Karnataka Times
Trending Stories, Viral News, Gossips & Everything in Kannada

PM Vishwakarma Yojana: ಈ ಯೋಜನೆಯಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಸಿಗಲಿದೆ 3 ಲಕ್ಷ ಸಾಲ ಸೌಲಭ್ಯ!

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ಆದಾಯ ಹೆಚ್ಚು ಗಳಿಸಬೇಕು. ಸ್ವಂತದಾದ ಉದ್ಯೋಗ ಮಾಡಬೇಕು ಎಂಬ ಕನಸು ಬಹಳಷ್ಟು ಹೆಚ್ಚು ಇರುತ್ತದೆ.ಅದೇ‌ ರೀತಿ ಇತ್ತೀಚೆಗೆ ಸರಕಾರವು ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ, ಸಬ್ಸಿಡಿ ಸಾಲ ಯೋಜನೆ (Subsidized Loan Scheme) ಯು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ. ಕಡಿಮೆ ಬಡ್ಡಿದರದ ಮೂಲಕ ಕೂಡ ಸಾಲ (Loan) ನೀಡ್ತಾ ಇದ್ದು ಇದೀಗ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಯನ್ನು ಸಹ ಕೇಂದ್ರ ಸರಕಾರ ಆರಂಭ ಮಾಡಿದೆ.

ವಿಶ್ವಕರ್ಮ ಜಯಂತಿಯಂದು ಪ್ರಧಾನಮಂತ್ರಿ ಅವರು ಈ ಯೋಜನೆಗೆ ಚಾಲನೆ ನೀಡಿದರು.‌ ಮಧ್ಯಮ ವರ್ಗದ ಜನತೆಗೆ ಸಾಲ ಸೌಲಭ್ಯದ ಜತೆಗೆ ಆರ್ಥಿಕ ನೆರವಿನ ಸೌಲಭ್ಯ ವನ್ನು ಸಹ ನೀಡಲಾಗುತ್ತಿದ್ದು, ನೀವು ಸ್ವಂತ ಉದ್ಯೋಗ ಮಾಡಬೇಕಾದ್ರೆ 3 ಲಕ್ಷದವರೆಗೆ ಸಾಲ ಸೌಲಭ್ಯವು ಈ ಯೋಜನೆಯ ಮೂಲಕ ಸಿಗಲಿದೆ.

ಇವರು ಅರ್ಹರು:

 

 

advertisement

ಸ್ವಂತ ವ್ಯವಹಾರವನ್ನು ಪ್ರಾರಂಭ ಮಾಡುದಾದ್ರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮೊದಲ ಹಂತದಲ್ಲಿ 1 ಲಕ್ಷದವರೆಗೆ ಮತ್ತು ಎರಡನೇ ಹಂತದಲ್ಲಿ 2 ಲಕ್ಷದವರೆಗೆ ಸಾಲ (Loan) ಸೌಲಭ್ಯ ಲಭ್ಯವಿದೆ. ಬಡಗಿ,ಕಮ್ಮಾರ, ಗೋಲ್ಡ್ ಸ್ಮಿತ್, ರಚನಾಕಾರರು, ಚಮ್ಮಾರ, ಮೇಸ್ತ್ರಿ, ಬುಟ್ಟಿ ತಯಾರಿಸುವರು, ದೋಬಿಗಳು, ಸವಿತ ಸಮಾಜ, ಗೊಂಬೆ ತಯಾರಕರು, ದರ್ಜಿ, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಹಾರ ರೂಪಿಸುವವರು ಸೇರಿದಂತೆ ಹಲವು ವರ್ಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ತರಭೇತಿ ಕಾರ್ಯಕ್ರಮ:

ಅದೇ ರೀತಿ ಕೌಶಲ್ಯ ತರಬೇತಿ ಸಹ ಇರಲಿದ್ದು ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿ ಸ್ಟೇಫಂಡ್ ಅನ್ನು ಸಹ ಈ ಯೋಜನೆಯ ಮೂಲಕ ನೀಡಲಾಗುತ್ತದೆ. ಇದಲ್ಲದೆ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಶೇ. 5 ಬಡ್ಡಿ ದರದಲ್ಲಿ 1 ಲಕ್ಷ ರೂ. ಸಾಲ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಿ:

ಕೇಂದ್ರ ಸರ್ಕಾರವು ಈ ಯೋಜನೆಯಡಿ ಅರ್ಹ ಜನರಿಗೆ ಸರಳ ಷರತ್ತುಗಳೊಂದಿಗೆ ಸಾಲವನ್ನು ನೀಡಲಿದ್ದು ನೀವು ಅರ್ಜಿ ಸಲ್ಲಿಸಬಹುದಾಗಿದೆ‌. ವಿಶ್ವಕರ್ಮ ಪೋರ್ಟಲ್ ಮೂಲಕ https://pmvishwakarma.gov.in ಇಲ್ಲಿ ಅರ್ಜಿ ಸಲ್ಲಿಸಬೇಕು.

advertisement

Leave A Reply

Your email address will not be published.