Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಇದ್ದವರಿಗೆ 2024 ರಲ್ಲಿ ಬಂತು ಹೊಸ ರೂಲ್ಸ್!

advertisement

ಇತ್ತೀಚಿನ ದಿನಗಳಲ್ಲಿ ನಾವು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಗತ್ಯ ಸೇವೆಗಳಿಗಾಗಿ ನಾವು ಎಲ್ಲೆಡೆ ಆಧಾರ್ ಕಾರ್ಡ್ (Aadhaar Card) ಅನ್ನು ಬಳಸುತ್ತಲೇ ಇರುತ್ತೇವೆ, ಆದರೆ ಅದರ ಸುರಕ್ಷತೆಯ ಬಗ್ಗೆ ನಾವು ವಿಚಾರಿಸುವುದೇ ಇಲ್ಲ. ತಮ್ಮ ಆಧಾರ್ ಅನ್ನು ಎಲ್ಲಿ ಬಳಸಲಾಗಿದೆ ಅಥವಾ ತಮ್ಮ ಆಧಾರ್ ಅನ್ನು ಆಥೆಂಟಿಕೇಶನ್ ಗಾಗಿ ಯಾರು ಬಳಸಿದ್ದಾರೆಂದು ಕೆಲವೇ ಜನರಿಗೆ ತಿಳಿದಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ನೀವೇ ಕಂಡುಹಿಡಿಯಬಹುದಾಗಿದೆ.

ಯುಐಡಿಎಐ (UIDAI ) ಸೂಚಿಸಿರುವ ವಿಧಾನ ಏನು?

ನಿಮ್ಮ ಆಧಾರ್ ಕಾರ್ಡ್ (Aadhaar Card) ಎಲ್ಲಿ ಮತ್ತು ಯಾವಾಗ ಬಳಕೆಯಾಗಿದೆ ಎಂಬುದನ್ನು ತಿಳಿಯಲು ಯುಐಡಿಎಐ (UIDAI) ಸುಲಭವಾದ ಮಾರ್ಗವೊಂದನ್ನು ಸಿದ್ಧಪಡಿಸಿದೆ. ನಿಮ್ಮ ಡಾಕ್ಯುಮೆಂಟ್‌ನ ಗೌಪ್ಯತೆಯನ್ನು ನೀವೆಲ್ಲರೂ ಸಂಪೂರ್ಣವಾಗಿ ನೋಡಿಕೊಳ್ಳಬೇಕು. ಡಾಕ್ಯುಮೆಂಟ್‌ನ ಸುರಕ್ಷತೆಯ ಕೊರತೆಯಿಂದಾಗಿ, ಅನೇಕ ಬಾರಿ ಜನರು ಭಾರಿ ನಷ್ಟ ಅನುಭವಿಸುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಯುಐಡಿಎಐ ಈ ಮಾರ್ಗವನ್ನು ನೀಡಿದೆ.

ನಿಮ್ಮ ಆಧಾರ್ ಕಾರ್ಡನ್ನು ಹೀಗೆ ಸುರಕ್ಷಿತಗೊಳಿಸಿ:

 

advertisement

 

ಇದಕ್ಕಾಗಿ ನೀವು ಮೊದಲು https://resident.uidai.gov.in ವೆಬ್ಸೈಟ್ ಗೆ ಭೇಟಿ ನೀಡಬೇಕು. ಬಳಿಕ ಆಧಾರ್ ಆಥೆಂಟಿಕೇಶನ್ ಹಿಸ್ಟರಿ  ಪುಟಕ್ಕೆ ಭೇಟಿ ನೀಡಲು ಅಲ್ಲಿರುವ ಲಿಂಕ್ ಮೇಲೆ ಕ್ಲಿಕ್ಕಿಸಿ. ನಂತರ ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಹಾಗೂ ಗೌಪ್ಯ ಕೋಡ್ ಅನ್ನು ನಮೂದಿಸಿ, ‘Generate OTP’ ಮೇಲೆ ಕ್ಲಿಕ್ಕಿಸಿ.ಅಧಿಕೃತ ಮೊಬೈಲ್ ಗೆ ಒಟಿಪಿ ಬರಲಿದೆಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನೀವು ಅಧಿಕೃತವಾಗಿ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿ ಸಂಖ್ಯೆಯನ್ನು ನಮೂದಿಸಿದ ನಂತರ ನಿಮಗೆ ಸೈಟ್‌ನಲ್ಲಿ ಹಲವು ಆಯ್ಕೆಗಳು ಬರಲಿವೆ. ಇದರಲ್ಲಿ, ನೀವು ಮಾಹಿತಿಯ ಅವಧಿ ಮತ್ತು ಅವುಗಳಲ್ಲಿನ ವಹಿವಾಟುಗಳ ಸಂಖ್ಯೆಯ ವಿವರ ನೀಡಬೇಕು.

