Karnataka Times
Trending Stories, Viral News, Gossips & Everything in Kannada

Scholarship: ಓದುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 4,000ರೂ. ವಿದ್ಯಾರ್ಥಿ ವೇತನ ಸಿಗಲಿದೆ, ಅರ್ಹರು ಈ ರೀತಿಯಾಗಿ ಅರ್ಜಿ ಸಲ್ಲಿಸಿ.

advertisement

ವಿದ್ಯಾಭ್ಯಾಸ ಇಂದು ಅತೀ ಅಗತ್ಯ. ಜೀವನ ಸಾಗಿಸಲು,ಕೆಲಸ ಮಾಡಲು, ದೇಶ ವಿದೇಶ ಸುತ್ತಲೂ ಹೀಗೆ ಅನೇಕ ನೆಲೆಯಲ್ಲಿ ಶಿಕ್ಷಣ ಮಹತ್ತರ ಸ್ಥಾನವನ್ನು ಹೊಂದಿದೆ. ಸಮಾಜದಲ್ಲಿ ಇಂದು ಸಮಾನತೆ ನೆಲೆ ಮಾಡಲೂ ಜೀವನ ಶೈಲಿ ಅಭಿವೃದ್ಧಿ ಇನ್ನು ಅನೇಕ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಬಹಳ ಮಹತ್ವ ಸ್ಥಾನ ಹೊಂದಲಿದೆ. ಸಮಾಜದಲ್ಲಿ ಇರುವವರು ಎಲ್ಲರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಬದುಕನ್ನು ರೂಪಿಸಬೇಕು ಎಂಬ ನೆಲೆಯಲ್ಲಿ ಅನೇಕ ಪ್ರೋತ್ಸಾಹ ಧನ ಸೇವಾ ಸೌಲಭ್ಯ ಸಿಗುವುದನ್ನು ನಾವು ಗಮನಿಸಬಹುದು.

ಇಂದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ವಿಧವಾದ ವಿದ್ಯಾರ್ಥಿ ವೇತನ ಸೌಲಭ್ಯ ಲಭ್ಯವಾಗಲಿದೆ. ಈ ಮೂಲಕ ಉನ್ನತ ಶಿಕ್ಷಣ ಹಾಗೂ ಶೈಕ್ಷಣಿಕ ಪರಿಕರ ಖರೀದಿ ಮಾಡಲು ಇಂತಹ ಸ್ಕಾಲರ್ ಶಿಪ್ ಬಹಳ ಮಹತ್ವ ಪೂರ್ಣ ಸ್ಥಾನ ಹೊಂದಿದೆ. ಹಾಗಾಗಿ ದೇಶಿಯ ಮಟ್ಟದಲ್ಲಿ ದೊಡ್ಡ ಮೊತ್ತದ ಸ್ಕಾಲರ್ ಶಿಪ್ ಒಂದು ಲಭ್ಯ ವಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ನೀವು ಅಗತ್ಯವಾಗಿ ತಿಳಿಯಲೇಬೇಕಿದೆ.

ಯಾವುದು ಈ ವಿದ್ಯಾರ್ಥಿ ವೇತನ

ಈ ಒಂದು ವಿದ್ಯಾರ್ಥಿ ವೇತನವನ್ನು ದೇಶಾದ್ಯಂತ ಎರಡು ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿತರಿಸಲಾಗುತ್ತಿದ್ದು SC, ST, OBC ವರ್ಗಕ್ಕೆ ಮೀಸಲಾತಿ ಅನ್ವಯವೇ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುವುದು. ಅಂದರೆ ತಿಂಗಳಿಗೆ 4 ಸಾವಿರ ರೂಪಾಯಿತೆ ವರ್ಷಕ್ಕೆ 48 ಸಾವಿರ ರೂಪಾಯಿ ಪ್ರತೀ ವಿದ್ಯಾರ್ಥಿಗೆ ತಲುಪಲಿದೆ. ಇದನ್ನು ಭಾರತದ ಸರಕಾರದ ನವರತ್ನ ಕಂಪೆನಿಯ ಇಂಡಿಯನ್ ಆಯ್ಲ್ (Indian Oil)ಸಹಯೋಗದೊಂದಿಗೆ ನೀಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಲಿದೆ.

advertisement

ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಹಾಗಾಗಿ ಡಾಕ್ಯುಮೆಂಟ್ (Document) ಅನ್ನು ಸಹ ಅಪ್ಲೋಡ್ ಮಾಡಬೇಕು. ಇದಕ್ಕೆ ಯಾರದ್ದೆ ಶಿಫಾರಸ್ಸಿನ ಅಗತ್ಯವಿಲ್ಲದೇ ನಿಮ್ಮ ಅಂಕ ಇಲ್ಲಿ ಸಾಮಾನ್ಯ ಅರ್ಹತೆ ಸ್ಥಾನ ಪಡೆಯಲಿದೆ. ಇದಕ್ಕಾಗಿ ಕಚೇರಿಯನ್ನು ಸಹ ಅಲೆಯಬೇಕಿಲ್ಲ. ಇದನ್ನು ನೀಡುವುದು ಇಂಡಿಯನ್ ಆಯ್ಲ್ ಕಂಪೆನಿಯೂ ನೀಡುತ್ತಿದ್ದು ಜನಪರ ಕಾಳಜಿ ಹೊಂದಿರುವುದನ್ನು ಕಾಣಬಹುದು.

ಈ ಒಂದು ಸ್ಕಾಲರ್ ಶಿಪ್ (Scholarship)ಅನ್ನು ಈ ಕಂಪೆನಿ ತನ್ನ ಸಮಾಜ ಸೇವೆಯ ಭಾಗದಲ್ಲಿ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಮಾಡುತ್ತಿದ್ದು ಇದರ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ಕೂಡ ನಿರ್ಮಿಸಲಾಗಿದೆ. ತನ್ನ ಕಂಪೆನಿಯ ಒಟ್ಟು ಲಾಭದ ಒಂದಂಶವನ್ನು ಈ ರೀತಿಯಾಗಿ ಇಂಡಿಯನ್ ಆಯ್ಲ್ ಕಂಪೆನಿ ವಿನಿಯೋಗಿಸುತ್ತಿದ್ದು ಅಗತ್ಯ ನೆರವು ನಿರೀಕ್ಷೆಯ ಮಕ್ಕಳಿಗೆ ಸಹಕಾರಿ ಆಗಲಿದೆ. ಈ ಸ್ಕಾಲರ್ ಶಿಪ್ ಮಾಹಿತಿ ಪಡೆಯಲು ಇಂಡಿಯನ್ ಆಯ್ಲ್ ಕಂಪೆನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿದರೆ ಮಾಹಿತಿ ಲಭ್ಯವಾಗಲಿದೆ.

advertisement

Leave A Reply

Your email address will not be published.