Karnataka Times
Trending Stories, Viral News, Gossips & Everything in Kannada

Sugarcane Crop: ಕಬ್ಬಿನ ಕೃಷಿಯಲ್ಲಿ ಈ ವಿಧಾನ ಅನುಸರಿಸಿದರೆ ಎಕರೆಗೆ 85 ಟನ್ ಇಳುವರಿ ತೆಗೆಯಬಹುದು!

advertisement

ಭಾರತದಲ್ಲಿ ಕೃಷಿಗೆ ಹೆಚ್ಚು ಮಾನ್ಯತೆ ಯನ್ನು ನೀಡುತ್ತಾರೆ. ಅದರಲ್ಲೂ ರೈತರ ಅಭಿವೃದ್ಧಿ ಆದರೆ ಮಾತ್ರ ನಾವು ಅಭಿವೃದ್ದಿಯಾದಂತೆ. ಇಂದು ಬಹತೇಕ ರೈತರು ತೆಂಗು (Coconut), , ರಾಗಿ ಭತ್ತ (Rice), ಕಬ್ಬು (Sugarcane) ಇತ್ಯಾದಿ ಕೃಷಿಗಳಿಗೆ ಅವಲಂಬಿಸಿ ಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಭತ್ತದ ಬೆಳೆಯಷ್ಟೇ ಪ್ರಾಮುಖ್ಯತೆ ಕಬ್ಬಿನ ಉತ್ಪನ್ನಕ್ಕೂ ಇದೆ.‌ ಇಂದು ನಾವು ಸೇವಿಸುವ ಬಹುತೇಕ ಸಿನಿ ತಿನಿಸಿನ ಖಾದ್ಯಗಳಿಗೆ ಕಬ್ಬಿನ ರಸದಿಂದ ಉತ್ಪತ್ತಿಯಾಗುವ ಸಕ್ಕರೆ ಪ್ರಮಾಣ ಅಗತ್ಯವಾಗಿ ಬೇಕೆ ಬೇಕು. ಆದರೆ ಕಬ್ಬಿನ ಇಳುವರಿ (Sugarcane Crop) ನಾವು ಎಣಿಸುವಷ್ಟು ಸುಲಭ ಕಾರ್ಯವಾಗಿರದೇ ಅನೇಕ ಜನರು ಈ ಕೃಷಿ ಮಾಡಲು ಹೋಗಿ ಸಾಕಷ್ಟು ಸಾಲ ಸೂಲ ಮಾಡಿ ಬಳಿಕ ಕೃಷಿಗೆ ವಿಧಾಯ ಹೇಳಿದ್ದು ಇದೆ.

ಹಾಗಾಗಿ ಕೃಷಿಯನ್ನು ಹೇಗೆಂದರೆ ಹಾಗೇ ಮಾಡದೇ ಕೆಲ ಅಗತ್ಯ ಕ್ರಮ ಅನುಸರಿಸುವುದು ಸಹ ಕಡ್ಡಾಯವಾಗಿರುತ್ತದೆ. ನೀವು ನಿತ್ಯ ಮಾಡುವ ಕೆಲ ಸಣ್ಣ ಸಣ್ಣ ಕೆಲಸ ಕಾರ್ಯಗಳೇ ನಿಮಗೇ ದೀರ್ಘಾವಧಿಯಲ್ಲಿ ಉತ್ತಮ ಇಳುವರಿ ತಂದುಕೊಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಲಿದೆ ಈ ನಿಟ್ಟಿನಲ್ಲಿ ಕಬ್ಬಿನ ಇಳುವರಿ ಹೆಚ್ಚು ಕಡಿಮೆ ಇರಲು ಕಾರಣ ಏನು ಅದು ಭಿನ್ನವಾಗಿರುವುದ್ಯಾಕೆ ಮತ್ತು ಇಳುವರಿ ಹೆಚ್ಚಿಸಲು ನೀವು ಮಾಡಬೇಕಾದ ಕೆಲಸಕಾರ್ಯದ ಬಗ್ಗೆ ಈ ಲೇಖನದ ಮೂಲಕ ಮಾಹಿತಿ ನೀಡಲಿದ್ದು ಸಂಪೂರ್ಣ ಓದಿ.

