Karnataka Times
Trending Stories, Viral News, Gossips & Everything in Kannada

State Govt: ಜನರ ಅನುಕೂಲಕ್ಕಾಗಿ ಸಿದ್ದರಾಮಯ್ಯ ಹೊಸ ಘೋಷಣೆ! ಬೆಳ್ಳಂಬೆಳಿಗ್ಗೆ ಆದೇಶ

advertisement

ರಾಜ್ಯ ಸರ್ಕಾರ (State Govt) ವು ಆಡಳಿತಕ್ಕೆ ಬಂದಾಗಿನಿಂದ ಹಲವಾರು ರೀತಿಯಾದಂತಹ ಘೋಷಣೆಗಳನ್ನು ಮತ್ತು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮತ್ತು ಅದರಿಂದ ಅಭಿವೃದ್ಧಿಯ ಕಡೆಗೆ ರಾಜ್ಯವನ್ನು ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ರೀತಿಯಾದ ಕಾರ್ಯಕ್ರಮಗಳನ್ನು ಕೂಡ ರಾಜ್ಯ ಸರ್ಕಾರವು ಈಗಾಗಲೇ ಜಾರಿಗೆ ತಂದಿದೆ. ಇನ್ನು ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ಮತ್ತು ಘೋಷಣೆಗಳನ್ನು ಮಂಡನೆ ಮಾಡುತ್ತಿರುವ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಹೊಸ ಯೋಜನೆ ಒಂದನ್ನು ಅನುಷ್ಠಾನಗೊಳಿಸಿದೆ.

ರಾಜ್ಯ ಸರ್ಕಾರ (State Govt)ದ ಹೊಸ ಘೋಷಣೆ?

ಪ್ರತಿಯೊಂದು ಮಗು ಜನಿಸಿದ ನಂತರ ಮತ್ತು ಮರಣ ಹೊಂದಿದ ನಂತರವೂ ಅದರ ಕುರಿತಾದಂತಹ ಲೆಕ್ಕದ ನೋಂದಣಿಯನ್ನು ಮಾಡಲಾಗಿರುತ್ತದೆ ಇನ್ನು ಈ ರೀತಿಯಾಗಿ ನೋಂದಣಿ ಮಾಡುವ ಕೆಲಸವನ್ನು ಗ್ರಾಮದ ಲೆಕ್ಕಿಗರು (Village Accountant) ನೋಡಿಕೊಳ್ಳುತ್ತಾ ಇರುತ್ತಾರೆ. ಇನ್ನು ಈ ರೀತಿಯಾಗಿ ನೋಂದಣಿ ಆದ ಪ್ರಮಾಣ ಪತ್ರಗಳನ್ನು ಗ್ರಾಮ ಲೆಕ್ಕಿಗರ ಮೂಲಕ ಪಡೆದುಕೊಳ್ಳಬೇಕಾಗುತ್ತದೆ.

ಇನ್ನು ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಬಾರಿಯೂ ವರ್ಗಾವಣೆ ಆದಾಗ ಹಲವಾರು ರೀತಿಯಾದಂತಹ ತೊಂದರೆಗಳನ್ನು ಗ್ರಾಮದಲ್ಲಿ ವಾಸಿಸುವಂತಹ ಜನರು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಇನ್ನು ಈ ರೀತಿಯಾದಂತಹ ಅನಾನುಕೂಲಗಳನ್ನು ತಪ್ಪಿಸಿ ಮತ್ತ ಹೊಸ ರೀತಿಯಾದಂತಹ ಅನುಕೂಲವನ್ನು ಒದಗಿಸಲು ರಾಜ್ಯ ಸರ್ಕಾರವು ಹೊಸ ಘೋಷಣೆ ಯೊಂದನ್ನು ನೀಡಿದ್ದು, ಈ ಘೋಷಣೆ ಅಡಿಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದೆ.

advertisement

Image Source: Scroll.in

ಘೋಷಣೆಯ ಹೈಲೈಟ್ಸ್ :

ಇನ್ನು ನಮಗೆಲ್ಲರಿಗೂ ತಿಳಿದಿರುವಂತೆ ಸಂವಿಧಾನದ 73 ನೇ ತಿದ್ದುಪಡಿಯ ಅಡಿಯಲ್ಲಿ ಪಂಚಾಯತ್ ರಾಜ್ (Panchayat Raj) ವ್ಯವಸ್ಥೆಯನ್ನು ಜಾರಿ ಮಾಡಲಾಯಿತು. ಇನ್ನು ಈ ರೀತಿಯಾಗಿ ತಿದ್ದುಪಡಿ ಮಾಡಿ 30 ವರ್ಷಗಳು ಕಳೆದು ಹೋಗಿವೆ. ಈ ತಿದ್ದುಪಡಿಯ ನೆನಪಿನಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗಳನ್ನು ಉಪನೋಂದಣಾಧಿಕಾರಿ ಆಗಿ ರಾಜ್ಯ ಸರ್ಕಾರ (State Govt) ವು ನೇಮಿಸಿದೆ. ಈ ರೀತಿಯಾದ ತೀರ್ಮಾನದಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮತ್ತಷ್ಟು ಅನುಕೂಲವನ್ನು ರಾಜ್ಯ ಸರ್ಕಾರವು ಕಲ್ಪಿಸಲು ಮುಂದಾಗಿದೆ.

ಇನ್ನು ಮುಂದೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಿಗೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೋಂದಣಿ ಮಾಡಿಕೊಳ್ಳುವಂತಹ ಅಧಿಕಾರವನ್ನು ರಾಜ್ಯ ಸರ್ಕಾರವು ನೀಡಿದೆ. ಇನ್ನು ಗ್ರಾಮೀಣ ಭಾಗದಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದ್ದು, 73ನೇ ಸೇವೆಯಾಗಿ ಈ ಸೇವೆಯನ್ನು ಒಂದೇ ಸೂರಿನಡಿ ಒದಗಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಇನ್ನು ಇದರಿಂದ ಎಲ್ಲ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರಿಗೂ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಸುಲಭವಾಗಿ ಮತ್ತು ಅನುಕೂಲಕರವಾಗಿ ದೊರಕಲಿದೆ.

advertisement

Leave A Reply

Your email address will not be published.