ನಿಮ್ಮ ಮಾಹಿತಿ ಸಬ್ಮಿಟ್ ಮಾಡಿದ ನಂತರ ನೀವು ಪತ್ತೆಹಚ್ಚಬಹುದುಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನೀವು ‘ಸಬ್ಮಿಟ್’ ಗುಂಡಿಯನ್ನು ಕ್ಲಿಕ್ಕಿಸಬೇಕು. Authentication ವಿನಂತಿಯ ದಿನಾಂಕ, ಸಮಯ ಮತ್ತು ಪ್ರಕಾರ ನಿಮಗೆ ತಿಳಿದು ಬರಲಿದೆ. ಆದರೆ, ನಿಮ್ಮ ಆಧಾರ ಮಾಹಿತಿಯನ್ನು ಯಾರು ಕೋರಿದ್ದಾರೆ ಎಂಬುದು ಈ ಪುಟದಲ್ಲಿ ನಿಮಗೆ ತಿಳಿಯುವುದಿಲ್ಲ.

ಯುಐಡಿಎಐನಲ್ಲಿ ಆಧಾರ್ ಹಿಸ್ಟರಿ ತಿಳಿಯುವುದು ಹೇಗೆ?

  • ಅಧಿಕೃತ ಆಧಾರ್ ಕಾರ್ಡ್ ವೆಬ್​ಸೈಟ್​ಗೆ ಹೋಗಿ: uidai.gov.in
  • ಅಲ್ಲಿ ಮೈ ಆಧಾರ್ ಎಂಬ ಆಯ್ಕೆ ಓಪನ್ ಮಾಡಿ
  • ಆಧಾರ್ ಸರ್ವಿಸಸ್ ಅಡಿಯಲ್ಲಿ ‘ಆಧಾರ್ ಅಥೆಂಟಿಕೇಶನ್ ಹಿಸ್ಟರಿ’ ಅನ್ನು ಆಯ್ಕೆ ಮಾಡಿ
  • ಹೊಸ ವಿಂಡೋ ತೆರೆದುಕೊಳ್ಳುತ್ತದೆ.
  • ಈಗ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ಹಾಕಿರಿ
  • ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ
  • ಒಟಿಪಿ ನಮೂದಿಸಿದ ಬಳಿಕ ಆಧಾರ್ ಕಾರ್ಡ್ ಹಿಸ್ಟರಿಯನ್ನು ಡೌನ್​ಲೋಡ್ ಮಾಡಬಹುದು.
  • ಆಧಾರ್ ಕಾರ್ಡ್ ಹಿಸ್ಟರಿಯಲ್ಲಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ. ಯಾವುದಾದರೂ ತಪ್ಪಾದ ದಾಖಲೆಗೆ ನಿಮ್ಮ ಅಧಾರ್ ಕಾರ್ಡ್ ಲಿಂಕ್ ಆಗಿದೆಯಾ ಗಮನಿಸಿ. ನಿಮ್ಮ ಆಧಾರ್ ಕಾರ್ಡ್ ನೀವಲ್ಲದೇ ಬೇರೆ ಯಾರಾದರೂ ಬಳಸಿದ್ದಾರಾ ನೋಡಿ. ಇಂಥ ವ್ಯತ್ಯಾಸ ಕಂಡು ಬಂದರೆ ಟೋಲ್ ಫ್ರೀ ನಂಬರ್ 1947 ಅಥವಾ [email protected] ಇಮೇಲ್ ಮೂಲಕ ಯುಐಡಿಎಐ ಅನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.

advertisement

Leave A Reply

Your email address will not be published.