Karnataka Times
Trending Stories, Viral News, Gossips & Everything in Kannada

GruhaLakshmi: ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಹಣದ ಬಗ್ಗೆ ಯಾವುದೇ ಗೊಂದಲ ಇರಲ್ಲ!

advertisement

ರಾಜ್ಯದಲ್ಲಿ ಗೃಹಲಕ್ಷ್ಮೀ (GruhaLakshmi) ಯೋಜನೆ ಮೂಲಕ ಮಹಿಳೆಯರಿಗೆ ಅದರಲ್ಲಿಯೂ ಪಡಿತರ ಕಾರ್ಡ್ ನಲ್ಲಿ ಅರ್ಹತೆ ಪಡೆದು ಮನೆಯ ಯಜಮಾನಿಗೆ ಪ್ರತೀ ತಿಂಗಳೂ ಕೂಡ 2ಸಾವಿರ ಮೊತ್ತ ಬರುತ್ತಿದೆ. ಹಾಗಿದ್ದರೂ ರಾಜ್ಯದ ಅನೇಕ ಭಾಗದಲ್ಲಿ ಈ ಮೊತ್ತ ಬರಲು ಇನ್ನೂ ಕೂಡ ಬಾಕಿ ಇದೆ. ಜಿಲ್ಲಾವಾರು ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಕಾರಣ ಕೆಲ ಪ್ರದೇಶಕ್ಕೆ ಬರುವುದು ವಿಳಂಬ ಆಗಬಹುದು ಈ ನಡುವೆ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಎರಡು ಸಾವಿರ ಪಡೆಯಲು ಪಿಂಕ್ ಕಾರ್ಡ್ ಮಾನ್ಯತೆಯ ಪ್ರಶ್ನೆ ಎತ್ತಿ ಹಿಡಿಯಲಾಗುತ್ತಿದೆ.

ಪಿಂಕ್ ಕಾರ್ಡ್ ಎಂದರೇನು?

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಪಿಂಕ್ ಬಣ್ಣದ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು ಸದ್ಯ ಇದೇ ಕಾರ್ಡ್ ಅನ್ನು ಗೃಹಲಕ್ಷ್ಮೀ ಪಿಂಕ್ ಕಾರ್ಡ್ ಎಂದು ಕರೆಯಲಾಗುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರ ಇರಲಿದೆ. ಎರಡು ಸಾವಿರ ಎಂದು ಕಾರ್ಡಿನ ಮೇಲೆ ಇರಲಿದ್ದು ಗುಲಾಬಿ ಬಣ್ಣದಲ್ಲಿ ಇದು ಇರಲಿದೆ.

ಇದರಿಂದ ಆಗುವ ಪ್ರಯೋಜನ ಏನು?

advertisement

ಈ ಒಂದು ಪಿಂಕ್ ಕಾರ್ಡ್ ನಿಮಗೆ ಅನೇಕ ಪ್ರಯೋಜನ ಸಿಗಲಿದೆ. ಈ ಬಗ್ಗೆ ಹಂತ ಹಂತವಾಗಿ ನೀವು ಮಾಹಿತಿ ಪಡೆಯಬಹುದು.

  • ಗೃಹಲಕ್ಷ್ಮೀ ಯೋಜನೆ ಪಿಂಕ್ ಕಾರ್ಡ್ ನಲ್ಲಿ ಒಂದು ಕ್ಯೂ ಆರ್ ಕೋಡ್ ಇರಲಿದ್ದು ನಿಮಗೆ ಎಷ್ಟು ಗೃಹಲಕ್ಷ್ಮೀ ಹಣ ಬಂದಿದೆ ಈ ತಿಂಗಳಿನಂದು ಯಾವತ್ತು ಬರಲಿದೆ ಎಂದು ತಿಳಿಯಬಹುದು.
  • ಗೃಹಲಕ್ಷ್ಮೀ ಹಣ ಬರದಿರುವ ಅಪ್ಡೇಟ್ ಮಾಡಬೇಕಾದ ಸಂಗತಿ ತಿಳಿಯಲಿರುವುದು.
  • ಪ್ರಸೆಂಟ್ ಸ್ಟೇಟಸ್ ಚೆಕ್ ಎಂಬ ಆಯ್ಕೆ ಕೂಡ ನಿಮಗೆ ಸಿಗಲಿದೆ.

