Karnataka Times
Trending Stories, Viral News, Gossips & Everything in Kannada

Smartphone: 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಫೋನ್ ಮೇಲೆ 6,000ರೂ ರಿಯಾಯಿತಿ, ಡಿ.31 ವರೆಗೆ ಮಾತ್ರ ಅವಕಾಶ!

advertisement

ವಿವಿಧ ವಿಶೇಷತೆಗಳನ್ನು ಒಳಗೊಂಡ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು (Smartphone) ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಕ್ಯಾಮೆರಾ ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದು, ಹೆಚ್ಚಿನ ಮೆಗಾಪಿಕ್ಸೆಲ್‌ ಇರುವ ಸ್ಮಾರ್ಟ್‌ಫೋನ್‌ಗಳತ್ತ ಗಮನ ಹರಿಸುತ್ತಿದ್ದಾರೆ. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಫಿಲ್ಪ್ ಕಾರ್ಟ್‌ (Filpkart) ಕೂಡ ಇದೀಗ ಸ್ಮಾರ್ಟ್ ಫೋನ್ ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿವೆ.

ಹೌದು, ಫಿಲ್ಪ್ ಕಾರ್ಟ್‌ನಲ್ಲಿ ನಡೆಯುತ್ತಿರುವ ವಿಂಟರ್ ಡೇಸ್ ಸೇಲ್‌ (Winter Days Sale) ಡಿಸೆಂಬರ್ 31 ರವರೆಗೆ ನಡೆಯಲಿದ್ದು, ಇದರಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದ್ರೆ ಯಾವೆಲ್ಲಾ ಸ್ಮಾರ್ಟ್ ಫೋನ್ ಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರಲಿದೆ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Realme 11 Pro+ 5G

8 GB RAM ಮತ್ತು 256 GB ಆಂತರಿಕ ಸಂಗ್ರಹಣೆಯೊಂದಿಗೆ Realme 11 Pro+ 5G ಬೆಲೆಯು 29,999 ರೂಪಾಯಿಯಾಗಿದೆ. ಆದರೆ ವಿಂಟರ್ ಡೇಸ್ ಸೇಲ್‌ ನಲ್ಲಿ 25,999 ರೂಗಳಿಗೆ ರಿಯಾಯಿತಿಯಲ್ಲಿ ಖರೀದಿಸಬಹುದು. ಫಿಲ್ಪ್ ಕಾರ್ಟ್ (Filpkart) ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸುವ ಬಳಕೆದಾರರು 5% ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇನ್ನು ಉಳಿದಂತೆ ಎಕ್ಸ್ಚೇಂಜ್ ಆಫರ್‌ನಲ್ಲಿ 20,300 ರೂ ಗೆ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಈ ಫೋನ್‌ನಲ್ಲಿ ನೀವು 6.7 ಇಂಚಿನ ಪೂರ್ಣ HD+ ಡಿಸ್ಟ್ರೇಯನ್ನು ಹೊಂದಿದೆ. ಫೋನ್‌ನ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಮತ್ತು ಇದು OIS ವೈಶಿಷ್ಟ್ಯದೊಂದಿಗೆ ಬರುತ್ತದೆ. ಅದಲ್ಲದೇ ಈ ಫೋನ್ ಸೆಲ್ಪಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

advertisement

Redmi Note 12 Pro + 5G

Redmi Note 12 Pro + 5G ಈ ಫೋನ್‌ನ 8 GB RAM ಮತ್ತು 256 GB ಆಂತರಿಕ ಸಂಗ್ರಹಣೆಯೊಂದಿಗೆ ರೂಪಾಂತರದ ಬೆಲೆ 33,999 ರೂ. ಆದರೆ ಈ ಸೇಲ್ ನಲ್ಲಿ 17% ರಿಯಾಯಿತಿಯಲ್ಲಿ 27,999 ರೂಗೆ ಲಭ್ಯವಿದೆ. ಕೆಲವು ಆಯ್ದ ಬ್ಯಾಂಕ್‌ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 3,000 ರೂ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

ಅದಲ್ಲದೇ ಕಂಪನಿಯು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ 5% ಕ್ಯಾಶ್ ಬ್ಯಾಕ್ ನೀಡುತ್ತದೆ. ಈ ಸೇಲ್ ನಲ್ಲಿ ಎಕ್ಸ್ಚೇಂಜ್ ಆಫರ್‌ ಕೂಡ ಲಭ್ಯವಿದ್ದು, 20,400 ರೂಗೆ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು. ಈ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೇಳುವುದಾದರೆ ಫೋನ್‌ನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 6.67 ಇಂಚಿನ ಫೋನ್‌ನ ಡಿಸ್ಸೇ ಹೊಂದಿದ್ದು, MediaTek Dimension 1080 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Infinix Zero Ultra

Infinix Zero Ultra ಈ ಫೋನ್ 8 GB RAM ಮತ್ತು 256 GB ಆಂತರಿಕ ಸಂಗ್ರಹಣೆಯನ್ನು ಸಹ ಹೊಂದಿದ್ದು ಇದರ ಮಾರುಕಟ್ಟೆಯ ಬೆಲೆ 49,999 ರೂ. ಆದರೆ ಫಿಲ್ಪ್ ಕಾರ್ಟ್ ನಲ್ಲಿ 40% ರಿಯಾಯಿತಿಯೊಂದಿಗೆ 29,999 ರೂಗೆ ಖರೀದಿಸಬಹುದು. ಬ್ಯಾಂಕ್ ಆಫರ್‌ನಲ್ಲಿ ಈ ಫೋನ್‌ನಲ್ಲಿ 10% ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಈ ಫೋನ್ ಎಕ್ಸ್‌ಚೇಂಜ್ ಆಫರ್‌ನಲ್ಲಿ 22,350 ರೂವರೆಗೆ ಅಗ್ಗವಾಗಿ ಗ್ರಾಹಕರಿಗೆ ಸಿಗಲಿದೆ. 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, 32 ಮೆಗಾಪಿಕ್ಸೆಲ್ ಸೆಲ್ಸಿ ಕ್ಯಾಮೆರಾವನ್ನು ಹೊಂದಿದ್ದು, ಈ ಆಫರ್ ನಿಂದಾಗಿ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಈ ಮೇಲಿನ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.

advertisement

Leave A Reply

Your email address will not be published.