Karnataka Times
Trending Stories, Viral News, Gossips & Everything in Kannada

Temple: ಈ ದೇವಾಲಯಗಳ ದರ್ಶನಕ್ಕೆ ಹೋಗಲು ಸರ್ಕಾರ ಕೊಡುತ್ತಿದೆ 5 ಸಾವಿರ ರೂ. ಸಹಾಯಧನ, ತಕ್ಷಣವೇ ಪಡೆಯಿರಿ!

advertisement

ಇಂದು ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಾಲು ಸಾಲು ರಜೆಯಲ್ಲಿ ಹೆಚ್ಚಿನ ಜನರು ವಿವಿಧ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ದೇವರ ದರ್ಶನಕ್ಕೂ ಹೆಚ್ಚು ಸಮಯದ ಕಾಲ ಕಾಯಬೇಕಾಗುತ್ತದೆ.ಅದೇ ರೀತಿ ಪ್ರತಿ ವರ್ಷ ಸಹಸ್ರಾರು ಭಕ್ತರು ದೂರದ ಊರಿನಿಂದ ವಿವಿಧ ದೇವಾಲಯದ ಯಾತ್ರೆಗೆ ತೆರಳುತ್ತಾರೆ. ಇಲ್ಲಿ ಆಗುವ ಖರ್ಚು ವೆಚ್ಚಗಳಿಗೆ ಧಾರ್ಮಿಕ ಇಲಾಖೆಯ ವತಿಯಿಂದ ಸಹಾಯಧನ ದೊರೆಯುತ್ತದೆ. ಹೀಗೆ ಯಾತ್ರೆ ಹೋಗಿ ಬಂದವರು ಇಲಾಖೆಯಿಂದ ಸಿಗುವ ಸಹಾಯಧನ ಪಡೆಯಲು ಕೂಡ ಅರ್ಹರಾಗುತ್ತಾರೆ. ಇದೀಗ ಕರ್ನಾಟಕ ಭಾರತ್‌ ಗೌರವ್‌ ಕಾಶಿ ಗಯಾ ದರ್ಶನ ಮಾದರಿಯಂತೆ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ ನಡೆಸಲು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ನಿರ್ಧರಿಸಿದ್ದು ರಾಜ್ಯ ಸರಕಾರ ಸಹಾಯಧನ ನೀಡಲಿದೆ.

ಎಷ್ಟು ಸಹಾಯಧನ

ಇಂದು ದಕ್ಷಿಣ ಭಾರತದ ಪ್ರಮುಖ ದೇಗುಲಗಳ ದರ್ಶನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚು ಮಾಡಲು ಇದಕ್ಕೆ ಭಕ್ತರಿಗೆ ಬೇಕಾದ ಸೌಕರ್ಯ ಒದಗಿಸಲು ಸರಕಾರ ತೀರ್ಮಾನಿಸಿದೆ. ಕಾಶಿ-ಗಯಾ ಯಾತ್ರೆ ರೀತಿಯಲ್ಲೆ ದಕ್ಷಿಣ ಯಾತ್ರೆಗೂ ಸರಕಾರದಿಂದ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ ಎಂದು ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy)ಮಾಹಿತಿ ನೀಡಿದ್ದಾರೆ.

ಅವಕಾಶ ಇದೆ

ಕಡಿಮೆ ಖರ್ಚಿನಲ್ಲಿ ಭಕ್ತರು ರಾಮೇಶ್ವರದ ರಾಮೇಶ್ವರ, ಕನ್ಯಾಕುಮಾರಿಯ ಶ್ರೀಭಗವತಿ ದೇವಿ, ಮಧುರೈ ಮೀನಾಕ್ಷಿ ಹಾಗೂ ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನ (Temple) ಗಳ ದರ್ಶನ ಪಡೆಯಲು ಅವಕಾಶ ಇದೆ ಎನ್ನಲಾಗಿದೆ.

advertisement

ಉಚಿತ ಪ್ರಯಾಣ

ಅದೇ ರೀತಿ ಇಲಾಖೆಯ ಸಿ ದರ್ಜೆ ದೇವಾಲಯಗಳಲ್ಲಿ ಸೇವೆ ಸಲ್ಲಿಕೆ ಮಾಡುವ ಅರ್ಚಕರು‌ ನೌಕರರು‌ ಸೇರಿದಂತೆ ಕರ್ನಾಟಕ ಭಾರತ್‌ ಕಾಶಿ ಗಯಾ ದರ್ಶನ ಹಾಗೂ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆಗೆ ಉಚಿತ ವಾಗಿ ಪ್ರಯಾಣ ಮಾಡಲು ಸಹ ಅವಕಾಶ ಇದೆ.

ಅರ್ಜಿ ಸಲ್ಲಿಸಬಹುದು

ನಾನಾ ಯಾತ್ರೆಗಳಿಗೆ ‌ಭೇಟಿ ನೀಡುವ ಯಾತ್ರಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು ಸಹಾಯಧನ ಪಡೆಯಲು ಪದೇ ಪದೆ ಇಲಾಖೆಗೆ ತೆರಳ ಬೇಕಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದಾಗಿದೆ.

advertisement

Leave A Reply

Your email address will not be published.