Karnataka Times
Trending Stories, Viral News, Gossips & Everything in Kannada

Vishnu Statue: ಕೃಷ್ಣಾ ನದಿಯಲ್ಲಿ ವಿಷ್ಣುವಿನ ಮೂರ್ತಿ ಪ್ರತ್ಯಕ್ಷ, ಇದಕ್ಕಾಗಿ ಕರ್ನಾಟಕ ಮತ್ತು ತೆಲಂಗಾಣ ನಡುವೆ ಪೈಪೋಟಿ ನಡೆಯುತ್ತಿರುವುದೇಕೆ?

advertisement

ಇತ್ತೀಚಿಗಷ್ಟೇ ಕೃಷ್ಣಾ ನದಿಯಲ್ಲಿ ಸಿಕ್ಕ ವಿಷ್ಣುವಿನ ದಶಾವತಾರ ಮೂರ್ತಿಗಾಗಿ ಎರಡು ರಾಜ್ಯಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಕರ್ನಾಟಕದ ಭಕ್ತರು ಈ ಮೂರ್ತಿ ತಮಗೆ ಸೇರಿದ್ದು ಎಂದು ಹೇಳಿದರೆ ಅತ್ತ  ತೆಲಂಗಾಣ ಭಕ್ತರು ನಮ್ಮ ರಾಜ್ಯಕ್ಕೆ ಸೇರಿದ ಮೂರ್ತಿ ಎಂದು ತಕರಾರು ಎತ್ತಿದ್ದಾರೆ.

ಸದ್ಯ ಭಕ್ತರು ವಿಷ್ಣುವಿನ ಮೂರ್ತಿಯನ್ನು ದೇವಸೂಗೂರಿಗೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲಿನ ರಾಮಲಿಂಗೇಶ್ವರ ಮಂದಿರದಲ್ಲಿ ಮೂರ್ತಿಯನ್ನಿಟ್ಟಿದ್ದಾರೆ. ಅತ್ತ ವಿಷ್ಣುವಿನ ಮೂರ್ತಿ (Vishnu Statue) ಗಾಗಿ ಎರಡು ರಾಜ್ಯದ ಭಕ್ತರು ಪೈಪೋಟಿ ನಡೆಸುತ್ತಿದ್ದರೂ ಸಹ ಮೂರ್ತಿ ಬಗ್ಗೆ ಮಾಹಿತಿ ಗೊತ್ತಿರುವ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಸುಮ್ಮನಾಗಿದ್ದಾರೆ.

ಅಷ್ಟಕ್ಕೂ ಏನಿದು ಘಟನೆ?

ರಾಯಚೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹಾದುಹೋಗುವ ಕೃಷ್ಣಾ ನದಿಯಲ್ಲಿ ಶಂಖ ಚಕ್ರ ಹಿಡಿದಿರುವ ವಿಷ್ಣುವಿನ ಮೂರ್ತಿ (Vishnu Statue) ಸಿಕ್ಕಿದೆ. ಸುತ್ತಲೂ ದಶಾವತಾರಗಳ ಕೆತ್ತನೆಯನ್ನು ಒಳಗೊಂಡ ವಿಗ್ರಹ ಇದಾಗಿದೆ. ಇದರ ಜೊತೆಗೆ ಹಳೆಯದಾದ ಒಂದು ಶಿವಲಿಂಗವೂ ಸಿಕ್ಕಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ವೇಳೆ ವಿಗ್ರಹಗಳು ದೊರೆತಿವೆ.ರಾಯಚೂರು ಜಿಲ್ಲೆಯ ದೇವಸೂಗೂರು ಗ್ರಾಮದ ಬಳಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಶತಮಾನಗಳಷ್ಟು ಹಳೆಯದಾದ ಹಿಂದೂ ದೇವರ ವಿಗ್ರಹಗಳು ಪತ್ತೆ ಆಗಿವೆ. ಸಿಬ್ಬಂದಿ ನದಿಯಿಂದ ವಿಗ್ರಹಗಳನ್ನು ಸುರಕ್ಷಿತವಾಗಿ ಹೊರತೆಗೆದು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ.

ರಾಜ್ಯದ ವಿರುದ್ಧ ತೆಲಂಗಾಣ ಖ್ಯಾತೆ?

