Karnataka Times
Trending Stories, Viral News, Gossips & Everything in Kannada

Driving License: ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಜೊತೆ ಇರದಿದ್ದರೂ ದಂಡ ಕಟ್ಟಬೇಕಾಗಿಲ್ಲ, ಹೊಸ ವ್ಯವಸ್ಥೆ ಜಾರಿಗೆ ತಂದ ಸರ್ಕಾರ!

advertisement

ವಾಹನ ಚಲಾಯಿಸುವವರಿಗೆ ಡ್ರೈವಿಂಗ್ ಲೈಸೆನ್ಸ್ (Driving License) ಮತ್ತು ಆರ್ ಸಿ (RC) ಎಲ್ಲೆಡೆ ಕೇಳಿಯೇ ಕೇಳುತ್ತಾರೆ. ಆದರೆ ಬಹುತೇಕ ವಾಹನ ಸವಾರಕರು ಆರ್ ಸಿ ಬುಕ್ ಹಾಗೂ ಡ್ರೈವಿಂಗ್ ಲೈಸೆನ್ಸ್ ತರಲು ಮರೆತುಹೋಗಿ ಬಳಿಕ ಫೈನ್ ಕಟ್ಟಬೇಕಾಗುವ ಸಂದರ್ಭವನ್ನು ಕೂಡ ಎದುರಿಸಿದ್ದಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಕೂಡ ಜನರಿಗೆ ನೆರವಾಗಬೇಕು ಎಂಬ ಕಾರಣಕ್ಕೆ ವಾಹನ ನೋಂದಣಿ ಹಾಗೂ ಚಾಲನ ಪರವಾನಿಗೆಯನ್ನು ಸ್ಮಾರ್ಟ್ ಪರಿಕಲ್ಪನೆ ಅಡಿಯಲ್ಲಿ ಜಾರಿ ತರಲು ಮುಂದಾಗಲಾಗಿದೆ.

ಆರ್ ಸಿ ಹಾಗೂ ಡಿಎಲ್ ಗಳಿಗೆ ಈಗಾಗಲೇ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು ಈ ಬಾರಿ ಇನ್ನಷ್ಟು ಹೈ ಟೆಕ್ನಾಲಜಿ ಮೂಲಕ ಅದನ್ನು ಜಾರಿಗೆ ತರಲು ಮುಂದಾಗಲಾಗಿದೆ. 2024ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಈ ಒಂದು ಹೊಸ ಪರಿಕಲ್ಪನೆ ಶೀಘ್ರವಾಗಿ ಕರ್ನಾಟಕದಲ್ಲಿ ಜಾರಿಗೆ ಬರಲಿದ್ದು ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಲಾಗುತ್ತಿದೆ. ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಯ ಡಿಜಿಟಲ್ ವ್ಯವಸ್ಥೆ ಪರಿಶೀಲನೆ ಹಾಗೂ ನೂತನ ಯೋಜನೆ ಜಾರಿ ಬಗ್ಗೆ ಯಾವೆಲ್ಲ ಸೌಲಭ್ಯ ಅಗತ್ಯವಾಗಬಹುದು ಎಂಬ ನೆಲೆಯಲ್ಲಿ ಚಿಂತಿಸಲಾಗುತ್ತಿದೆ.

ಗುತ್ತಿಗೆ ಆಧಾರಿತ ವ್ಯವಸ್ಥೆ

ಸಾರಿಗೆ ಇಲಾಖೆ ಸಂಬಂಧಿತ ಜವಾಬ್ದಾರಿಯನ್ನು ಸರಕಾರದ ಒಂದು ಏಜೆನ್ಸಿಗೆ ನೀಡಲಾಗಿದ್ದು ರಾಜ್ಯದೆಲ್ಲೆಡೆ ಇರುವ ಕಚೇರಿಗಳಿಗೆ ಭೇಟಿ ನೀಡಿ ಈಗಾಗಲೇ ಪರಿಶೀಲನಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಒಂದು ಯೋಜನೆ ಕಾರ್ಯ ರೂಪಕ್ಕೆ ತರುವ ಸಲುವಾಗಿ ಸದ್ಯ ರೂಸ್ ವುರ್ಟ್ ಟೆಕ್ನಾಲಜಿ ಲಿಮಿಟೆಡ್ ಗೆ ಗುತ್ತಿಗೆ ಆಧಾರದ ಮೇಲೆ ಕೆಲ ಅಧಿಕಾರ ನೀಡಲಾಗಿದೆ. ಇದನ್ನು ಜಾರಿಗೆ ತರುವುದಕ್ಕೂ ಮೊದಲೇ ಟೆಂಡರ್ ಆಧಾರಿತ ಪ್ರಕ್ರಿಯೆ ಜಾರಿಗೆ ಬರಲಿದ್ದು, ಆ ಬಳಿಕವೇ ಜನರಿಗೆ ಈ ವಿನೂತನ ಸ್ಮಾರ್ಟ್ ಕಾರ್ಡ್ ಕೈ ಸೇರಲಿದೆ.

advertisement

ವಿಶೇಷತೆ ಏನು?