ಅರ್ಜಿ ಸಲ್ಲಿಸಬೇಕಾ?

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಈ ಪಿಂಕ್ ಕಾರ್ಡ್ ಪಡೆಯಲು ಯಾವುದೇ ವಿಧವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈ ಪಿಂಕ್ ಕಾರ್ಡ್ ಹಾಗಾದರೇ ಹೇಗೆ ಪಡೆಯುವುದು ಎಂಬ ಅನುಮಾನ ನಿಮಗೂ ಇರಬಹುದು. ಈ ಕಾರ್ಡ್ ಪಡೆಯಲು ನೀವು ಎಲ್ಲಿಗೂ ಹೋಗಬೇಕಿಲ್ಲ ನಿಮ್ಮ ಮನೆ ಬಾಗಿಲಿಗೆ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರು ತಲುಪಿಸಲಿದ್ದಾರೆ. ಹಾಗಾಗಿ ಈ ಬಗ್ಗೆ ಗೊಂದಲ ಹೊಂದುವ ಅಗತ್ಯ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಹಿಂದೆ ತಿಳಿಸಿದ್ದರು.

ಕಾರ್ಡ್ ಇರದಿದ್ದರೆ ಸಮಸ್ಯೆ ಇದೆಯಾ?

ಈ ಒಂದು ಪಿಂಕ್ ಕಾರ್ಡ್ ಹೊಂದಿರದೇ ಇದ್ದರೆ ಸಮಸ್ಯೆ ಇದೆಯಾ ಎಂದು ಯೋಚನೆ ಮಾಡಿದರೆ ಈಗ ನಿಮಗೆ ಕಾರ್ಡ್ ಇಲ್ಲದಿದ್ದರೂ ಹಣ ಬರುತ್ತಿದೆ. ನಾಲ್ಕನೇ ಕಂತಿನ ಹಣ ಜಿಲ್ಲಾವಾರು ಬಿಡುಗಡೆ ಆಗಿದ್ದು ಎಲ್ಲ ಪ್ರದೇಶಕ್ಕೂ ಬರುತ್ತಿದೆ. ಹಣ ಬರದೇ ಇದ್ದವರಿಗೆ ಈ ತಿಂಗಳ 31ರ ಒಳಗೆ ಹಣ ಬರಲಿದೆ. ಈಗ ಕಾರ್ಡ್ ಇಲ್ಲದಿದ್ದರೂ ಹಣ ಬರುತ್ತಿದೆ ಆದರೆ ಮುಂದಿನ ದಿನದಲ್ಲಿ ಕಾರ್ಡ್ ಕಡ್ಡಾಯವಾಗಿ ಬಳಕೆ ಆಗಲೇ ಬೇಕೆಂಬ ನಿಯಮ ಬರುವ ಸಾಧ್ಯತೆ ಅಧಿಕವಾಗಿದೆ. ಈ ಪಿಂಕ್ ಕಾರ್ಡ್ ಯಾವಾಗ ನಿಮ್ಮ ಕೈ ಸೇರಲಿದೆ ಎಂದರೆ ಅದು 2024ರ ಜನವರಿಲ್ಲಿ ಎನ್ನಬಹುದು. ಹಾಗಾಗಿ ಈ ಬಗ್ಗೆ ಮಾಹಿತಿ ಹೊಂದುತ್ತಲೇ ಕಾರ್ಡ್ ಮನೆ ಬಾಗಿಲಿಗೆ ಬಂದರೆ ನಿರ್ಲಕ್ಷ ಮಾಡದೆ ನಿಮ್ಮ ಕಾರ್ಡ್ ಅನ್ನು ತಪ್ಪದೇ ಪಡೆಯಿರಿ.

advertisement

Leave A Reply

Your email address will not be published.