Karnataka Times
Trending Stories, Viral News, Gossips & Everything in Kannada

PM Awas Yojana: ಸ್ವಂತ ಮನೆ ಕಟ್ಟುವ ಯೋಚನೆ ಇದ್ದರೆ ನಿಮಗಿದೆ ಈ ಗುಡ್ ನ್ಯೂಸ್, ಸಿಗಲಿದೆ 3.5 ಲಕ್ಷ ಸಹಾಯಧನ!

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ಸ್ವಂತ ವಾದ ಮನೆಕಟ್ಟಬೇಕು ಎಂಬ ಆಸೆ ಇದ್ದೆ ಇರುತ್ತದೆ. ಆದರೆ ಇಂದಿನ ಬೆಲೆ ಏರಿಕೆ ಯಿಂದಾಗಿ ಮನೆ ಕಟ್ಟಲು ಬೇಕಾದ ವಸ್ತುಗಳಿಗೂ ಬಹಳಷ್ಟು ಬೆಲೆ ಏರಿಕೆ ಯಾಗಿದೆ. ಹೀಗಾಗಿ ಬಡ ವರ್ಗದ ಜನತೆಗೆ ಸ್ವಂತ ಮನೆ ಕಟ್ಟುವುದು ಬಹಳಷ್ಟು ಕಷ್ಟ ವಾಗಿದೆ. ಈಗಾಗಲೇ ಬಡ ವರ್ಗದ ಜನತೆಗೆ ಪ್ರಧಾನ ಮಂತ್ರಿ ಆವಾಸ್ (PM Awas Yojana) ಆರಂಭ ವಾಗಿದ್ದು ಹೆಚ್ಚು ಜನರು ಇದರ ಸದುಪಯೋಗ ಪಡೆದು ಕೊಂಡಿದ್ದಾರೆ. ಈ ಯೋಜನೆಯ ಮೂಲಕ ಗೃಹ ನಿರ್ಮಾಣ ಮಾಡುವ ಕನಸು ನನಸು ಮಾಡಬಹುದು. ಸರ್ಕಾರದಿಂದ ವಸತಿ ನಿರ್ಮಾಣಕ್ಕೆ ಸೌಲಭ್ಯ ಸಿಗುವುದರ ಜೊತೆಗೆ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Housing Scheme) ಮೂಲಕ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ.

PM Awas Yojana:

 

 

2022 ರ ಸಂಧರ್ಭದಲ್ಲಿ ಎಲ್ಲ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಆರಂಭ ಮಾಡಿದೆ. ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯವಾಗಲಿದ್ದು ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

advertisement

ಸಹಾಯಧನ ಎಷ್ಟು?

ಸ್ವಂತ ಮನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 3.5 ಲಕ್ಷ ಮೊತ್ತ ದೊರೆತರೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳನ್ನು ಸಹಾಯಧನ ಮೂಲಕ ನೀಡಲಾಗುತ್ತಿದ್ದು ಬಡ ವರ್ಗದ ಜನತೆಗೆ ಬಹಳಷ್ಟು ಸಹಾಯಕವಾಗಿದೆ. ಅದೇ ರೀತಿ ಈ ಯೋಜನೆಯ ಮೂಲಕ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ರೂ.2.67 ಲಕ್ಷದವರೆಗೆ ಸಾಲ ಒದಗಿಸಲಾಗುತ್ತದೆ, ಅವರ ಆದಾಯ ವರ್ಗದ ಆಧಾರದ ಮೇಲೆ ನಿರ್ದಿಷ್ಟತೆಯನ್ನು ನಿರ್ಧರಿಸಲಾಗುತ್ತದೆ.

ಅರ್ಜಿ ಸಲ್ಲಿಸಿ:

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಮೊದಲಿಗೆ https://ashraya.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅವಾಸ್ ಯೋಜನೆ (Awas Yojana) ಯ ಅರ್ಜಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು ಕೇಂದ್ರ ಸರ್ಕಾರದ 2011ರ ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಪಟ್ಟಿಯಲ್ಲಿ ಹೆಸರಿದ್ದರೆ ಅರ್ಜಿ ಹಾಕಬಹುದು‌

advertisement

Leave A Reply

Your email address will not be published.