Karnataka Times
Trending Stories, Viral News, Gossips & Everything in Kannada

KSRTC: ಕೊನೆಗೂ KSRTC ಯಿಂದ ಕಹಿಸುದ್ದಿ! ಸಚಿವರ ಸುಳಿವು, ಮಹತ್ವದ ಮಾಹಿತಿ

advertisement

ರಾಜ್ಯದಲ್ಲಿ ಶಕ್ತಿ ಯೋಜನೆ ಇಂದು ಬಹಳಷ್ಟು ಸುದ್ದಿ ಯಲ್ಲಿದೆ ಎಂದು ಹೇಳಬಹುದು.‌ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತ ಬಸ್ ಪ್ರಯಾಣ (Free Bus Travel) ಮಾಡುತ್ತಿದ್ದಾರೆ. ಹೌದು ಆಧಾರ್ ಕಾರ್ಡ್ ಅನ್ನು ‌ತೋರಿಸುವ ಮೂಲಕ ಉಚಿತ ಪ್ರಯಾಣ ಮಾಡುತ್ತಿದ್ದು ಈ ಸೌಲಭ್ಯ ಮಹಿಳೆಯರಿಗೆ ಬಹಳಷ್ಟು ಉಪಯೋಗ ವಾಗ್ತ ಇದೆ. ಆದರೆ ಈಗ ಚರ್ಚೆ ಯಾಗುತ್ತಿರುವ ವಿಚಾರ ಎಂದರೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಇದರ ಜೊತೆ ಕೆ ಎಸ್ ಅರ್ ಟಿಸಿ ಬಸ್ ದರವೂ (KSRTC Bus Price) ಹೆಚ್ಚಳ ವಾಗಲಿದೆ ಎನ್ನುವ ಸುದ್ದಿ, ಹೌದು ತೈಲ ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ (Diesel Price) ಹೆಚ್ಚಳವಾಗಿದೆ. ಹೀಗಾಗಿ‌ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದ್ರೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎನ್ನುವ ಸೂಚನೆ ಕೂಡ ಸಚಿವರು ನೀಡಿದ್ದಾರೆ.

WhatsApp Join Now
Telegram Join Now

ಈಗಾಗಲೇ ಬಂದಿರುವ ಮಾಹಿತಿ ಮೂಲಕ ಸುಮಾರು ಶೇ.25 ರಷ್ಟು ದರ ಹೆಚ್ಚಳ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಕೂಡ ಬಂದಿದೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ 4 ಸಾರಿಗೆ ಬಸ್‌ ನಿಗಮಗಳು ಟಿಕೆಟ್‌ ದರ ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಈ ಬಗ್ಗೆ ಶೇ. 25 ರಷ್ಟು ಏರಿಕೆ ಬದಲು ಕನಿಷ್ಠ ಶೇ. 10 ರಷ್ಟು, ಗರಿಷ್ಠ ಶೇ. 12 ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ತಿಳಿದು ಬಂದಿದೆ.

ಪೆಟ್ರೋಲ್‌ ನ ಮಾರಾಟ ತೆರಿಗೆಯನ್ನು ಪ್ರತಿ ಲೀಟರ್‌ಗೆ ಶೇ 25.92ರಿಂದ ಶೇ 29.84ಕ್ಕೆ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ 14.34ರಿಂದ ಶೇ 18.44ಕ್ಕೆ ಹೆಚ್ಚು ಮಾಡಿದೆ.‌ ಹೀಗಾಗಿ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ‌ 3 ರೂ. ಹೆಚ್ಚಳವಾಗಿದೆ. ಹಾಗಾಗಿ ಪ್ರಯಾಣದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎನ್ನಲಾಗಿದೆ.‌ ನಿಗಮಕ್ಕೆ ಆದಾಯ ಸಂಗ್ರಹ ಮಾಡಲು ಬೇರೆ ಯಾವುದೇ ಮಾರ್ಗವಿಲ್ಲ ಎನ್ನುವ ಸೂಚನೆ ಕೂಡ ಸಿಕ್ಕಿದೆ.

 

advertisement

Image Source: Onmanorama

 

ಇದೀಗ ಕೆ ಎಸ್ ಆರ್ ಟಿಸಿ ಬಸ್ ಟಿಕೆಟ್ ದರ (KSRTC Bus Ticket Price) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನುವುದನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಸುಳಿವು ನೀಡಿದ್ದಾರೆ. ಈಗಾಗಲೇ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ, ಕಲ್ಯಾಣ ಸಾರಿಗೆ ಸಂಸ್ಥೆ ಕೆಲವು ‌ ವರ್ಷಗಳಿಂದ ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ.ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳ ಬಹುದು.

ಈಗ ಡೀಸೆಲ್‌ ದರವು ಹೆಚ್ಚಳ‌ ಆಗಿರುವುದರಿಂದ ಸಾರಿಗೆ‌ನಿಗಮಕ್ಕೆ ನಿಭಾಯಿಸಲು ಕಷ್ಟವೇ, ನಿರ್ವಹಣಾ ವೆಚ್ಚ,ಹೊಸ ಬಸ್‌ಗಳ ಖರೀದಿ ಸಿಬ್ಬಂದಿ ಸಂಬಳ ಬಗ್ಗೆ ಖರ್ಚು ವೆಚ್ಚ ವು ಇರಲಿದೆ.ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿದಿನ 6.2 ಲಕ್ಷ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಈಗ ಡೀಸೆಲ್ ದರ ಏರಿಕೆಯಾದ ಕಾರಣ ನಿಗಮಕ್ಕೆ ಹೆಚ್ಚುವರಿಯಾಗಿ ಖರ್ಚು ಇರಲಿದೆ.ಹಾಗಾಗಿ ಬೆಲೆ ಏರಿಕೆ ಬೆನ್ನಲ್ಲೇ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಇಲಾಖೆಯೊಂದಿಗೆ ಚರ್ಚೆ ಮಾಡಬೇಕು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.ಇದರ ಜೊತೆ ಸಾರಿಗೆ ನಿಗಮದ ಸಚಿವರು ಸೂಚನೆ ನೀಡಿದ್ದಾರೆ. ಹಾಗಾಗಿ ಬಸ್ ದರ ಹೆಚ್ಚಾಗಲಿದೆಯಾ ಎಂದು ಕಾದು ನೋಡ್ಬೆಕು.

advertisement

Leave A Reply

Your email address will not be published.