Karnataka Times
Trending Stories, Viral News, Gossips & Everything in Kannada

FASTag: ಇಂತಹವರ ಫಾಸ್ಟ್‌ಟ್ಯಾಗ್ ಫೆಬ್ರುವರಿ 1ರಿಂದ ರದ್ದು, ಇಲ್ಲಿದೆ ಕಾರಣ

advertisement

ಫಾಸ್ಟ್‌ಟ್ಯಾಗ್ ಬಳಕೆದಾರರು ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್ ಎಂಬ ನೀತಿಯನ್ನು ಇಂದು ಅನುಸರಿಸಬೇಕಿರುವುದು ಕಡ್ಡಾಯವಾಗಿದೆ.‌ ಇಂದು ವಾಹನಗಳ ದಟ್ಟಣೆಯು ದಿನದಿಂದ ಹೆಚ್ಚಳವಾಗಿದ್ದು ನಿಯಮಗಳು ಕೂಡ ಕಟ್ಟುನಿಟ್ಟಾಗಿದೆ. ಇದೀಗ ಜನವರಿ 31ರ ಒಳಗೆ ನಿಮ್ಮ ವಾಹನದ ಫಾಸ್ಟ್‌ ಟ್ಯಾಗ್‌ನ ಕೆವೈಸಿ ಪೂರ್ಣ ಆಗದೆ ಇದ್ದರೆ ಫಾಸ್ಟ್‌ ಟ್ಯಾಗ್‌ಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ನಿಮ್ಮ ಫಾಸ್ಟ್ಯಾಗ್ KYC ಮಾಡಿಲ್ಲದಿದ್ದರೆ, ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯ ಗೊಳ್ಳುತ್ತದೆ. NHAI ಇದೀಗ ಫಾಸ್ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದ್ದು KYC ಮಾಡುವುದು ಕಡ್ಡಾಯ ಎಂದಿದೆ. ಜನವರಿ 31 ರ ಮೊದಲು ಫಾಸ್ಟ್ಯಾಗ್‌ನ KYC ಅನ್ನು ಪೂರ್ಣಗೊಳಿಸಲು ಸಮಯ ನೀಡಿದ್ದು ವಿಫಲವಾದರೆ ನಿಮ್ಮ ಫಾಸ್ಟ್‌ಟ್ಯಾಗ್ ಸಕ್ರಿಯ ಇರುವುದಿಲ್ಲ. ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಉಳಿದಿದ್ದರೂ ಕೂಡ KYC ಅನ್ನು ಪೂರ್ಣಗೊಳಿಸದಿದ್ದರೆ, ಜನವರಿ 31, ರ ನಂತರ ನಿಷ್ಕ್ರಿಯ ಗೊಳಿಸಲಾಗುತ್ತದೆ.

ಯಾಕಾಗಿ ಕಡ್ಡಾಯ?

ಸರ್ಕಾರವು ಫೆಬ್ರವರಿ 15, 2001 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯ ಮಾಡಿದೆ. ನಂತರದಲ್ಲಿ ಟೋಲ್ ಪ್ಲಾಜಾ ಮೂಲಕ ಸಂಚಾರ ಮಾಡುವ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯ ಮಾಡಿದೆ. ಇದರ ಮುಖ್ಯ ಪ್ರಯೋಜನವೆಂದರೆ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋಗುವಾಗ ನೀವು ಹೆಚ್ಚು ಸಮಯದ ವರೆಗೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನೀವು ಸುಲಭವಾಗಿ ನಿಲ್ಲಿಸದೆ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಲು ಅವಕಾಶ ಇದೆ.  ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಮೂಲಕ ಟೋಲ್ ಬೂತ್‌ ನಲ್ಲಿ ಸ್ಕ್ಯಾನರ್‌ಗಳ ಮೂಲಕ ಫಾಸ್ಟ್‌ಟ್ಯಾಗ್ (FASTag) ಬ್ಯಾಲೆನ್ಸ್‌ನಿಂದ ಟೋಲ್ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ‌.

advertisement

ಅನಗತ್ಯ ವಿಳಂಬ ನಿರ್ವಹಣೆ.

ಟೋಲ್ ಪ್ಲಾಜಾಗಳಲ್ಲಿ ಆಗುವ ಅನಗತ್ಯ ವಿಳಂಬಗಳು ಸಹ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಈ ನಿಯಮ ಕಡ್ಡಾಯ ಮಾಡಿದೆ. ವಾಹನ ಚಾಲಕರು, ತಮ್ಮ ಫಾಸ್ಟ್‌ ಟ್ಯಾಗ್ ಮಾಹಿತಿ ಪಡೆಯಲು ಹತ್ತಿರದ ಬ್ಯಾಂಕ್‌ ಸಂಪರ್ಕಿಸಿ ತಮ್ಮ ಪಾಸ್ಟ್‌ ಟ್ಯಾಗ್‌ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್‌ಗಳಲ್ಲೂ ವಿಚಾರಣೆ ಮಾಡಬಹುದು. ಅಷ್ಟೆ ಅಲ್ಲದೆ ಈ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ fastag.ihmcl.com ಗೆ ಭೇಟಿ ನೀಡಿ ತಿಳಿದು ಕೊಳ್ಳಬಹುದು.

ಈ ದಾಖಲಾತಿ ಅಗತ್ಯ

  • ವೋಟರ್ ಐಡಿ (Voter ID)
  • ಚಾಲನಾ ಪರವಾನಿಗೆ
  • ಪಾನ್ ಕಾರ್ಡ್
  • ಆಧಾರ್ ಕಾರ್ಡ್
  • ವಾಹನ ನೊಂದಣಿ ಪತ್ರ ಇತ್ಯಾದಿ.

advertisement

Leave A Reply

Your email address will not be published.