Karnataka Times
Trending Stories, Viral News, Gossips & Everything in Kannada

Tockenization: ಕ್ರೆಡಿಟ್‌ ಕಾರ್ಡ್ ಅಥವಾ ಡೆಬಿಟ್‌ ಕಾರ್ಡ್ ಟೋಕನೈಜೇಶನ್‌ ಮಾಡಿಸುವುದರಿಂದ ಆಗುವ ಲಾಭವೇನು?

advertisement

ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಬಳಸೋದು ಈಗ ಸುರಕ್ಷಿತ ಹಾಗೂ ಹೆಚ್ಚು ಅನುಕೂಲಕರವಾಗಿದೆ. ನಿಮ್ಮ ಕಾರ್ಡ್‌ಗಳಿಗೆ ಟೋಕನ್‌ಗಳನ್ನು ಕ್ರಿಯೇಟ್‌ ಮಾಡಲು ಬ್ಯಾಂಕ್‌ಗಳಿಗೆ ಆರ್.ಬಿ.ಐ. ಅನುಮತಿ ನೀಡಿದ್ದು ಮತ್ತಷ್ಟು ಅನುಕೂಲಕರ ವಾತಾವರಣ ನಿರ್ಮಿಸಿದೆ. ಈಗ, ಕಾರ್ಡ್‌ಗಳಿಗೆ ಟೋಕನೈಸೇಷನ್‌ ಅನ್ನು ಇ-ವಾಣಿಜ್ಯ ಜಾಲತಾಣಗಳಲ್ಲಿ ಮಾತ್ರವೇ ಮಾಡಬಹುದಾಗಿದೆ. ಹಾಗಿದ್ದರೆ ಈ ಕಾರ್ಡ್‌ ಟೋಕನೈಸೇಷನ್‌ ಎಂದರೆ ಏನು? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಿದೆ.

ಟೋಕನೈಸೇಷನ್‌ ಎಂದರೆ ಏನು?

ಕಾರ್ಡ್‌ ಟೋಕನೈಸೇಷನ್‌ (Tockenization) ಅಂದ್ರೆ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳ ಸೂಕ್ಷ್ಮ ಮಾಹಿತಿಗಳನ್ನು ಒಂದು ವಿಶಿಷ್ಟವಾದ ಗುರುತು ಪತ್ತೆ ಹಚ್ಚುವ ಸಾಧನ ಅಥವಾ ಟೋಕನ್‌ಗೆ ಬದಲಾಯಿಸುವ ಪ್ರಕ್ರಿಯೆ. ಎಲ್ಲಾ ವ್ಯವಹಾರಗಳಿಗೂ ಈ ಟೋಕನ್‌ ಬಳಸಲಾಗುತ್ತದೆ. ಇದು ಖಾತೆಗೆ ಅನಧಿಕೃತ ಪ್ರವೇಶ ಅಥವಾ ವಂಚನೆಯ ಅಪಾಯವನ್ನು ತಗ್ಗಿಸುತ್ತದೆ. ನೀವು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿದಾಗ, ನಿಮ್ಮ 16 ಅಂಕೆಗಳ ಕಾರ್ಡ್‌ ಸಂಖ್ಯೆ, ಕಾರ್ಡ್‌ನ ಎಕ್ಸ್‌ಪೈರಿ ದಿನಾಂಕ, ಸಿ.ವಿ.ವಿ., ಮತ್ತು ಒಮ್ಮೆ ಮಾತ್ರ ಬಳಸಬಹುದಾದ ಪಾಸ್‌ವರ್ಡ್‌ ಅಥವಾ ವ್ಯವಹಾರದ ಪಿನ್‌ಗಳಂತಹ ವಿವರಗಳನ್ನು ಆಧರಿಸಿ ವ್ಯವಹಾರವನ್ನು ಪೂರ್ಣಗೊಳಿಸಲಾಗುತ್ತದೆ. ಈ ಎಲ್ಲಾ ವಿವರಗಳನ್ನೂ ಟೋಕನ್‌ ಎಂದು ಕರೆಯಲಾಗುವ ಒಂದು ವಿಶಿಷ್ಷ ಸಂಕೇತಕ್ಕೆ ಬದಲಾಯಿಸುವ ಪ್ರಕ್ರಿಯೆಯನ್ನೇ ಟೋಕನೈಸೇಷನ್‌ ಎನ್ನಲಾಗುತ್ತದೆ. ಈ ಪ್ರಕ್ರಿಯೆಯು ಟೋಕನ್‌ಗೆ ಮನವಿ ಸಲ್ಲಿಸುವ ವ್ಯಕ್ತಿಗೆ ಹಾಗೂ ಅವನು ಬಳಸುವ ಸಾಧನಕ್ಕೆ ನಿರ್ದಿಷ್ಟವಾಗಿ ಸೀಮಿತವಾಗಿರುತ್ತದೆ. ಈ ಟೋಕನ್‌ ಯಾವಾಗಲೂ ನಿಮ್ಮ ಕಾರ್ಡ್‌ ಮತ್ತು ಸಾಧನಗಳಿಗೆ ಮಾತ್ರ ಸೀಮಿತವಾಗಿರುವಂತೆ ವಿಶಿಷ್ಟವಾಗಿ ಕ್ರಿಯೆಟ್ ಮಾಡಲಾಗಿರುತ್ತದೆ.