ಈ ವಿಗ್ರಹಗಳು ನಮ್ಮವೆಂದು ಕರ್ನಾಟಕ ಹೇಳುತ್ತಿದ್ದರೆ, ಅತ್ತ ತೆಲಂಗಾಣ ರಾಜ್ಯ ತಮ್ಮವೆಂದು ಖ್ಯಾತೆ ತೆಗೆಯುವ ಸಾಧ್ಯತೆಗಳು ಇವೆ. ಈಗಾಗಲೇ ಈ ಕುರಿತು ಮಾತುಗಳು ಆ ರಾಜ್ಯದಲ್ಲಿ ಕೇಳಿ ಬರುತ್ತಿವೆ. ಅಧಿಕಾರಿಗಳ ಜಟಾಪಟಿಯಲ್ಲಿ ವಿಗ್ರಹ ರಕ್ಷಣೆಗೆ ಮುಂದಾಗಿಲ್ಲ ಎಂಬ ಆರೋಪಗಳನ್ನು ಅಧಿಕಾರಿಗಳು ಎದುರಿಸುತ್ತಿದ್ದಾರೆ.ಸೇತುವೆ ನಿರ್ಮಾಣದ ಸ್ಥಳದಲ್ಲಿ ಈ ವಿಗ್ರಹಗಳು ಪತ್ತೆ ಆಗುತ್ತಿದ್ದಂತೆ ಸ್ಥಳೀಯರು ದೌಡಾಯಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಜನಜಂಗುಳಿ ಕಂಡು ಬಂದಿದೆ. ಸಿಕ್ಕ ವಿಗ್ರಹಗಳ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೆಚ್ಚು ಹೆಚ್ಚು ಶೇರ್‌ಗಳು ಆಗುತ್ತಿವೆ.

advertisement

ಅಯೋಧ್ಯೆ ಶ್ರಿರಾಮ ಮಂದಿರಕ್ಕೆ ಹೋಲಿಕೆ:

 

 

ವಿಗ್ರಹ ಪತ್ತೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ವಿಗ್ರಹಗಳಲ್ಲಿ ಶ್ರೀಕೃಷ್ಣನ ದಶಾವತಾರ ಮತ್ತು ಶಿವಲಿಂಗ ವಿಗ್ರಹಗಳು ಇವೆ. ಉತ್ತರ ಪ್ರದೇಶದ ಶ್ರೀ ಅಯೋಧ್ಯೆಯ ರಾಮಮಂದಿರ (Shri Ayodhya Ram Mandir) ದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹದೊಂದಿಗೆ ಪತ್ತೆಯಾದ ವಿಗ್ರಹಗಳನ್ನು ಹೋಲಿಕೆ ಮಾಡುತ್ತಿದ್ದಾರೆ.

ಶತಮಾನಗಳಷ್ಟು ಹಳೇಯದಾದ ಈ ವಿಗ್ರಹವು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವಂತೆ ಕಂಡು ಬರುತ್ತಿವೆ. ಸುತ್ತಲೂ ವಿಕಿರಣ ಸೆಳವು ಹೊಂದಿರುವ ಪೀಠದ ಮೇಲೆ ರಚಿಸಲಾಗಿದೆ. ಈ ಶಿಲ್ಪವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಸೇರಿದಂತೆ ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತಿನಿಧಿಸುತ್ತದೆ. ಈ ಬಗ್ಗೆ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಉಪನ್ಯಾಸಕಿ ಡಾ ಪದ್ಮಜಾ ದೇಸಾಯಿ ಅವರು ಮಾಹಿತಿ ನೀಡಿದ್ದಾರೆ.

ವಿಗ್ರಹದ ನಿಂತಿರುವ ಭಂಗಿಯು ಆಗಮಗಳಲ್ಲಿ ಸೂಚಿಸಲಾದ ಮಾರ್ಗಸೂಚಿಗಳಿಗೆ ಸಂಕೀರ್ಣವಾಗಿದ್ದು, ಸುಂದರವಾಗಿ ರಚಿಸಲಾಗಿದೆ. ಹಿಂದೂ ದೇವಾಲಯಗಳ ವ್ಯಾಜ್ಯ ಪ್ರಕರಣಗಳಲ್ಲಿ ಹಿಂದುಗಳಿಗೆ ನಿರಂತವಾಗಿ ಜಯವಾಗುತ್ತಿದೆ. ಇದೀಗ ಈ ವಿಗ್ರಹಗಳು ಪತ್ತೆ ಸನಾತನ ಧರ್ಮ, ಹಿಂದುತ್ವ ಸಂಕೇತವಾಗಿವೆ ಎಂದು ಕೆಲವು ಹೇಳುತ್ತಿದ್ದಾರೆ.

advertisement

Leave A Reply

Your email address will not be published.