Karnataka Times
Trending Stories, Viral News, Gossips & Everything in Kannada

ATM: ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ನಿಂದ ಹಣ ತೆಗೆಯುವುದು ತುಂಬಾ ಸುಲಭ, ಈ ವಿಧಾನ ಅನುಸರಿಸಿ!

advertisement

ಇಂದು ಹೆಚ್ಚಾಗಿ ನಾವು ಕ್ಯಾಶ್ ಲೆಸ್ ವ್ಯವಹಾರವನ್ನೇ ಮಾಡುತ್ತೇವೆ. ಆದ್ರೂ ಕೆಲವೊಂದು ಸಂದರ್ಭದಲ್ಲಿ ನಗದು ಹಣದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಎಟಿಎಂ ಬಳಸಿ ಎಟಿಎಂ (ATM) ಕೇಂದ್ರಗಳಲ್ಲಿ ಹಣ ಹಿಂಪಡೆಯಬಹುದು.

ನೀವು ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ (ATM Card) ಹೊಂದಿದ್ರೆ ಇನ್ನೊಂದು ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಹಣ ಹಿಂಪಡೆಯಲು ಅವಕಾಶವಿದೆ. ಹಾಗಾಗಿ ನಿಮ್ಮದೇ ಬ್ಯಾಂಕಿನ ಬ್ರಾಂಚ್ ಎಟಿಎಂ ಸೆಂಟರ್ ಹುಡುಕಿಕೊಂಡು ಹೋಗಬೇಕು ಎನ್ನುವ ಅವಶ್ಯಕತೆ ಇಲ್ಲ.

ATM Card ಇಲ್ಲದಿದ್ರೂ ಹಿಂಪಡೆಯಬಹುದು ಹಣ:

ಎಟಿಎಂ (ATM) ಕೇಂದ್ರದಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೆ ಅದನ್ನ ಹಿಂಪಡೆಯಲು ಎಟಿಎಂ ಕಾರ್ಡ್ (ATM Card) ಬಳಸಿ ಹಣ ಪಡೆಯಬಹುದು. ಆದರೆ ಇನ್ನು ಮುಂದೆ ಈ ಸಮಸ್ಯೆ ಕೂಡ ಇಲ್ಲ. ಒಂದು ವೇಳೆ ನೀವು ಎಟಿಎಂ ಕಾರ್ಡ್ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರೆ ತುರ್ತಾಗಿ ಕ್ಯಾಶ್ ಬೇಕಿದ್ದರೆ ಎಟಿಎಂ ಕೇಂದ್ರಕ್ಕೆ ಹೋಗಿ ಎಟಿಎಂ ಕಾರ್ಡ್ ಇಲ್ಲದೆ ಇದ್ದರೂ ಹಣ ಹಿಂಪಡೆಯಬಹುದು.

ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಕೇಂದ್ರದಿಂದ ಹಣ ಹಿಂಪಡೆಯುವುದು ಹೇಗೆ?

advertisement

ಇಂದಿನ ಡಿಜಿಟಲ್ ಯುಗದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಎಷ್ಟು ಮುಂದುವರೆದಿದೆಯೋ, ಕ್ಯಾಶ್ ಹಿಂಪಡೆಯುವಲ್ಲಿ ಕೂಡ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಕೇವಲ ಮೊಬೈಲ್ ಒಂದಿದ್ದರೆ ಸಾಕು ಎಟಿಎಂ ಕೇಂದ್ರಕ್ಕೆ ಹೋಗಿ ಹಣ ಪಡೆಯಬಹುದು.

ಆರ್ ಬಿ ಐ (RBI) ತನ್ನ ಹಣಕಾಸಿನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದ್ದು ಯುಪಿಐ ಮೂಲಕ ಹಣ ವರ್ಗಾವಣೆ ಮಾತ್ರ ಅಲ್ಲದೆ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಕೂಡ ಮಾಡಿದೆ. ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಯುಪಿಐ ಗೆ ಕನೆಕ್ಟ್ ಆಗಿರುವ ಗೂಗಲ್ ಪೇ (Google Pay), ಫೋನ್ ಪೇ (Phone Pe), ಪೇಟಿಎಂ (Paytm) ಯಾವುದೇ ಅಪ್ಲಿಕೇಶನ್ ಇದ್ರೆ ಸಾಕು. ಎಟಿಎಂ (ATM) ನಿಂದ ಹಣ ಹಿಂಪಡೆಯಬಹುದು.

 

 

ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ನಂತರ ನಿಮ್ಮ ಮೊಬೈಲ್ ನಲ್ಲಿ ಯುಪಿಐ ಪೇಮೆಂಟ್ ಅಪ್ಲಿಕೇಶನ್ ತೆರೆಯಿರಿ. ಅಲ್ಲಿ ನಿಮಗೆ ಒಂದು ಸ್ಕ್ಯಾನ್ ಕೋಡ್ ಕಾಣಿಸುತ್ತದೆ. ಎಟಿಎಂ ಮಷೀನ್ ನಲ್ಲಿ ಕಾಣುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ನಂತರ ಯುಪಿಐ ಅಪ್ಲಿಕೇಶನ್ ನಲ್ಲಿ ಪಡೆಯಬೇಕಾಗಿರುವ ಅಮೌಂಟ್ ಆಯ್ಕೆ ಮಾಡಬೇಕು. ನಂತರ ಎಟಿಎಂ ಮಷೀನ್ (ATM Machine) ನಿಂದ ಹಣ ಹಿಂಪಡೆಯಬಹುದು.

ಈ ರೀತಿ ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಅತ್ಯುತ್ತಮ ತಂತ್ರಜ್ಞಾನವಾಗಿದೆ ಎಂದು ಆರ್ ಬಿ ಐ ಗವರ್ನರ್ ತಿಳಿಸಿದ್ದಾರೆ. ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್‌ನಂತಹ ವಂಚನೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಹಾಗೂ ಜನರಿಗೆ ಎಲ್ಲೇ ಹೋಗಬೇಕಿದ್ರೂ ಕಾರ್ಡ್ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇರುವುದಿಲ್ಲ. ಕಾರ್ಡ್ ಮಾಡುವ ಕೆಲಸ ನಿಮ್ಮ ಸ್ಮಾರ್ಟ್ ಫೋನ್ ಮಾಡುತ್ತದೆ.

advertisement

Leave A Reply

Your email address will not be published.