Karnataka Times
Trending Stories, Viral News, Gossips & Everything in Kannada

Ayushman Card: ಈ ದಾಖಲೆಗಳು ಇದ್ದರೆ ಮಾತ್ರ ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!

advertisement

ಆರೋಗ್ಯ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯ. ಆರೋಗ್ಯ ಸರಿ ಇದ್ದರೆ ಜೀವನ ಸುಖಕರ ವಾಗಿ ನಡೆಸಬಹುದು. ಮನುಷ್ಯನ ಬಳಿ ಎಷ್ಟು ಹಣವಿದ್ದರೂ ಮುಖ್ಯ ವಾಗುವುದಿಲ್ಲ ಆದರೆ ಎಷ್ಟು ಆರೋಗ್ಯವಂತರಾಗಿದ್ದೇವೆ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ. ಹಾಗಾಗಿ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಉಂಟಾದಾಗ ಅದರ ಖರ್ಚು ವೆಚ್ಚಗಳನ್ನು ಬಡ ವರ್ಗದ ಜನತೆ ನಿಭಾಯಿಸುವುದು ಕಷ್ಟ. ಹಾಗಾಗಿ ಕೇಂದ್ರ ಸರಕಾರವು ಆಯುಷ್ಮಾನ್ ಕಾರ್ಡ್ (Ayushman Card) ಜಾರಿಗೆ ತಂದಿದೆ.

ಆಸ್ಪತ್ರೆ ವೆಚ್ಚ ನಿಭಾಯಿಸಬಹುದು:

 

 

ಆಯುಷ್ಮಾನ್ ಭಾರತ್ ಯೋಜನೆಯು ಹಲವು ಬಡವರ್ಗದ ಜನತೆಗೆ ನೇರವಾಗಿದ್ದು ಮದ್ಯಮ ವರ್ಗದವರ ಪ್ರಮುಖ ಸಮಸ್ಯೆಯನ್ನು ಪರಿಹರಿಸಿದೆ. ಇಲ್ಲಿಯವರೆಗೆ ಸುಮಾರು 2 ಕೋಟಿಗೂ ಹೆಚ್ಚು ಜನರು ಈ ಯೋಜನೆಯಡಿ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆದು ಕೊಂಡಿದ್ದಾರೆ. ಚಿಕಿತ್ಸಾ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯ ಪಡೆದುಕೊಳ್ಳಬಹುದು

Ayushman Card ಯಾವ ಚಿಕಿತ್ಸೆಗೆ ಪಡೆಯಬಹುದು:

ತೀರ ಮಾರಕ ಕಾಯಿಲೆಗಳಾದ ಹೃದಯ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್, ನರರೋಗಗಳು, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು, ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿದಂತೆ ಹಲವು ಚಿಕಿತ್ಸೆ ಗಳ ಸೌಲಭ್ಯ ವನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ.

advertisement

ಡಿಜಿಟಲ್ ಮಿಷನ್:

ಅದೇ ರೀತಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯು (Ayushman Bharat Digital Mission Scheme) ಈಗ ದೇಶಾದ್ಯಂತ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪಡೆಯುವಲ್ಲಿ ಡಿಜಿಟಲ್ ಆರೋಗ್ಯ ಗುರುತಿನ ಚೀಟಿಯನ್ನು ಕೂಡ ಜಾರಿಗೆ ತಂದಿದೆ.

ಅಯುಷ್ಮಾನ್‌ ಕಾರ್ಡ್‌ (Ayushman Card) ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು:

 

 

  • Aadhaar Card
  • Ration Card
  • Income Certificate
  • Photo
  • Residence Certificate
  • Mobile Number etc.

ಆಯುಷ್ಮಾನ್ ಭಾರತ್ ಕಾರ್ಡ್ (Ayushman Card) ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೀವು https://pmjay.gov.in/ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

advertisement

Leave A Reply

Your email address will not be published.