Karnataka Times
Trending Stories, Viral News, Gossips & Everything in Kannada

CM Siddaramaiah: ರಾಜ್ಯದ ಎಲ್ಲಾ ಪಂಚಾಯತ್ ಗಳಲ್ಲೂ ಈ ಸೇವೆ ದೊರೆಯಲಿದೆ! ಸಿಎಂ ಹೊಸ ಆದೇಶ

advertisement

ಮಗು ಹುಟ್ಟಿದ್ದಿನಿಂದಲೇ ಮಗುವಿನ ನೆಲೆ ಬಗ್ಗೆ ಜನನ ಪ್ರಮಾಣ ಪತ್ರ (Birth Certificate) ಪಡೆಯಲಾಗುವುದು. ಈ ಜನನ ಪ್ರಮಾಣ ಪತ್ರ ಅನೇಕ ಇತರ ಪ್ರಮಾಣ ಪತ್ರ ಪಡೆಯಲು ಮೂಲ ಪ್ರತಿಯಾಗಿ ಕೂಡ ಕಾರ್ಯ ನಿರ್ವಹಿಸಲಿದೆ. ಹಾಗಾಗಿ ಇದು ಬಹಳ‌ ಮುಖ್ಯ ಎನ್ನಬಹುದು. ಅದೇ ರೀತಿ ವ್ಯಕ್ತಿ ಮರಣ ಹೊಂದಿದ್ದ ಬಳಿಕ ಅದಕ್ಕೆ ಕೂಡ ದಾಖಲೆ ನೀಡಬೇಕು ಆ ದಾಖಲೆಗೆ ಮರಣ ಪತ್ರ ಎಂದು ಹೇಳುತ್ತಾರೆ. ಈ ಮರಣ ಪ್ರಮಾಣ ಪತ್ರ (Death Certificate) ಇಲ್ಲದೆ ಇದ್ದರೆ ಆಸ್ತಿ ಹಂಚಿಕೆ ಮತ್ತು ಇತರ ವಿಚಾರಗಳಿಗೆ ಸಮಸ್ಯೆ ಆಗಲಿದೆ ಹಾಗಾಗಿ ಇದನ್ನು ಪಡೆಯುವುದು ಕೂಡ ಬಹಳ‌ಮುಖ್ಯ.

WhatsApp Join Now
Telegram Join Now

ಜನನ ಮತ್ತು ಮರಣ ಸರ್ಟಿ ಫಿಕೇಟ್ ಪಡೆಯಲು ಕಚೇರಿಗೆ ಅಲೆಯಬೇಕಿತ್ತು. ಅದು ಅನೇಕ ಸಲ ಪ್ರಮಾಣ ಪತ್ರ ಬರುವುದು ಕೂಡ ವಿಳಂಬ ಆಗಲಿದೆ. ಹಾಗಾಗಿ ಇನ್ನು ಮುಂದೆ ಜನನ ಮತ್ತು ಮರಣ ಸರ್ಟಿಫಿಕೇಟ್ ಪಡೆಯಬೇಕು ಎಂದು ತಾಲೂಕು ಆಫೀಸ್ ಸುತ್ತಾಡುವ ಅಗತ್ಯ ಇಲ್ಲ ಸರಕಾರ ಕೆಲವು ನಿರ್ದೇಶನ ನೀಡಿದ್ದು ಅದರ ಪ್ರಕಾರ ಇನ್ನು ಮುಂದೆ ಜನನ ಮತ್ತು ಮರಣ ಸರ್ಟಿಫಿಕೇಟ್ ಪಡೆಯುವ ಪ್ರಕ್ರಿಯೆ ಬಹಳ ಸುಲಭ ಆಗಲಿದೆ ಎಂದು ಹೇಳಬಹುದು.

