BSNL Prepaid Plan:

 

advertisement

 

ನೀವು ದೀರ್ಘಾವಧಿಯ ಪ್ಲಾನ್ ಗಾಗಿ ಹುಡುಕಾಟ ನಡೆಸಿದರೆ BSNL ನ 396 ರೀಚಾರ್ಜ್ ಪ್ಲಾನ್ ಪಡೆದುಕೊಳ್ಳುವುದು ಒಳ್ಳೆಯದು. ಇದೊಂದು ಗೋಲ್ಡನ್ ಆಪರ್ಚುನಿಟಿ ಆಗಿದ್ದು ಕೆಲವೇ ದಿನಗಳ ಈ ಆಫರ್ ಪ್ರಯೋಜನವನ್ನು ಪಡೆದುಕೊಳ್ಳಿ.

ಬಿಎಸ್ಎನ್ಎಲ್ ನ 396 ರೂಪಾಯಿಗಳ ರಿಚಾರ್ಜ್ ಪ್ಲಾನ್ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಸಿಗುವ ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೆ, 90 ದಿನಗಳ ವರೆಗೆ Unlimited Call ಹಾಗೂ ಪ್ರತಿದಿನ 100 SMS ಗಳ ಸೌಲಭ್ಯ ಇದೆ. ಇದರ ಜೊತೆಗೆ ಪ್ರತಿದಿನ 2GB ಡಾಟಾವನ್ನು ಪಡೆದುಕೊಳ್ಳಬಹುದು.

ಒಂದು ವೇಳೆ ದಿನವೂ ಬಳಸುವ ಇಂಟರ್ನೆಟ್ ಮುಗಿದು ಹೋದರು ಕೂಡ ನೆಟ್ ಸಂಪರ್ಕ ನಿಮಗೆ ಸಿಕ್ಕೇ ಸಿಗುತ್ತದೆ. 40kbps ಸ್ಪೀಡ್ ನಲ್ಲಿ ಇಂಟರ್ನೆಟ್ ದಿನವಿಡೀ ಮುಂದುವರಿಯುತ್ತದೆ. ಬಿಎಸ್ಏನ್ಎಲ್ ನ 90 ದಿನಗಳ 396 ರೂಪಾಯಿಗಳ ರಿಚಾರ್ಜ್ ಮಾಡಿಸಿದರೆ 4 ರೂಪಾಯಿಗಳ ಪ್ರತಿ ದಿನದ ವೆಚ್ಚ ಆಗುತ್ತದೆ. ಇದೊಂದು ಗೋಲ್ಡನ್ ಆಫರ್ ಆಗಿದ್ದು, ನೀವು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ಪಡೆದುಕೊಳ್ಳಲು ಈ ಯೋಜನೆಯಲ್ಲಿ ಸಾಧ್ಯವಿದೆ. ಹಾಗಾಗಿ ಕೆಲವೇ ದಿನಗಳ ವರೆಗೆ ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಈ ರಿಚಾರ್ಜ್ ಪ್ಲಾನ್ ಅನ್ನು ಹಾಕಿಸಿಕೊಂಡು, ಆಫರ್ ನ್ನು ಆನಂದಿಸಿ.

advertisement

1 Comment
  1. CR.Padmanabha says

    Rate is ok. But BSNL internet service is very poor n you won’t get any thing, useless.

Leave A Reply

Your email address will not be published.