Karnataka Times
Trending Stories, Viral News, Gossips & Everything in Kannada

LIC Scholarship: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ LIC ಕೊಡುತ್ತಿದೆ 25,000 ವಿದ್ಯಾಧನ, ಈ ದಾಖಲೆ ಅಗತ್ಯ

advertisement

ಶೈಕ್ಷಣಿಕ ಪ್ರಗತಿಗಾಗಿ ಇತ್ತೀಚಿನ ದಿನದಲ್ಲಿ ಸಹಾಯಧನ, ಪ್ರೋತ್ಸಾಹ ಧನ ನೀಡುವ ಪ್ರಮಾಣ ಅಧಿಕವಾಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆ ಮಾತ್ರವಲ್ಲದೇ ಖಾಸಗಿ ಸಂಸ್ಥೆಗಳು ಕೂಡ ತಮ್ಮ ಲಾಭದಲ್ಲಿ ಇಂತಿಷ್ಟು ಪ್ರಮಾಣದ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಶಕ್ಕೆ ಕೊಡುಗೆ ನೀಡುತ್ತಾ ಬಂದಿದೆ‌‌. ಇದೀಗ LIC ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್ ನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಧನ್ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ವಿದ್ಯಾಭ್ಯಾಸದ ಆಧಾರ ಮೇಲೆ ಇಲ್ಲಿ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ.

ಯಾರಿಗೆ ಸಿಗಲಿದೆ?

 

 

LIC ಅಧೀನದ ಈ ಒಂದು ಸ್ಕಾಲರ್ ಶಿಪ್ ಅನ್ನುವುದು SSLC ,PUC ಹಾಗೂ ಸ್ನಾತಕೋತ್ತರ ಪದವಿ ಮಾಡುತ್ತಿರುವವರಿಗೆ ಅನುಕೂಲ ಆಗಲಿ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಹಾಗಾಗಿ ಹಿಂದುಳಿದ ವರ್ಗದ ಸಮುದಾಯದವರು ಈ ಒಂದು ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 25,000ರೂಪಾಯಿನಂತೆ ವಿದ್ಯಾರ್ಥಿ ವೇತನ ಸಹ ಲಭ್ಯವಾಗಲಿದೆ.

ಕೆಲ ನಿರ್ದಿಷ್ಟ ಮಾನದಂಡ:

advertisement

ವಿದ್ಯಾರ್ಥಿ ವೇತನ ನೀಡಲು ಕೂಡ ಕೆಲ ನಿರ್ದಿಷ್ಟ ಮಾನದಂಡ ಅನುಸರಿಸಲಾಗಿದೆ. ಎಸೆಸೆಲ್ಸಿ ಉತ್ತೀರ್ಣರಾಗಿದ್ದು ಪಿಯು ವ್ಯಾಸಾಂಗ ಮಾಡುತ್ತಿರಬೇಕು. ಪಿಯುಸಿ ಉತ್ತೀರ್ಣರಾದವರು ಪದವಿ , ಡಿಪ್ಲೋಮಾ ಕೋರ್ಸ್ ನಲ್ಲಿ ಸೇರಿರಬೇಕು ಅದೇ ರೀತಿ ಡಿಗ್ರಿ ಮುಗಿದವರು ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದರೆ ಮಾತ್ರವೇ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 60% ಕನಿಷ್ಟ ಅಂಕವಾದರೂ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 3.60 ಲಕ್ಷ ರೂಪಾಯಿ ಮೀರಿರಬಾರದು.

ಈ ದಾಖಲೆ ಅಗತ್ಯ:

ಅರ್ಜಿ ಸಲ್ಲಿಸಲು ಕೂಡ ಕೆಲ ನಿರ್ದಿಷ್ಟ ದಾಖಲೆಗಳು ಅಗತ್ಯವಾಗಿದೆ. Aadhaar Card, Relevant Mark Sheet, UG Certificate, Photograph of Candidate, Bank Pass Book, Current Fee Receipt of Studying, Affidavit, ಹೀಗೆ ಅರ್ಜಿ ಸಲ್ಲಿಸಿದ್ದ ಎಸೆಸೆಲ್ಸಿ ಅಭ್ಯರ್ಥಿಗಳಿಗೆ 10,000, ಪದವಿಗೆ ಮೂರು ವರ್ಷದ ಅವಧಿಗೆ 25,000, ಸ್ನಾತಕೋತ್ತರ ಪದವಿ ಪಡೆಯುತ್ತಿರುವವರಿಗೆ 20,000 ರೂಪಾಯಿ ನೀಡಲಾಗುವುದು.

ಅರ್ಜಿ ಸಲ್ಲಿಸಬೇಕೆ?

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು www.lichousing.com ವೆಬ್ಸೈಟ್ ಗೆ ಭೇಟಿ ನೀಡಿ. ಅದರಲ್ಲಿ ವಿದ್ಯಾಧನ್ ವಿದ್ಯಾರ್ಥಿ ವೇತನದ ಬಗ್ಗೆ ