Karnataka Times
Trending Stories, Viral News, Gossips & Everything in Kannada

PM Vishwakarma Yojana: ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿದಿನ 500 ರೂಪಾಯಿ, ಪಡೆಯುವುದು ಹೇಗೆ ತಿಳಿದುಕೊಳ್ಳಿ!

advertisement

ಕೇಂದ್ರ ಸರ್ಕಾರ ಜನರ ಹಿತಾಸಕ್ತಿಗೋಸ್ಕರ ಸಾಕಷ್ಟು ಉತ್ತಮವಾಗಿರುವ, ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ಸಾಕಷ್ಟು ಜನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಳೆದ 2022 ಸಪ್ಟೆಂಬರ್ 17ರಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಮಹತ್ವ ಹಾಗೂ ಇದರಿಂದ ಯಾವ ರೀತಿಯ ಲಾಭ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

Benefits of PM Vishwakarma Yojana:

ಸುಮಾರು 18 ಸಾಂಪ್ರದಾಯಿಕ ವ್ಯವಹಾರಗಳನ್ನು ಮಾಡುವ ಕರಕುಶಲ ಉದ್ಯಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಹೆಚ್ಚು ಪ್ರಯೋಜನ ನೀಡಲಿದೆ. 18 ವರ್ಷ ವಯಸ್ಸಾಗಿರುವ ಸಾಂಪ್ರದಾಯಿಕ ಉದ್ಯಮವನ್ನು ಮೆಚ್ಚಿಕೊಂಡಿರುವ ಯಾರಾದ್ರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

PM Vishwakarma Yojana ಯ ಫಲಾನುಭವಿಗಳು ಯಾರು?

 

advertisement

 

ಕಲ್ಲು ಒಡೆಯುವುದು, ಸುತ್ತಿಗೆ (Hammer) ಮತ್ತು ಟೂಲ್ ಕಿಟ್ (Tool Kit) ತಯಾರಿಸುವುದು, ಕಮ್ಮಾರರು, ಅಕ್ಕಸಾಲಿಗರು, ಗೊಂಬೆ ಅಥವಾ ಆಟಿಕೆ ತಯಾರಿಸುವವರು, ಮೀನುಗಾರಿಕೆಯ ಬಲೆ ತಯಾರಿಸುವವರು, ಕೆತ್ತನೆ ಕೆಲಸ ಮಾಡುವವರು, ಮೇಸ್ತ್ರಿ, ಧೋಣಿ ಕಟ್ಟುವವರು, ಚಮ್ಮಾರರು, ಶೂ ತಯಾರಕರು, ಬುಟ್ಟಿ, ಚಾಪೆ, ಪೊರಕೆ ತಯಾರಿಸುವವರು, ಟೈಲರಿಂಗ್ ಮಾಡುವವರು ಹೀಗೆ 18 ಸಾಂಪ್ರದಾಯಿಕ ಉದ್ಯಮವನ್ನು ಮಾಡುತ್ತಿರುವವರು ವಿಶ್ವಕರ್ಮ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಈ ಯೋಜನೆ ಅಡಿಯಲ್ಲಿ ಸಿಗುವ ಪ್ರಯೋಜನ ನೋಡುವುದಾದರೆ ಯಾವುದೇ ಗ್ಯಾರಂಟಿ ಇಲ್ಲದೆ ಮೊದಲು ಒಂದು ಲಕ್ಷ ರೂಪಾಯಿ ಹಾಗೂ ಆ ಹಣವನ್ನು ಮರುಪಾವತಿ ಮಾಡಿದ ನಂತರ 2,000ಗಳನ್ನು ಸಾಲವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಕೇವಲ 5% ನಷ್ಟು ಬಡ್ಡಿದರ ವಿಧಿಸಲಾಗುವುದು. ಇನ್ನು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ವಿಶ್ವಕರ್ಮ ಐಡಿ ಕಾರ್ಡ್ ಕೂಡ ಕೊಡಲಾಗುತ್ತದೆ. ಇದರಿಂದ ಯಾವುದೇ ಎಕ್ಸಿಬಿಷನ್ (ಪ್ರದರ್ಶನ ಮಳಿಗೆ) ಗಳಲ್ಲಿ ತಮ್ಮ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ನೇರವಾಗಿ ಪ್ರವೇಶ ಪಡೆಯಬಹುದು. ಇನ್ನು ಮೂಲಭೂತ ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಜೊತೆಗೆ ತರಬೇತಿಯ ಸಮಯದಲ್ಲಿ ಪ್ರತಿದಿನ 500 ರೂಪಾಯಿಗಳನ್ನು ಸರ್ಕಾರವೇ ಕೊಡುತ್ತದೆ ಜೊತೆಗೆ ತರಬೇತಿಯ ನಂತರ 15,000 ಪ್ರೋತ್ಸಾಹ ಧನವನ್ನು ಟೂಲ್ ಕಿಟ್ ಖರೀದಿಗಾಗಿ ನೀಡಲಾಗುವುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಯನ್ನು ನೀಡಿ ದಾಖಲೆಗಳನ್ನು ಅಪ್ಲೋಡ್ ಮಾಡಿದ್ರೆ ಯೋಜನೆಗೆ ಅರ್ಜಿ ಸಲ್ಲಿಕೆ ಆಗುತ್ತದೆ. ಸ್ವಂತ ಉದ್ಯಮ ಆರಂಭಿಸುವುದು ಬಯಸುವವರು ಅಥವಾ ಈಗಾಗಲೇ ಸ್ವಂತ ಉದ್ಯಮ ಮಾಡುತ್ತಿರುವವರು ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಬಯಸಿದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸುಲಭ ಸಾಲ ಸೌಲಭ್ಯ ಪಡೆಯಬಹುದು.

advertisement

Leave A Reply

Your email address will not be published.