ಈ ಒಂದು ನೂತನ ಆರ್ ಸಿ ಹಾಗೂ ಡಿಎಲ್ ಸ್ಮಾರ್ಟ್ ಕಾರ್ಡ್ ನಲ್ಲಿ ಮುಂಭಾಗದಲ್ಲೇ ಕ್ಯೂ ಆರ್ ಕೋಡ್ (QR Code) ಕೊಡಲಾಗುತ್ತದೆ ಹಾಗಾಗಿ ಇದರ ಫೋಟೋ ಹೊಂದಿದ್ದರೂ ಕೂಡ. ಪೊಲೀಸರಿಗೆ ತೋರಿಸಬಹುದು. ಇನ್ನೆರೆಡು ತಿಂಗಳಲ್ಲಿ ಈಗ ಇರುವ ಗುತ್ತಿಗೆ ಆಧಾರಿತ ವ್ಯವಸ್ಥೆ ಮುಗಿಯಲಿದ್ದು ಫೆಬ್ರವರಿಯಿಂದ ಹೊಸ ಕಂಪೆನಿಗೆ ಈ ಪ್ರಕ್ರಿಯೆ ನೀಡುವ ಮೂಲಕ ನೂತನ ಕಾರ್ಡ್ ಕೂಡ ಜಾರಿಗೆ ಬರಲಿದೆ.

  • ಡಿಎಲ್ ನಲ್ಲಿ ವಾಹನ ಮಾಲಿಕರ ಹೆಸರು, ಫೋಟೊ, ಹುಟ್ಟಿದ ದಿನಾಂಕ, ರಕ್ತದ ಗುಂಪಿನ ವಿವರಣೆ ಮುಂಭಾಗದಲ್ಲಿ ಇರಲಿದೆ.ಹಿಂಭಾಗದಲ್ಲಿ ಮೊಬೈಲ್ ನಂಬರ್ ಮತ್ತು ವಾಹನ ಚಲಾಯಿಸಲ್ಪಡುವ ಅನುಮತಿ ವಿವರಣೆ ಇರಲಿದೆ.
  • ಆರ್ ಸಿನಲ್ಲಿ ಮುಂಭಾಗದಲ್ಲಿ ವಾಹನ ನೋಂದಣಿ ಸಂಖ್ಯೆ, ನೋಂದಣಿ ದಿನಾಂಲ ಹಾಗೂ ಕಾರ್ಡ್ ಅವಧಿ ಮುಕ್ತಾಯ, ಇಂಜಿನ್ ನಂಬರ್ ಇರಲಿದೆ. ಕಾರ್ಡ್ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನ ಮಾದರಿ, ಸೀಟ್ ವಿವರಣೆ ಇರಲಿದೆ.

ಬಹು ಉಪಯೋಗಿ

ಇದರಲ್ಲಿ ಕ್ಯೂ ಆರ್ ಕೋಡ್ ಇರುವ ಕಾರಣ ಸ್ಕ್ಯಾನ್ ಮಾಡಿದರೆ ಪ್ರತೀ ಮಾಹಿತಿ ಸವಿವರವಾಗಿ ತಿಳಿಯಲಿದೆ ಹಾಗಾಗಿ ಮೋಸ ಅಪರಾಧ ಪ್ರಕರಣಗಳನ್ನು ತಡೆಹಿಡಿಯಬಹುದು. ಅಷ್ಟು ಮಾತ್ರವಲ್ಲದೇ ನೀವು RCಹಾಗೂ DL ಮರೆತರೆ ಮೊಬೈಲ್ ಫೋಟೋ ಮೂಲಕ ಪೋಲಿಸ್ ಗೆ ಮಾಹಿತಿ ಸಲ್ಲಿಕೆ ಮಾಡಬಹುದು.

advertisement

Leave A Reply

Your email address will not be published.