Karnataka Times
Trending Stories, Viral News, Gossips & Everything in Kannada

ಗೃಹಲಕ್ಹ್ಮೀಗಿಂತ 10 ಪಟ್ಟು ಲಾಭ ಇರುವ ಕೇಂದ್ರದ ಈ ಯೋಜನೆಗೆ ಮುಗಿಬಿದ್ದ ಜನ

advertisement

ಅನೇಕ ಯೋಜನೆಗಳನ್ನು ಪರಿಚಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೈಪೋಟಿ ನಡೆಸುತ್ತಿವೆ ಎನ್ನಬಹುದು. ರಾಜ್ಯ ಸರಕಾರದ ಪಂಚ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಹಿರಿಯ ಮಹಿಳೆಯರಿಗೆ 2000 ರೂಪಾಯಿ ತನಕ ಮಾಸಿಕ ಕಂತಿನ ರೂಪದಲ್ಲಿ ಹಣ ನೀಡಲಾಗುತ್ತಿದೆ. ಈಗಾಗಲೇ ಅನೇಕ ಕಂತಿನ ಹಣ ರಿಲೀಸ್ ಕೂಡ ಆಗಿದೆ ಆದರೆ ಅದಕ್ಕಿಂತ ಬಹಳ ಅತ್ಯುತ್ತಮವಾದ ಯೋಜನೆ ಒಂದರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದು ಇದನ್ನು ಪೂರ್ತಿ ಓದಿ ಅರ್ಥೈಸಿಕೊಳ್ಳಬಹುದು.

WhatsApp Join Now
Telegram Join Now

ಹಣ ಜೀವನದಲ್ಲಿ ಅವಶ್ಯಕ ಎಂದು ತಿಳಿದಿದ್ದರೂ ಕೂಡ ಆರೋಗ್ಯ ಅದಕ್ಕಿಂತ ಅಧಿಕ ಅಗತ್ಯ ಇದೆ. ಇಂದು ಹಣದ ಹಿಂದೆ ಹೋಗುವ ಜನರು ಬಳಿಕ ಅದೆ ಹಣವನ್ನು ಆಸ್ಪತ್ರೆಗೆ ಸುರಿಯುವಷ್ಟರ ಮಟ್ಟಿಗೆ ಇಂದಿನ ಸಮಾಜ ಬೆಳವಣಿಗೆ ಆಗುತ್ತಿದೆ.

ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಸರಕಾರಿ ಹಾಗೂ ಆಯ್ದ ಸರಕಾರೇತರ ಆಸ್ಪತ್ರೆಯಲ್ಲಿ 5ಲಕ್ಷ ರೂಪಾಯಿ ತನಕವು ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಆಯುಷ್ಮಾನ್ ಹಾಗೂ ಪ್ರಧಾನ ಮಂತ್ರಿ ಜನ ಆರೋಗ್ಯ ಎರಡು ಸೇವೆಯನ್ನು ಒಬ್ಬರು ಪಡೆಯಲು ಅವಕಾಶ ಇದೆ ಎನ್ನಬಹುದು. ಇದರ ಜೊತೆಗೆ ಇ ಶ್ರಮ್ ಕಾರ್ಡ್ ಕೂಡ ಬಳಕೆಯಲ್ಲಿ ಇದ್ದು ಅದರಿಂದ ಸಿಗುವ ಪ್ರಯೋಜನೆ ಗೃಹಲಕ್ಷ್ಮೀ ಗಿಂತ ಅಧಿಕ ಎನ್ನಬಹುದು.

ಕಾರ್ಮಿಕರಿಗೆ ಉಪಯುಕ್ತ ಕಾರ್ಡ್:

 

Image Source: Samachar Jagat

 

advertisement

ವಲಸೆ ಕಾರ್ಮಿಕರಿಗೆ ಹಾಗೂ ಮನೆ ಕೆಲಸಗಾರರಿಗೆ ಇ ಶ್ರಮ್ ಕಾರ್ಡ್ (E-Shram Card) ನಿಂದ ಅನೇಕ ಪ್ರಯೋಜನೆ ಸಿಗುತ್ತದೆ ಎಂದು ಹೇಳಬಹುದು.ಇ ಶ್ರಮ್ ಕಾರ್ಡ್ ಹೊಂದಿರುವವರಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಮಿಕರ ರಾಷ್ಟ್ರೀಯ ಡೇಟಾ ಬೇಸ್ ಅನ್ನು ಪ್ರಾರಂಭ ಮಾಡಿದ್ದು ಕಾರ್ಮಿಕರಿಗೆ ಬಹಳ ಅನುಕೂಲ ಆಗಿದೆ.ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ ಈ ಒಂದು ಕಾರ್ಡ್ ಸಿಗಲಿದ್ದು ಇ ಶ್ರಮ್ ಪೋರ್ಟಲ್ ಮೂಲಕ ಅರ್ಜಿ ಹಾಕಿ ಫಲಾನುಭವಿಗಳಾಗಬಹುದು.

