Karnataka Times
Trending Stories, Viral News, Gossips & Everything in Kannada

Ram Mandir Innaguration: ಶ್ರೀರಾಮ ಮಂದಿರ ಲೋಕಾರ್ಪಣೆ ಲೈವ್ ಪ್ರಸಾರ ಎಲ್ಲಿ, ಹೇಗೆ ನೋಡಬೇಕು? ಸಂಪೂರ್ಣ ವಿವರ ಇಲ್ಲಿದೆ.

advertisement

ದಶಕಗಳ ಕನಸು ಶ್ರೀ ರಾಮ ಮಂದಿರ ನಿರ್ಮಾಣ. ಇದೀಗ ಅಯೋದ್ಯಾ, ರಾಮನ ನಗರಿಯಾಗಿ ಬದಲಾಗಿದೆ. ಜನವರಿ 22, 2024ಕ್ಕೆ ಎಲ್ಲರ ಬಹು ವರ್ಷದ ನಿರೀಕ್ಷೆ ನಿಜವಾಗಲಿದೆ. ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ.

ಉತ್ತರ ಪ್ರದೇಶದ ಅಯೋಧ್ಯ ನಗರಿಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ ರಾಮಚಂದ್ರ ಮೂರ್ತಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜನವರಿ 22, 2024ಕ್ಕೆ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯಲಿದೆ. ಆದರೆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಶ್ರೀರಾಮ ಮಂದಿರ ಉದ್ಘಾಟನೆಯನ್ನು ನೋಡಬೇಕು ಎಂದು ಬಯಸಿದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹಾಗಂತ ನೀವು ಶ್ರೀರಾಮ ಮಂದಿರ ಉದ್ಘಾಟನೆಯನ್ನು ಮಿಸ್ ಮಾಡ್ಕೋಬೇಡಿ, ಮನೆಯಲ್ಲಿಯೇ ಕುಳಿತು ಲೈವ್ ಪ್ರಸಾರ ನೋಡಬಹುದು.

advertisement

ಇಲ್ಲಿ ಲೈವ್ ಪ್ರಸಾರ;

ಶ್ರೀ ರಾಮ ಮಂದಿರ ಉದ್ಘಾಟನೆ (Ram Mandir Innaguration) ಹಾಗೂ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನೆರವೇರಲಿದೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಸಮ್ಮುಖದಲ್ಲಿ ಇಂತಹ ಒಂದು ಅದ್ಭುತ ದೃಶ್ಯಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಲಿದೆ. ಈ ರೋಮಾಂಚನಕಾರಿ ಘಳಿಗೆಗೆ ನೀವು ಕೂಡ ಭಾಗಿ ಆಗಬೇಕು ಅಂದ್ರೆ ಮನೆಯಲ್ಲಿ ಕುಳಿತು ಲೈವ್ ವೀಕ್ಷಿಸಬಹುದು. ಡಿಡಿ ನ್ಯೂಸ್ ಹಾಗೂ ದೂರದರ್ಶನ ರಾಷ್ಟ್ರೀಯ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.

ಡಿಡಿ ನ್ಯೂಸ್ ಹಾಗೂ ಹಲವು ರಾಷ್ಟ್ರೀಯ ಚಾನೆಲ್ ಗಳು ಈಗಾಗಲೇ ಅಯೋಧ್ಯೆಯಲ್ಲಿ ಬೀಡುಬಿಟ್ಟಿವೆ. ಡಿಡಿ ನ್ಯೂಸ್ ತನ್ನ ಸುಮಾರು 40 ಕ್ಯಾಮರಾಗಳನ್ನು ಅಯೋಧ್ಯ ಕಾರ್ಯಕ್ರಮದ ಸೂಕ್ತ ಅಳವಡಿಸಿದ್ದು 4k ಕ್ವಾಲಿಟಿ ವಿಡಿಯೋವನ್ನು ನೀವು ವೀಕ್ಷಿಸಬಹುದು. ಅಷ್ಟೇ ಅಲ್ಲದೆ ಡಿಡಿ ನ್ಯೂಸ್ Youtube ನಲ್ಲಿಯೂ ಕೂಡ ಲಭ್ಯವಿದ್ದು ನೀವು ಮನೆಯಲ್ಲಿ ನಿಮ್ಮ ಟಿವಿಯಲ್ಲಿ ಚಾನೆಲ್ ಬಾರದೆ ಇದ್ದರೆ ಯೂಟ್ಯೂಬ್ ನಲ್ಲಿ ವೀಕ್ಷಿಸಲು ಸಾಧ್ಯವಿದೆ.

ಒಟ್ಟಿನಲ್ಲಿ ಹಿಂದುಗಳ ಭಾವನೆಗೆ ಸಂಬಂಧಪಟ್ಟ ಶ್ರೀರಾಮ ಮಂದಿರ ಉದ್ಘಾಟನೆಯನ್ನು ಕುಳಿತಲ್ಲಿಯೇ ನೇರವಾಗಿ ವೀಕ್ಷಿಸಲು ಇಂದಿನ ಮಾಧ್ಯಮಗಳು ಅನುವು ಮಾಡಿಕೊಡುತ್ತಿವೆ.

advertisement

Leave A Reply

Your email address will not be published.