Karnataka Times
Trending Stories, Viral News, Gossips & Everything in Kannada

Free Mobile Phone: ಸರ್ಕಾರದಿಂದ ಸಿಗಲಿದೆ ಇಂಥವರಿಗೆ ಉಚಿತ ಮೊಬೈಲ್ ಫೋನ್!

advertisement

ಈ ರಾಜ್ಯ ಸರ್ಕಾರ ತನ್ನ ಪ್ರಜೆಗಳಿಗೆ ಮಹತ್ವದ ಗಿಫ್ಟ್ ಒಂದನ್ನು ಘೋಷಣೆ ಮಾಡಿದೆ. ಇಂಥವರು ಉಚಿತ ಮೊಬೈಲ್ ಫೋನ್ (Free Mobile Phone) ಪಡೆದುಕೊಳ್ಳಲಿದ್ದಾರೆ. ಯಾರಿಗೆ ಈ ಉಚಿತ ಮೊಬೈಲ್ ಫೋನ್ ಪ್ರಯೋಜನ ಸಿಗಲಿದೆ? ಸರ್ಕಾರ ಯಾಕೆ ಈ ನಿರ್ಧಾರ ತೆಗೆದುಕೊಂಡಿದೆ ? ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲಿದೆ.

ಸ್ಮಾರ್ಟ್ ಫೋನ್ ವಿತರಣೆ ಮಾಡುವುದಾಗಿ ಸಚಿವರ ಭರವಸೆ!

ಉದ್ಯೋಗಿಗಳು, ಸ್ಮಾರ್ಟ್ ಫೋನ್ (SmartPhone) ಸಹಾಯದಿಂದ ಸರ್ಕಾರದ ಹಲವು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡಬಹುದು ಮತ್ತು ಸುರಕ್ಷಿತವಾಗಿ ಇಡಬಹುದು ಎನ್ನುವ ಕಾರಣಕ್ಕೆ ಉಚಿತ ಸ್ಮಾರ್ಟ್ ಫೋನ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಉಚಿತ ಮೊಬೈಲ್ ಫೋನ್ ಪ್ರಯೋಜನವನ್ನು 25,962 ಅಂಗನವಾಡಿ ಕಾರ್ಯಕರ್ತೆಯರು, 1,016 ಮೇಲ್ವಿಚಾರಕರು ಹಾಗೂ 148 ಶಿಶು ಅಭಿವೃದ್ಧಿ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 28 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಆದರೆ ಸದ್ಯ ಈ ಯೋಜನೆ ಜಾರಿಗೆ ಬಂದಿರುವುದು ಹರಿಯಾಣ ರಾಜ್ಯದಲ್ಲಿ. ಹರಿಯಾಣದ 22 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅಧಿಕಾರಿಗಳಿಗೆ ಈ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 1270 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 49 ಮೇಲ್ವಿಚಾರಕರು ಜೊತೆಗೆ ಏಳು ಸಿಡಿಪಿಓ (CDPO) ಅಧಿಕಾರಿಗಳಿಗೆ ಮೊಬೈಲ್ ಫೋನ್ ವಿತರಣೆ ಮಾಡಲಾಗಿದೆ.

advertisement

ಉಚಿತ ಮೊಬೈಲ್ ಫೋನ್ ವಿತರಣೆ ಮಾಡುವ ಉದ್ದೇಶ!

ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ. ಅಂಗನವಾಡಿಯಲ್ಲಿ ಈ ಸೌಲಭ್ಯ ಒದಗಿಸಿದರೆ ಮಕ್ಕಳಿಗೂ ಕೂಡ ಅನುಕೂಲವಾಗುತ್ತದೆ ಎನ್ನುವುದು ಸರ್ಕಾರದ ನಿಲುವು. ಸ್ಮಾರ್ಟ್ ಫೋನ್ ಸಹಾಯದಿಂದ ನ್ಯೂಟ್ರಿಷಿಯನ್ ಅಭಿಯಾನವನ್ನು ಕೂಡ ಟ್ರ್ಯಾಕ್ ಮಾಡಬಹುದು. ಹಾಗಾಗಿ ಅಂಗನವಾಡಿ ಕೇಂದ್ರವನ್ನು ತೆರೆಯಲು ಕೂಡ ಸುಲಭವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಉದ್ಯೋಗಿಗಳು ಸ್ಮಾರ್ಟ್ಫೋನ್ ಸಹಾಯದಿಂದ ಹಾಜರಾತಿ, ಮಕ್ಕಳ ತೂಕ, ಎತ್ತರ ಮೊದಲಾದವುಗಳನ್ನು ಅಳತೆ ಮಾಡಲು ಕೂಡ ಸುಲಭವಾಗುತ್ತದೆ. ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಇದ್ರಿಂದ ನೇರ ಲಾಭ ಪಡೆಯಲಿದ್ದಾರೆ ಹಾಗೂ ಸಾಕಷ್ಟು ಸಮಯದ ಉಳಿತಾಯವಾಗುತ್ತದೆ. ಪೇಪರ್ ಪೆನ್ ಸಹಾಯವಿಲ್ಲದೆ ಸ್ಮಾರ್ಟ್ ಫೋನ್ ಮೂಲಕವೇ ಎಲ್ಲಾ ದಾಖಲೆಗಳನ್ನು ಇಡಬಹುದು ಎಂದು ಸಚಿವರು ಈ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸ್ಮಾರ್ಟ್ ಫೋನ್ ಆಮದು ತೆರಿಗೆ ಕಡಿತಗೊಳಿಸಲು ಸರ್ಕಾರದ ನಿರ್ಧಾರ!

ಸದ್ಯದಲ್ಲಿಯೇ ದೇಶದ ಗ್ರಾಹಕರಿಗೆ ಸಿಹಿ ಸುದ್ದಿ ಸಿಗಲಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಹಳ ದೊಡ್ಡ ಸಂಚಲನ ಉಂಟಾಗಲಿದೆ. ಆಪಲ್ ಮತ್ತು ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳ ಬೆಲೆ ಕಡಿಮೆ ಮಾಡುವುದಕ್ಕಾಗಿ ಆಮದು ತೆರಿಗೆಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗ ಹಿನ್ನೆಲೆಯಲ್ಲಿ ಇನ್ನೂ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬೆಲೆ ಗಣನೀಯವಾಗಿ ಕಡಿಮೆ ಆಗಬಹುದು. ದೇಶದಲ್ಲಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಉತ್ತೇಜಿಸುವ ಸಲುವಾಗಿ ಆಮದು ತೆರಿಗೆ ಕಡಿಮೆಗೊಳಿಸುವುದರ ಜೊತೆಗೆ ಮೊಬೈಲ್ ಫೋನ್ ಕಂಪನಿಗಳು ಕೂಡ ಇದರ ಪ್ರಯೋಜನ ಪಡೆದುಕೊಳ್ಳಲಿವೆ. ಹಾಗಾಗಿ ಸದ್ಯದಲ್ಲಿಯೇ ರಾಜ್ಯ ಸರ್ಕಾರ ಕೂಡ ಉಚಿತ ಸ್ಮಾರ್ಟ್ ಫೋನ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಣೆ ಮಾಡುವ ಸಾಧ್ಯತೆ ಇದೆ.

advertisement

Leave A Reply

Your email address will not be published.