Karnataka Times
Trending Stories, Viral News, Gossips & Everything in Kannada

Govt Job: ಕನ್ನಡ ಸ್ಪಷ್ಟವಾಗಿ ಮಾತನಾಡುವವರಿಗೆ ಇಲ್ಲಿದೆ ಕೆಲಸ! ರಾಜ್ಯ ಸರ್ಕಾರದ ಘೋಷಣೆ, ಪರೀಕ್ಷೆ ಇಲ್ಲ

advertisement

ಇಂದು ಪ್ರತಿಯೊಬ್ಬರಿಗೂ ಉದ್ಯೋಗ ಅನ್ನೋದು ಬಹಳ ಮುಖ್ಯವಾಗುತ್ತದೆ. ಜೀವನ ಸಾಗಿಸಲು ಒಂದು ನೆಮ್ಮದಿಯ ಕೆಲಸ ಇದ್ದರೆ ಮಾತ್ರ ಬದುಕನ್ನು ಸುಲಭವಾಗಿ ಸಾಗಿಸಬಹುದಾಗಿದೆ‌.ಆದರೆ ಇಂದು ಸುಲಭಕ್ಕೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವೇ ಆಗಿದೆ.ಇಂದು ಎಷ್ಟೇ ಶಿಕ್ಷಣ ಪಡೆದರೂ ಹೆಚ್ಚು ಅಂಕ ಗಳಿಸಿದರೂ ನಮಗೆ ಬೇಕಾದ ತಮ್ಮ ಕನಸಿನ ಕೆಲಸ ಪಡೆಯುದು ಕಷ್ಟವೇ.

ಮಾಹಿತಿ ಕಡಿಮೆ

ಕೆಲವು ಜನರಿಗೆ ಸ್ಕಿಲ್ ಇದ್ದರೂ ಉದ್ಯೋಗ ಪಡೆಯುವ ಬಗ್ಗೆ ಮಾಹಿತಿ ಇರುವುದಿಲ್ಲ. ಅಲ್ಲದೆ ಅದರ ಬಗ್ಗೆ ತಿಳಿದುಕೊಂಡಿರುವುದಿಲ್ಲ‌. ಇಂದು ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದರೂ ಈ ಬಗ್ಗೆ ಮಾಹಿತಿ ಕೆಲವರಿಗೆ ಇರುವುದಿಲ್ಲ. ಹಾಗಾಗಿ ಉದ್ಯೋಗ ಇಲ್ಲ ಕೆಲಸ ಬೇಕು ಎಂದು ಇದ್ದವರಿಗೆ ಈ ಮಾಹಿತಿ ಅನುಕೂಲ ವಾಗಬಹುದು.

ಖಾಲಿ ಹುದ್ದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ ಇದಾಗಿದ್ದು‌ ಪೌರಕಾರ್ಮಿಕರ ಹುದ್ದೆಗಾಗಿ ಅರ್ಜಿ ಯನ್ನು ಆಹ್ವಾನ ಮಾಡಲಾಗಿದೆ.ಒಟ್ಟು 11,307 ಹುದ್ದೆಗಳು ಖಾಲಿ ಇರಲಿದ್ದು ಯಾವುದೇ ಶಿಕ್ಷಣ ದ ಅವಶ್ಯಕತೆ ಇರುವುದಿಲ್ಲ.ನೀವು ಎಸ್ ಎಸ್ ಎಲ್ ಸಿ, ಪಿಯುಸಿ, ಯಾವುದೇ ಶಿಕ್ಷಣ ಪಡೆದಿದ್ದರೂ ಅರ್ಜಿ ಹಾಕಬಹುದು.ಅದೇ ರೀತಿ ಅರ್ಜಿ ಹಾಕಲು ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಮಾಡಲು ಇದೀಗ ಸಮಯ ವಿಸ್ತರಣೆ ಕೂಡ ಮಾಡಿದ್ದು ಕೊನೆಯ ದಿನಾಂಕ ಮೇ 15 ಆಗಿರಲಿದ್ದು ನೀವು ಅಪ್ಲಿಕೇಶನ್ ಅನ್ನು ಅನ್ ಲೈನ್ ಮೂಲಕ ಅಥವಾ ನೇರವಾಗಿ ಪೋಸ್ಟ್ ಮೂಲಕವು ಸಲ್ಲಿಕೆ ಮಾಡಬಹುದು.

advertisement

ಅರ್ಹತೆ ಏನು?

ಯಾವುದೇ ಶೈಕ್ಷಣಿಕ ಅರ್ಹತೆ ಬೇಕಾಗಿರುವುದಿಲ್ಲ,ಆದರೆ ‌ಕನ್ನಡ ಸ್ಪಷ್ಟ ವಾಗಿ ಮಾತನಾಡಲು ಗೊತ್ತಿರಬೇಕು. ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಲು ವರ್ಷ ವು ಕನಿಷ್ಠ 18 ವರ್ಷ ಆಗಿರಬೇಕು, ಹಾಗೂ ಗರಿಷ್ಠ 55 ವರ್ಷ ಮೀರಿ ಇರಬಾರದು. ಇನ್ನು ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಪಡೆದ ಆಯಾ ಪುರಸಭೆ ಕೇಂದ್ರದಲ್ಲೆ ಸಲ್ಲಿಸಬೇಕು.

ವೇತನ ಎಷ್ಟು?

ಈ ಉದ್ಯೋಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 28,950 ರೂ ವೇತನ ನೀಡಲಿದ್ದು ಆಸಕ್ತಿ ಇದ್ದವರು ಅರ್ಜಿ ಹಾಕಬಹುದು.ಇದಕ್ಕಾಗಿ ಸಂಬಂಧಪಟ್ಟ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕಛೇರಿಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

advertisement

Leave A Reply

Your email address will not be published.