Karnataka Times
Trending Stories, Viral News, Gossips & Everything in Kannada

CNG Car: CNG ಕಾರು ಇರುವ ಎಲ್ಲರಿಗೂ ಮಹತ್ವದ ಸೂಚನೆ! ತಪ್ಪದೇ ಗಮನಿಸಿ

advertisement

ಇತ್ತೀಚಿನ ದಿನಗಳಲ್ಲಿ ಏರುತ್ತಿರುವಂತಹ ಪೆಟ್ರೋಲ್ ಬೆಲೆಯ ಕಾರಣದಿಂದಾಗಿ ಹೆಚ್ಚಿನವರು ಎಲೆಕ್ಟ್ರಿಕ್ ಇಲ್ಲವೇ CNG Car ಗಳನ್ನು ಖರೀದಿಸುವಂತಹ ಯೋಜನೆ ಹಾಕುತ್ತಿದ್ದಾರೆ ಅಥವಾ ಈಗಾಗಲೇ ಖರೀದಿ ಮಾಡಿದ್ದಾರೆ.

ವಿಶೇಷವಾಗಿ ನಾವು ಈ ಲೇಖನದ ಮೂಲಕ CNG Car ಅನ್ನು ಹೊಂದಿರುವವರು ಫಾಲೋ ಮಾಡಬೇಕಾಗಿರುವ ಕೆಲವೊಂದು ಟಿಪ್ಸ್ ಗಳ ಬಗ್ಗೆ ಹೇಳಲು ಹೊರಟಿದ್ದೇವೆ. CNG ವಾಹನಗಳನ್ನು ಚಲಾಯಿಸುವುದರ ಜೊತೆಗೆ ಅವುಗಳನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಅನ್ನೋ ಮಾಹಿತಿಯನ್ನು ಕೂಡ ಅವರು ಹೊಂದಿರಬೇಕಾಗಿರುತ್ತದೆ.

CNG ಕಾರನ್ನು ಚಲಾಯಿಸುವಾಗ ತಿಳಿದುಕೊಳ್ಳಬೇಕಾಗಿರುವಂತಹ ಟಿಪ್ಸ್ ಗಳು:

 

Image Source: Spinny

 

CNG Car ಗಳ ಬೇಡಿಕೆ ಹಾಗೂ ಖರೀದಿ ಎರಡು ಕೂಡ ಸದ್ಯದ ಮಟ್ಟಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಪರಿಸರಸ್ನೇಹಿ ಆಗಿರುವಂತಹ ಈ ಕಾರುಗಳ ಬಗ್ಗೆ ನೀವು ಕೆಲವೊಂದು ನಿರ್ಲಕ್ಷ್ಯ ಮಾಡುವುದರಿಂದ ದೊಡ್ಡ ಅನಾಹುತ ಆಗುವಂತಹ ಸಾಧ್ಯತೆ ಕೂಡ ಕೆಲವೊಮ್ಮೆ ಇರುತ್ತದೆ.

advertisement

ಅವುಗಳಲ್ಲಿ ಪ್ರಮುಖವಾಗಿ ಯಾವತ್ತೂ ಕೂಡ CNG ಲೀಕೇಜ್ ಅನು ಚೆಕ್ ಮಾಡುತ್ತಲೇ ಇರಬೇಕು. ಮೂರು ವರ್ಷಕ್ಕೊಮ್ಮೆ ಇದರ ಹೈಡ್ರೋ ಟೆಸ್ಟಿಂಗ್ ಅನ್ನು ಮಾಡಿಸಬೇಕು. ಇದರಲ್ಲಿರುವಂತಹ ಸಿಲಿಂಡರ್ ನಲ್ಲಿ ಕೂಡ ಯಾವುದೇ ಪ್ರಾಬ್ಲಮ್ ಇಲ್ಲ ಎನ್ನುವುದನ್ನ ಖಾತ್ರಿಪಡಿಸಿಕೊಳ್ಳಬೇಕು.

CNG ಕಾರಿನಲ್ಲಿ ಯಾವುದೇ ರೀತಿಯ ನಿರ್ಲಕ್ಷ ಮಾಡಬಾರದು:

 

Image Source: Car Blog India

 

  • ಪ್ರಮುಖವಾಗಿ ಯಾವುದೇ ಕಾರಣಕ್ಕೂ ಬೇಸಿಗೆ ಕಾಲದಲ್ಲಿ CNG ಟ್ಯಾಂಕಿಯಲ್ಲಿ ಗ್ಯಾಸ್ ಫುಲ್ ಮಾಡಬಾರದು.
  • ಒಂದು ವೇಳೆ ಇದು 10 ಕೆ.ಜಿ ಕೆಪಾಸಿಟಿಯನ್ನು ಹೊಂದಿದ್ದರೆ ಹೆಚ್ಚೆಂದರೆ ಎಂಟು ಕೆಜಿ ಮಾತ್ರ ಭರ್ತಿ ಮಾಡಿ. ಇನ್ನು ಯಾವತ್ತೂ ಕೂಡ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ಇಂತಹ ವಾಹನಗಳನ್ನು ಮರದ ಕೆಳಗೆ ಬಿಸಿಲು ಇಲ್ಲದ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

CNG ವಾಹನಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ದೂರ ಪ್ರಯಾಣಿಸಲು ಉಪಯೋಗವಾಗುವಂತಹ ವಾಹನಗಳಾಗಿವೆ ಹೀಗಾಗಿ ಅವುಗಳನ್ನು ಬಳಸಿಕೊಳ್ಳುವುದು ಖಂಡಿತವಾಗಿ ಹಣದ ವಿಚಾರದಲ್ಲಿ ಲಾಭದಾಯಕ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನೀವು ಚಲಾಯಿಸುವವರಾಗಿ ಈ ಮೇಲೆ ಹೇಳಿರುವಂತಹ ವಿಚಾರಗಳನ್ನು ಗಮನಿಸಿ ಸರಿಯಾದ ರೀತಿಯಲ್ಲಿ ಚಲಾಯಿಸುವಂತಹ ಕೆಲಸವನ್ನು ಮಾಡಿದರೆ ಅದರಿಂದ ಆಗುವಂತಹ ಅನಾಹುತಗಳಿಂದ ನೀವು ತಪ್ಪಿಸಿಕೊಳ್ಳಬಹುದು ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ.

advertisement

Leave A Reply

Your email address will not be published.