Karnataka Times
Trending Stories, Viral News, Gossips & Everything in Kannada

PM Mudra Yojana: ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ವ್ಯಾಪರ ಮಾಡಲು ನಿಮಗೆ ಸಿಗುತ್ತೆ 10 ಲಕ್ಷ ದವರೆಗೆ ಸಾಲ ಸೌಲಭ್ಯ!

advertisement

ಇಂದು ರಾಜ್ಯ ಮತ್ತು ಕೇಂದ್ರ ಸರಕಾರ ದೇಶದ ಅಭಿವೃದ್ಧಿ ಗಾಗಿ ಹಲವಾರು ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಲೆ ಬಂದಿದೆ. ಅದರಲ್ಲೂ ವ್ಯಾಪಾರ ಮಾಡುವ ಯುವಕರನ್ನು, ಕೃಷಿಕರನ್ನು, ಕಾರ್ಮಿಕರನ್ನು ಪ್ರೋತ್ಸಾಹ ಮಾಡುತ್ತಲೆ ಬಂದಿದ್ದು ಇದೀಗ ಕೇಂದ್ರ ಸರಕಾರವು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಆರಂಭಿಸಲು ಯುವಕರಿಗೆ ಪ್ರೋತ್ಸಾಹವನ್ನ ನೀಡುತ್ತಿವೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಹೌದು ಹೊಸ ಉದ್ಯೋಗ ಆರಂಭಿಸಲು ಹೆಚ್ಚಿನ‌ ಸಾಲವನ್ನು ಒದಗಿಸುವ ಯೋಜನೆಯೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PM Mudra Yojana). ಈ ಯೋಜನೆ ಕೃಷಿಯೇತರ ಕ್ಷೇತ್ರದಲ್ಲಿ,ವ್ಯಾಪಾರ ದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವವರಿಗೆ ಸಾಲ ನೀಡುವ ಮೂಲಕ ಪ್ರೋತ್ಸಾಹಿಸುವ ಮುಖ್ಯ ಉದ್ದೇಶವಾಗಿದೆ.ಅಲ್ಲದೆ ಈ ಸಾಲವನ್ನು ಪಡೆಯುವಾಗ ಯಾವುದೇ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಜತೆಗೆ ಯಾವುದೇ ರೀತಿಯ ಆಸ್ತಿಯನ್ನು ಅಡಮಾನ ಇಡಬೇಕಾದ ಸಂದರ್ಭದ ಕೂಡ ಇಲ್ಲ.

ಎಷ್ಟು ಸಾಲ ದೊರೆಯಲಿದೆ?

ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭ ಮಾಡಿದ್ದು ಯಾವುದೇ ವ್ಯಾಪಾರ,ಉದ್ಯೋಗ ವ್ಯವಹಾರ,ಕೃಷಿ ‌ಇತ್ಯಾದಿ ಕ್ಷೇತ್ರಗಳಲ್ಲಿ ಸಾಲವನ್ನ ಪಡೆಯಲು ಅವಕಾಶ ಇದೆ.ಇದರ ಮೂಲಕ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯಲಿದೆ.

advertisement

ಅರ್ಜಿ ಸಲ್ಲಿಸಬಹುದು

ಈ ಮುದ್ರಾ ಸಾಲವನ್ನು ಬ್ಯಾಂಕ್ ,ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ನೀಡಲಿದ್ದು ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.ಈ ಯೋಜನೆಯಡಿಯಲ್ಲಿ 3 ವರ್ಗಗಳ ಸಾಲಗಳು ದೊರಕಲಿದ್ದು ಮೊದಲ ವರ್ಗ ಶಿಶು ಸಾಲ ಯೋಜನೆ, ಎರಡನೆಯದು ಕಿಶೋರ್ ಸಾಲ ಮತ್ತು ತರುಣ್ ಸಾಲ ಯೋಜನೆಯ ಸೌಲಭ್ಯ ಸಿಗಲಿದೆ. ಪಿಎಂ ಮುದ್ರಾ ಸಾಲಕ್ಕಾಗಿ ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ‌ಇದ್ದು https://www.udyamimitra.in/ ಇಲ್ಲಿ ಅರ್ಜಿ‌ ಸಲ್ಲಿಸಬಹುದಾಗಿದೆ.

ಈ ದಾಖಲೆ ಬೇಕು

ಈ ಯೋಜನೆಗೆ 24 ವರ್ಷದಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಈ ಯೋಜನೆಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ಐಡಿ ಮುಂತಾದ ದಾಖಲೆಗಳು ಮುಖ್ಯವಾಗಿ ಬೇಕು.

advertisement

Leave A Reply

Your email address will not be published.