ಈ ಒಂದು ಇ ಶ್ರಮ್ ಕಾರ್ಡ್ (E-Shram Card) ಅನ್ನು ಅಂಗಡಿ ಕೆಲಸ ಮಾಡುವವರು, ಸೇಲ್ಸ್ ಗರ್ಲ್, ಸೇಲ್ಸ್ ಬಾಯ್, ಮನೆ ಕೆಲಸದವರು, ರಿಕ್ಷಾ, ಆಟೋ ಚಾಲಕರು ಇತ್ಯಾದಿ ಕೆಲಸ ಮಾಡಿದ್ದವರು ಅಸಂಘಟಿತರಾಗಿದ್ದರು 18 ರಿಂದ 59 ವರ್ಷದವರಿಗೆ ಇ ಶ್ರಮ್ ಕಾರ್ಡ್ ಪಡೆಯಬಹುದು. ಸರಕಾರಿ ಉದ್ಯೋಗ ಹಾಗೂ ಇತರ ಆದಾಯ ತೆರಿಗೆ ರಿಟರ್ನ್ ಕಟ್ಟುವವರಿಗೆ ಇ ಶ್ರಮ್ ಕಾರ್ಡ್ ಸಿಗಲಾರದು. NPS,EPSO, CPS, ESIC ಸದಸ್ಯರಿಗೂ ಇ ಶ್ರಮ್ ಕಾರ್ಡ್ ಸಿಗುವುದಿಲ್ಲ.

 

Image Source: TV9

 

ಈ ಒಂದು ಇ ಶ್ರಮ್ ಕಾರ್ಡ್ ಯೋಜನೆಯ (E-Shram Card Scheme) ಮೂಲಕ ಕಾರ್ಮಿಕರಿಗೆ 2 ಲಕ್ಷ ರೂಪಾಯಿ ತನಕ ಅಪಘಾತ ವಿಮೆ ಹಾಗೂ ಸರಕಾರ ದಿಂದ ನೀಡಲಾಗುವ ಅಷ್ಟು ಹೊಸ ಯೋಜನೆ ಪ್ರಯೋಜನೆ ಸಿಗಲಿದೆ. 5ಲಕ್ಷ ರೂಪಾಯಿ ತನಕವು ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. 60 ವರ್ಷದ ನಂತರ ಇ ಶ್ರಮ್ ಕಾರ್ಡ್ ಹೊಂದಿದ್ದವರು ತಿಂಗಳಿಗೆ 3000 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ. ಅದೇ ರೀತಿ ಎಲ್ಲ ಕಾರ್ಮಿಕರಿಗೆ ಮಾಸಿಕ 500 ರಿಂದ 1000 ರೂಪಾಯಿ, ಮನೆ ಕಟ್ಟಲು ಬೇಕಾದ ಆರ್ಥಿಕ ನೆರವು ಕೂಡ ಇ ಶ್ರಮ್ ಕಾರ್ಡ್ ಅಡಿಯಲ್ಲಿ ನೀಡಲಾಗುವುದು.

ಅಷ್ಟು ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಸಹ ಈ ಯೋಜನೆ ಸಹಕಾರಿ ಆಗುವುದು. ಅದರ ಜೊತೆಗೆ ಕಾರ್ಮಿಕರ ಮಕ್ಕಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ಕೂಡ ನೀಡಲಾಗುವುದು ಹೀಗೆ ಕಾರ್ಮಿಕರಿಗೆ ಲಭ್ಯ ಆಗುವ ಅಷ್ಟು ಸೌಲಭ್ಯ ಸಿಗುತ್ತದೆ ಎನ್ನಬಹುದು. ಈ ಕಾರ್ಡ್ ಗೆ ಅರ್ಜಿ ಹಾಕುವವರು www.eshram.gov.in ಭೇಟಿ ನೀಡಿ. ಆಧಾರ್ , ಮೊಬೈಲ್ ಸಂಖ್ಯೆ , ಬ್ಯಾಂಕ್ ಖಾತೆ ಎಲ್ಲ ದಾಖಲೆ ಸಬ್ಮಿಟ್ ಮಾಡಿ ಅರ್ಜಿ ಹಾಕಿದರೆ ಅರ್ಹ ಫಲಾನುಭವಿಗಳಿಗೆ ಇ ಶ್ರಮ್ ಕಾರ್ಡ್ ಲಭ್ಯವಾಗಲಿದ್ದು ಸರಕಾರದ ಅನೇಕ ಪ್ರಯೋಜನೆ ಪಡೆಯಲು ಇದು ಬಹಳ ಅನುಕೂಲ ಆಗುವುದು.

advertisement

Leave A Reply

Your email address will not be published.