ಟೋಕನೈಸೇಷನ್‌ ಜಾರಿಗೆ ಬಂದಿದ್ದು ಹೇಗೆ

2022ರ ಅಕ್ಟೋಬರ್‌ 1ರಂದು ಈ ಟೋಕನೈಸೇಷನ್‌ ಚಾಲ್ತಿಗೆ ತರಲಾಗಿತ್ತು. ದೇಶದಲ್ಲಿ ಹೆಚ್ಚಾಗುತ್ತಲೇ ಇರುವ ಸೈಬರ್ ಫ್ರಾಡ್ ತಪ್ಪಿಸಲು ಇದನ್ನು ಪರಿಚಯಿಸಲಾಗಿತ್ತು. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಒಂದು ಸಂಕೇತದ ರೂಪದಲ್ಲಿ ಸಂಗ್ರಹಿಸುವುದರಿಂದ ಫ್ರಾಡ್ ಸಾಧ್ಯತೆ ಕಡಿಮೆ ಇರುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ವಿವರಗಳನ್ನು ಟೋಕನ್‌ಗಳ ರೂಪದಲ್ಲಿ ಇರುವುದರಿಂದ ವಂಚಕರಿಗೆ ನಿಮ್ಮ ಪರ್ಸನಲ್ ಡೇಟಾ ಕದಿಯುವುದು ಕಷ್ಟಸಾಧ್ಯ.

advertisement

ಸದ್ಯ, ಕೇವಲ ಇ-ವಾಣಿಜ್ಯ ಜಾಲತಾಣಗಳು ಮಾತ್ರವೇ ಟೋಕನೈಸೇಷನ್‌ನ ಸೌಲಭ್ಯವನ್ನು ಬಳಸಬಹುದಾಗಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳಂತಹ ಇ-ವಾಣಿಜ್ಯ ಜಾಲತಾಣಗಳಲ್ಲಿ, ನಿಮ್ಮ ಕಾರ್ಡ್‌ ಮೂಲಕ ನೀವೊಂದು ಆನ್‌ಲೈನ್‌ ಪೇಮೆಂಟ್‌ ಮಾಡಿ ಹೊರಬರುವಾಗ, ನಿಮ್ಮ ಕಾರ್ಡನ್ನು ಆರ್.ಬಿ.ಐ. ಮಾರ್ಗದರ್ಶಕ ಸೂತ್ರಗಳಿಗೆ ಅನುಗುಣವಾಗಿ ಭದ್ರಪಡಿಸಿಕೊಳ್ಳಬೇಕು.

ಶಾಪಿಂಗ್‌ ಮಾಡುವವರಿಗೆ ಟೋಕನೈಜೇಶನ್‌ನಿಂದ ಏನು ಪ್ರಯೋಜನ?

ಈ ಟೋಕನೈಜೇಶನ್‌ ಡೇಟಾ ಕಳ್ಳತನವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು, ಆದರೆ ಈ ಡೇಟಾ ಕಳ್ಳತನದ ಸಾಧ್ಯತೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಆಪ್‌ಗಳ ಮೂಲಕ ನೀವು ಶಾಪಿಂಗ್‌ ಮಾಡುವುದನ್ನು ಈ ಹೊಸ ವಿಧಾನ ಟೋಕನೈಜೇಶನ್‌ ನೀವು ಸುಲಭವಾಗಿ ಶಾಪಿಂಗ್‌ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಆನ್‌ಲೈನ್‌ ಶಾಪಿಂಗ್‌ ಅನ್ನು ಸುರಕ್ಷಿತಗೊಳಿಸುತ್ತದೆ. ಟೋಕನೈಜ್‌ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್‌ಸೈಟ್‌ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್‌ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

ಒಂದು ವೇಳೆ ವಂಚನೆ ನಡೆದರೆ…?

ಈ ಸುರಕ್ಷಿತ ವಿಧಾನದಲ್ಲೂ ಏನಾದರೂ ವಂಚನೆ ನಡೆದರೂ, ಹ್ಯಾಕರ್‌ಗಳಿಗೆ ಸುಲಭವಾಗಿ ಟೋಕನ್‌ನಿಂದ ವ್ಯಕ್ತಿಯ ಬ್ಯಾಂಕಿಂಗ್‌ ಸಂಬಂಧಿತ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕಾರ್ಡ್‌ನ ನಿಜವಾದ ವಿವರಗಳನ್ನು ಈ ಟೋಕನ್‌ಗಳು ಸುಲಭದಲ್ಲಿ ಬಹಿರಂಗ ಪಡಿಸಲ್ಲ. ಅಂತಹ ಸುರಕ್ಷಿತ ತಂತ್ರಜ್ಞಾನ ವ್ಯವಸ್ಥೆ ಇದಾಗಿದೆ.

advertisement

Leave A Reply

Your email address will not be published.