Karnataka Times
Trending Stories, Viral News, Gossips & Everything in Kannada

Forgery: ಆಸ್ತಿ ದಾಖಲೆ ವಂಚನೆ, ಪೋರ್ಜರಿ ತಡೆಗೆ ಇನ್ಮುಂದೆ ಕಠಿಣ ಕ್ರಮ, ಹೊಸ ವ್ಯವಸ್ಥೆ ಜಾರಿಗೆ!

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯು ಹೂಡಿಕೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾನೆ. ಅದರಲ್ಲೂ ಇಂದು ಚಿನ್ನ, ಹಣ ಹೂಡಿಕೆಗೆಗಿಂತ ಆಸ್ತಿ, ಭೂಮಿ ಖರೀದಿಗೆ ಹೆಚ್ಚಿನ ಒತ್ತನ್ನು ಜನರು ನೀಡುತ್ತಾರೆ. ಆದರೆ ಇಂದು ಈ ಆಧುನಿಕ ಯುಗದಲ್ಲಿ ಆಸ್ತಿ, ಭೂ ವಿಚಾರವಾಗಿ ಮೋಸದ ವಂಚನೆಗಳು ಸಹ ಹೆಚ್ಚುತ್ತಿದೆ. ಇದಕ್ಕಾಗಿ ಸರಕಾರ ಇಂದು ಕಠಿಣ ಕ್ರಮವನ್ನು ಕೈಗೊಂಡಿದೆ. ಹೌದು ಆಸ್ತಿ ದಾಖಲೆ ವಂಚನೆ, ಫೋರ್ಜರಿ (Forgery) ತಡೆಗೆ ಮಹತ್ವದ ಕ್ರಮ ರೂಪಿಸಿದೆ.

ಡಿಜಿಟಲಿಕರಣ ಪ್ರಕ್ರಿಯೆ:

 

 

ಇನ್ಮುಂದೆ ಆಸ್ತಿ ದಾಖಲೆಯ (Property Documents)  ಮೋಸ, ವಂಚನೆ ಪೋರ್ಜರಿ (Forgery) ತಪ್ಪಿಸಲು ರಾಜ್ಯ ಸರ್ಕಾರವು ಈ ಕಠಿಣ ಕ್ರಮ ರೂಪಿಸಿದೆ.‌ ಇನ್ಮುಂದೆ ಭೂ ದಾಖಲೆಗಳ ಸಂಪೂರ್ಣ ವಿವರ ಮಾಹಿತಿಗಳು ಡಿಜಿಟಲೀಕರಣ ಮಾಹಿತಿ ಮೂಲಕ ದೊರೆಯುತ್ತದೆ. ಇದರಿಂದ ಸಾವರ್ಜನಿಕರಿಗೆ ಬಹಳಷ್ಟು ಅನುಕೂಲ ವಾಗಲಿದೆ. ಕಂದಾಯ ಇಲಾಖೆಗೆ, ತಾಲೂಕು ಕಚೇರಿಗಳಿಗೆ ಇತ್ಯಾದಿ ಅಲೆದಾಡುವುದನ್ನು ತಪ್ಪಿಸಿ ಮನೆಯಿಂದಲೇ ದಾಖಲಾತಿ ಪಡೆಯಬಹುದಾಗಿದೆ.

advertisement

ಯಾವಾಗ ಆರಂಭ

ಈ ಡಿಜಿಟಲ್ ವ್ಯವಸ್ಥೆಯು ಜನವರಿ ಮೊದಲ ವಾರದಿಂದ ಆರಂಭವಾಗಲಿದೆ. ಭೂ ದಾಖಲೆಗಳನ್ನು ಡಿಜಿಟಲೈಟ್‌ (Digitalite) ಮಾಡಿ ಭೂದಾಖಲೆ ವಿವರ ಗಳೊಂದಿಗೆ ಭೂ ಮಾಲಿಕರ ಆಧಾರ್‌ (Aadhaar) ಜೋಡಣೆ ಯನ್ನು ಸಹ ಮಾಡಲಿದೆ.

ಪ್ರಯೋಜನ ಏನು?

ಈ ಡಿಜಿಟಲ್ ಭೂ ದಾಖಲೆಯಿಂದ ಬಹಳಷ್ಟು ಪ್ರಯೋಜನ ಇದೆ.ಇದರ ಮೂಲಕ ಸುಲಭವಾಗಿ ನೀವು ದಾಖಲೆಗಳನ್ನು ಪಡೆಯಬಹುದಾಗಿದ್ದು ಸರಿಯಾದ ರೀತಿಯಲ್ಲಿ ನೀವು ಭೂಮಿ ಹಂಚಿಕೆ ಮಾಡಬಹುದಾಗಿದೆ. ಇನ್ನೂ ಭೂಮಿಯ ಡಿಜಿಟಲ್ ದಾಖಲೆ ಇದ್ದರೆ ಜಮೀನಿನ ದಾಖಲೆಯನ್ನು ನೋಡುವುದು ಸುಲಭವಾಗುತ್ತದೆ. ಇನ್ಮುಂದೆ ನೀವು ಸಾಮಾನ್ಯ ಸೇವಾ ಕೇಂದ್ರದಲ್ಲು ವ್ಯಕ್ತಿ ತನ್ನ ಜಮೀನಿನ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಭೂಮಾಲಿಕರು ನಕಲಿ ದಾಖಲೆ (Forgery) ಸೃಷ್ಟಿ ಮಾಡಿ ಜಮೀನಿನ ಮಾರಾಟವನ್ನು ಮಾಡಲು ತಪ್ಪಿಸಬಹುದು. ಅದೇ ರೀತಿ ಮೋಸದ ವಹಿವಾಟುಗಳು ನಡೆದರೆ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

advertisement

Leave A Reply

Your email address will not be published.