ಗ್ರಾಮೀಣ ಜನತೆಗೆ ಶುಭ ಸುದ್ದಿ:

 

Image Source: Scroll.in

 

advertisement

ಗ್ರಾಮ ಪಂಚಾಯತ್ (Gram Panchayat) ನಲ್ಲಿ ಜನನ ಮತ್ತು ‌ಮರಣ ಸರ್ಟಿಫಿಕೇಟ್ ನೀಡಲು ಡಿಜಿಟಲ್ ದಾಖಲೆ ನೀಡಲು ಸರಕಾರ ಕ್ರಮ ಕೈಗೊಂಡಿದ್ದು ಇದು ರಾಜ್ಯ ಸರಕಾರದಿಂದ ಕೈ ಗೊಂಡ ಒಂದು ಮಹತ್ವದ ಯೋಜನೆ ಎಂದು ಹೇಳಬಹುದು. ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗ ಬೇಕು ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ (Gram Panchayat) ಮಟ್ಟದಲ್ಲಿ ಜನನ, ಮರಣ ಪ್ರಮಾಣ ಪತ್ರವನ್ನು ಡಿಜಿಟಲ್ ದಾಖಲೆ ಮೂಲಕ ನೀಡಲು ಸರಕಾರ ನಿರ್ಧರಿಸಿದೆ.

ಗ್ರಾಮೀಣ ಭಾಗದ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವುದು ಬಹಳ ಸುಲಭ ಆಗಲಿದೆ. ರಾಜ್ಯ ಸರಕಾರದ ಈ ಒಂದು ಮಹತ್ವದ ಕ್ರಮದಿಂದ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಡಿಜಿಟಲ್ ಸ್ಪರ್ಷ ಸಿಕ್ಕಂತೆ ಆಗಲಿದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಪಂಚಾಯತ್ (Panchayat) ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಡಿಜಿಟಲ್ ದಾಖಲೆಗಳನ್ನು ಇನ್ನು ಮುಂದೆ ಪಡೆಯಬಹುದಾಗಿದೆ.

ಸುಲಭ ಪ್ರಕ್ರಿಯೆ:

ಮಗು ಜನಿಸಿದ್ದ ಬಳಿಕ ಆಧಾರ್ ಕಾರ್ಡ್ (Aadhaar Card) ಸಿಗುವಂತೆ ಇ ಜನ್ಮ ಪೋರ್ಟಲ್ ನಲ್ಲಿ ಒಂದು ಸಂಖ್ಯೆ ನೀಡಲಾಗುವುದು. ಮಗು ಜನಿಸಿದ್ದ ಬಳಿಕ ಗ್ರಾಮ ಪಂಚಾಯತ್ ಗೆ ಹೋಗಿ ಈ ಮಾಹಿತಿ ನೀಡಬೇಕು. ಅದನ್ನು ಗ್ರಾಮ ಪಂಚಾಯತ್ ನಲ್ಲಿ ಇರುವ ಅಧಿಕಾರಿಗಳು ಆ ಬಳಿಕ ಇ ಜನ್ಮ ಪೋರ್ಟಲ್ ನಲ್ಲಿ ಮಗುವಿನ ಜನನ, ತಂದೆ ತಾಯಿ ಹೆಸರು, ಅವರ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card) ಎಲ್ಲ ಮಾಹಿತಿ ಅಪ್ಲೋಡ್ ಮಾಡುತ್ತಾರೆ. ಅದಕ್ಕೆ ಒಂದು ಸರ್ಟಿಫಿಕೇಟ್ ನಂಬರ್ ಎಂದು ಸಿಗಲಿದೆ ಇದರ ಮೂಲಕ ನೀವು ಎಲ್ಲಿ ಬೇಕಾದರು ಅದೆ ಸಂಖ್ಯೆ ನೀಡಿ ಆನ್ಲೈನ್ ದಾಖಲೆ ಕೂಡ ಪಡೆಯಬಹುದು.

advertisement

Leave A Reply

Your email address will not be published.