Karnataka Times
Trending Stories, Viral News, Gossips & Everything in Kannada

Railway Station: ರೈಲ್ವೆ ನಿಲ್ದಾಣದಲ್ಲಿ ನೀವು ಕೂಡ ಅಂಗಡಿ ಆರಂಭಿಸಬಹುದು, ಇದಕ್ಕೆ ಯಾರ ಪರ್ಮಿಷನ್ ಬೇಕು ಗೊತ್ತಾ?

advertisement

ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲು ಜಾಲ ಹೊಂದಿರುವ ದೇಶ ಭಾರತ. ನಮ್ಮಲ್ಲಿ ಪ್ರತಿದಿನ ಎರಡು ಕೋಟಿಗೂ ಹೆಚ್ಚು ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದೀಗ ರೈಲ್ವೆ ಇಲಾಖೆ ಸಾಕಷ್ಟು ಆಧುನಿಕತೆಯನ್ನು ಅಳವಡಿಸಿಕೊಂಡಿದ್ದು ರೈಲು ಪ್ರಯಾಣ ಇನ್ನಷ್ಟು ಸುಖಮಯವಾಗಿಸಿದೆ. ಅಂಗವಾಗಿರುವ ರೈಲ್ವೆ ಪ್ರಯಾಣ ಆರಮದಾಯಕ ಪ್ರಯಾಣವು ಆಗಿದೆ.

ರೈಲ್ವೆ ನಿಲ್ದಾಣದಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ತಿಂಡಿ ಹಾಗೂ ಇತರ ವಸ್ತುಗಳು ಸಿಗುತ್ತವೆ. ರೈಲ್ವೆ ನಿಲ್ದಾಣ (Railway Station) ದ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ನೀವು ಕಾಣಬಹುದು. ಹಾಗೆ ನೀವು ಕೂಡ ಸಣ್ಣ ವ್ಯಾಪಾರ ಆರಂಭಿಸಲು ಬಯಸಿದರೆ ಅಂಗಡಿ ಆರಂಭಿಸಬಹುದು. ಇದಕ್ಕೆ ಬೇಕಾಗಿರುವ ಪರ್ಮಿಷನ್ ಎಲ್ಲಿಂದ ತೆಗೆದುಕೊಳ್ಳಬೇಕು ಗೊತ್ತಾ?

ರೈಲ್ವೆ ನಿಲ್ದಾಣದಲ್ಲಿ ಅಂಗಡಿ ಆರಂಭಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ?

 

 

advertisement

ಭಾರತೀಯ ರೈಲ್ವೆ ರೈಲುಗಳಲ್ಲಿ ಅಡುಗೆ ಮಾಡಲು ಹಾಗೂ ರೈಲ್ವೆ ನಿಲ್ದಾಣದಲ್ಲಿ ಆಹಾರ ಮಳಿಗೆ ಮತ್ತು ಇತರ ಸ್ಟಾಲ್ ಗಳನ್ನು ಆರಂಭಿಸಲು ಟೆಂಡರ್ ಕರೆಯುತ್ತದೆ. ನೀವು ಅರ್ಜಿ ಸಲ್ಲಿಸಿದರೆ ಈ ಟೆಂಡರ್ ಗಳಲ್ಲಿ ಭಾಗವಹಿಸಬಹುದು. ಅಂಗಡಿಯನ್ನ ಸ್ಥಾಪಿಸಲು ಟೆಂಡರ್ ನ ಎಲ್ಲಾ ನಿಯಮಗಳನ್ನು ಪಾಲಿಸಿದರೆ ನಿಮಗೂ ಪರವಾನಿಗೆ ಸಿಗುತ್ತದೆ. ಈ ರೀತಿ ಟೆಂಡರ್ ಫೈನಲ್ ಮಾಡುವ ಸಂಪೂರ್ಣ ಜವಾಬ್ದಾರಿ IRCTCಯದ್ದು.

ಟೆಂಡರ್ ಗೆ ನೀವು ಅರ್ಜಿ ಸಲ್ಲಿಸಲು IRCTC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಟೆಂಡರ್ ಆಯ್ಕೆ ಮಾಡಲು ಅವಕಾಶ ಇರುತ್ತದೆ. ಇನ್ನು ಒಂದು ವೇಳೆ ನೀವು ರೈಲ್ವೆ ನಿಲ್ದಾಣದಲ್ಲಿ ಆಹಾರ ಮಳಿಗೆ ಅಥವಾ ಇತರ ಸ್ಟೇಷನರಿ ಅಂಗಡಿ ತೆರೆಯಲು ಎಷ್ಟು ಬಾಡಿಗೆ ಪಾವತಿಸಬೇಕು ಎನ್ನುವ ಗೊಂದಲ ಇರಬಹುದು.

ಟೆಂಡರ್ ನಲ್ಲಿ ಅಂಗಡಿಯ ಬಾಡಿಗೆ, ಬೆಲೆ ಮೊದಲಾದ ವಿಚಾರಗಳನ್ನು ನಿರ್ಧರಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನೀವು ಚಹಾ, ಕಾಫಿ, ಬ್ರೆಡ್ ಇತರ ಆಹಾರ ಹಾಗೂ ಸ್ಟೇಷನರಿ ಅಂಗಡಿ ಆರಂಭಿಸುವುದಾದರೆ 50,000ಗಳಿಂದ 5 ಲಕ್ಷ ರೂಪಾಯಿಗಳವರೆಗೆ ಪಾವತಿ ಮಾಡಬೇಕಾಗುತ್ತದೆ. ನೀವು ಐ ಆರ್ ಸಿ ಟಿ ಸಿ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ ಬಳಿಕ ಪಾವತಿ ಮಾಡಬೇಕಾಗಿರುವ ಮೊತ್ತದ ಬಗ್ಗೆ ಮಾಹಿತಿ ಪಡೆಯಬಹುದು.

ರೈಲ್ವೆ ನಿಲ್ದಾಣದಲ್ಲಿ ಅಂಗಡಿ ತೆರೆಯುವುದು ಅತ್ಯಂತ ಲಾಭದಾಯಕ ಉದ್ದಿಮೆ ಆಗಿದ್ದು, ನೀವು ಸ್ವಲ್ಪ ಮುತುವರ್ಜಿಯಿಂದ ಅಂಗಡಿ ಇಡಬಹುದಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ನೀವು ಸುಲಭವಾಗಿ ಹಣ ಸಂಪಾದನೆ ಮಾಡಲು ಸಾಧ್ಯವಿದೆ.

advertisement

Leave A Reply

Your email address will not be published.