 

 

ಇಳುವರಿ ಕಡಿಮೆ ಆಗಲು ಕಾರಣ ಏನು?

advertisement

ಇಳುವರಿ ಕಡಿಮೆ ಆಗಲು ಮುಖ್ಯವಾಗಿ ಅಗತ್ಯ ಮುನ್ನೆಚ್ಚ ಕ್ರಮ ಅನುಸರಿಸದೇ ಕೃಷಿ ವಿಧಾನ ಅಳವಡಿಸುವುದನ್ನು ಕಾಣಬಹುದು. ಪ್ರದೇಶವಾರ ಮಣ್ಣಿನ ಫಲವತ್ತತೆ ವಿಭಿನ್ನವಾಗಿ ಇರಲಿದ್ದು ಎಲ್ಲ ಮಣ್ಣಿನಲ್ಲಿ ನೀವು ಕಬ್ಬು (Sugarcane) ಬೆಳೆಯಲು ಸಾಧ್ಯವಿಲ್ಲ. ನೀವು ಕೃಷಿ ವಿಧಾನದಲ್ಲಿ ಅನುಸರಿಸುವ ಕ್ರಮ ರಾಸಾಯನಿಕ ರಸಗೊಬ್ಬರ ಬಳಕೆ, ನೈಸರ್ಗಿಕ ವಿಧಾನ, ನೀರಾವರಿ ಪ್ರಮಾಣ ಎಲ್ಲವೂ ಕೂಡ ಕಬ್ಬು ಬೆಳೆಯ ಇಳುವರಿಯನ್ನು ಕಸಿಯುವಂತೆ ಮಾಡಲಿದೆ.

ಇಂದು ಕಬ್ಬು ಬೆಳೆಯುವ (Sugarcane Crop) ಎಲ್ಲ ಜಿಲ್ಲೆಗಳ ಸರಾಸರಿ ಪ್ರಮಾಣ ಹೆಚ್ಚಾಗಿದೆ, ಅದರಲ್ಲೂ ಬೆಳಗಾವಿ ಜಿಲ್ಲೆಯ ಪ್ರದೇಶದಲ್ಲಿ ರೈತರು ಒಂದು ಎಕರೆಗೆ ಸರಾಸರಿ 85 ಟನ್ ಕಬ್ಬು ಬೆಳೆದರೆ, ಮಂಡ್ಯ ಜಿಲ್ಲೆಯ ರೈತರು ಎಕರೆಗೆ ಸರಾಸರಿ 50 ಟನ್ ಕಬ್ಬು ತೆಗೆದು ಇಳುವರಿ ಪಡೆದು ಕೊಳ್ಳುತ್ತಾರೆ.

ಅಗತ್ಯ ಪ್ರಮಾಣದ ನೀರು ಬೇಕು:

ಕಬ್ಬು ಬೆಳೆಯಬೇಕಾದರೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಸಹ ಅಗತ್ಯವಾಗಿದೆ. ಈ ಬೆಳೆಯಲ್ಲಿ ಹೆಚ್ಚಿನ ಇಳುವರಿ ಕಾಣಲು ಕಾಲಕಾಲಕ್ಕೆ ಅಗತ್ಯ ಪ್ರಮಾಣದ ನೀರು ಬಿಡಬೇಕು. ಕಬ್ಬು ಒಮ್ಮೆ ಕಟಾವು ಮಾಡಿದ ನಂತರ, ಸಾವಯವ ಗೊಬ್ಬರ, ಕುರಿ ಗೊಬ್ಬರ ಎಲೆಗಳ ಗೊಬ್ಬರ ಇತ್ಯಾದಿ ನೀಡುವುದು ಮುಖ್ಯವಾಗಿದೆ.

ಬೆಳೆಯುವ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಉತ್ತಮ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಿ ಬೆಳೆಸಬೇಕು. ಕಾಲುವೆ ನೀರಿಗಿಂತಲೂ ಹನಿ ನೀರಾವರಿ ಪದ್ಧತಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಬಳಕೆ ಮಾಡಬಹುದು.

advertisement

Leave A Reply

Your email address will not be published.