Karnataka Times
Trending Stories, Viral News, Gossips & Everything in Kannada

Jio Plans: ಜಿಯೋ ಗ್ರಾಹಕರಿಗೆ ಅದ್ಭುತ ಪ್ಲ್ಯಾನ್, ಕೇವಲ 120 ರೂ. ಗೆ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯ ಸಿಗಲಿದೆ.

advertisement

ರಿಲಯನ್ಸ್ ಜಿಯೋ (Reliance Jio) ಜನಪ್ರಿಯ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿದ್ದು ಇತರ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ. ಈಗಾಗಲೇ ಜಿಯೋ (Jio) ತನ್ನ ಗ್ರಾಹಕರಿಗೆ ವಿಶೇಷವಾದ ಪ್ಲಾನ್ ಗಳನ್ನು ಪರಿಚಯಿಸಿದೆ. ಅದಲ್ಲದೇ ಜಿಯೋ ತನ್ನ ಅಗ್ಗದ ಯೋಜನೆಗಳಿಂದಾಗಿ ಗ್ರಾಹಕರ ಗಮನ ಸೆಳೆದಿದೆ. ಹಾಗಾದ್ರೆ ಜಿಯೋ ಗ್ರಾಹಕರಿಗೆ ಲಭ್ಯವಿರುವ ಅಗ್ಗದ ಯೋಜನೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ 123 ರೂ ಪ್ಲಾನ್:

 

 

advertisement

ಉಚಿತ ಕರೆಯ ಜೊತೆಗೆ ಇಂಟರ್‌ನೆಟ್‌ ಅಗತ್ಯ ಇರುವವರಿಗೆ ಹೊಸ ಪ್ಲಾನ್‌ ಬಿಡುಗಡೆ ಮಾಡಲಾಗಿದೆ. ಈ ಅಗ್ಗದ ರೀಚಾರ್ಜ್ ಪ್ಲಾನ್ ಕೇವಲ 123 ರೂಪಾಯಿಗೆ 28 ​​ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜಿಯೋ (Jio) ದ ಈ ಅಗ್ಗದ ಯೋಜನೆಯಲ್ಲಿ, ಬಳಕೆದಾರರಿಗೆ 28 ​​ದಿನಗಳ ಕಾಲ 14GB ಡೇಟಾ ಸೌಲಭ್ಯವು ಲಭ್ಯವಿದೆ. ಅಂದರೆ ದಿನಕ್ಕೆ 500MB ಡೇಟಾ ಬಳಕೆ ಮಾಡಬಹುದು. ಉಚಿತ ಕರೆ ಹಾಗೂ ಡೇಟಾವು ಲಭ್ಯವಿರುವ ಕಾರಣ ಇದು ಅಗ್ಗದ ಯೋಜನೆಯನ್ನು ಬಯಸುವವರಿಗೆ ಬೆಸ್ಟ್ ಎನ್ನಬಹುದು.

ಜಿಯೋ 1234 ರೂ ಪ್ಲಾನ್:

ಜಿಯೋ ಗ್ರಾಹಕರು ಒಂದು ವರ್ಷದ ರಿಚಾರ್ಜ್ ಅನ್ನು ಒಮ್ಮೆಲೇ ಮಾಡಬೇಕು ಎಂದುಕೊಂಡಿದ್ದರೆ ಅಂತಹವರಿಗೆ 1234 ರೂಪಾಯಿಗಳ ಯೋಜನೆಯು ಬೆಸ್ಟ್ ಎನ್ನಬಹುದು. 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯಲ್ಲಿ ಅನಿಯಮಿತ ಕರೆ ಹಾಗೂ 128 GB ಡೇಟಾ ಪಡೆಯಬಹುದು. ಇದು ಕೇವಲ ದೀರ್ಘ ವ್ಯಾಲಿಡಿಟಿ ಮತ್ತು ಅನಿಯಮಿತ ಕರೆಯನ್ನು ಬಯಸುವವರಿಗಾಗಿಯೇ ಇರುವ ಪ್ಲಾನ್ ಆಗಿದೆ.

advertisement

Leave A Reply

Your email address will not be published.