Karnataka Times
Trending Stories, Viral News, Gossips & Everything in Kannada

Gold Rate: ಕಳೆದ ವಾರಕ್ಕಿಂತ ಈ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ, ಖರೀದಿಸಲು ಇದು ಬೆಸ್ಟ್ ಟೈಮ್!

advertisement

2023ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಹೀಗಾಗಿ ಜನರು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸಗಳನ್ನು ಕೊನೆಯ ತಿಂಗಳಲ್ಲಿ ಮಾಡಬೇಕು ಎಂದು ಬಯಸುವುದು ಸಹಜ ಇನ್ನು ಕೆಲವರು ಚಿನ್ನ ಖರೀದಿ ಮಾಡಿ ಈ ವರ್ಷದ ಮೆಮೊರಿ ಕಾಯ್ದುಕೊಳ್ಳಲು ಪ್ರಯತ್ನಿಸಬಹುದು. ಹಾಗೇನಾದ್ರೂ ನೀವು ಚಿನ್ನಾಭರಣ ಖರೀದಿ ಮಾಡಲು ಬಯಸಿದರೆ ಇವತ್ತಿನ ಚಿನ್ನದ ದರದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಇಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ?

22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 57,550 ದಾಖಲಾಗಿದೆ. ಅದೇ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 62,770 ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಇಂದಿನ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದಿದೆ.

ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ

advertisement

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಇಂದು ಚಿನ್ನದ ಬೆಲೆ ತುಸು ಇಳಿಕೆಯಾಗಿದ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ ಗೆ 5,775 ರೂಪಾಯಿ ದಾಖಲಾಗಿದೆ. ಅದೇ ರೀತಿ ಒಂದು ಗ್ರಾಮ 24 ಕ್ಯಾರೆಟ್ ಚಿನ್ನದ ಬೆಲೆ ರೂಪಾಯಿ 6,300. ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 4725 ರೂ. ದಾಖಲಾಗಿದೆ.

ಇಂದಿನ ಬೆಳ್ಳಿ ದರ!

ಬೆಳ್ಳಿ ದರ ಬೆಂಗಳೂರಿನಲ್ಲಿ ಪ್ರತಿ ಒಂದು ಕೆಜಿ ಬೆಳಿಗ್ಗೆ 75,500 ದಾಖಲಾಗಿವೆ. ಕಳೆದ ನಾಲ್ಕೈದು ದಿನಗಳಿಂದ ಬೆಳ್ಳಿ ಆಭರಣಗಳ ಮೇಲೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ರಾಜಧಾನಿ ನವ ದೆಹಲಿಯಲ್ಲಿ ಬೆಳ್ಳಿ ದರ 78,500 ಏರಿಕೆಯಾಗಿದೆ. ರೂಪಾಯಿ ಮೌಲ್ಯದ ಏರಿಕೆ ಹಾಗೂ ಇಳಿಕೆಯಿಂದ ಚಿನ್ನದಲ್ಲಿ ಮಾತ್ರವಲ್ಲದೆ ಬೆಳ್ಳಿ ದರದಲ್ಲಿಯೂ ಕೂಡ ವ್ಯತ್ಯಾಸ ಉಂಟಾಗಬಹುದು.

ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತದೆ. ಕೆಲವರು ಚಿನ್ನವನ್ನ ಚಿನ್ನದ ಬಿಸ್ಕಟ್ ಅಥವಾ ಕಾಯಿನ್ ರೂಪದಲ್ಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಚಿನ್ನದ ಬಾಂಡ್ ರೂಪದಲ್ಲಿ ಖರೀದಿಸಿ ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಾರೆ ಚಿನ್ನದ ಮೇಲಿನ ಹೂಡಿಕೆ ಯಾವುದೇ ರೂಪದಲ್ಲಿ ಆಗಿದ್ದರು ಕೂಡ ಅದರಿಂದ ಖರೀದಿ ಮಾಡಿರುವವರಿಗೆ ಹೆಚ್ಚು ಲಾಭವೇ ಸಿಗುತ್ತದೆ ಯಾಕೆಂದರೆ ಇದರಲ್ಲಿ ಮಧ್ಯವರ್ತಿಗಳ ಸಮಸ್ಯೆ ಇರುವುದಿಲ್ಲ ಅಥವಾ ಷೇರು ಮಾರುಕಟ್ಟೆಯ ಕುಸಿತದ ಅಪಾಯವು ಇರುವುದಿಲ್ಲ ಹಾಗಾಗಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಉತ್ತಮ ಲಾಭಗಳಿಸಿಕೊಳ್ಳಲು ಸಾಧ್ಯವಿದೆ.

advertisement

Leave A Reply

Your email address will not be published.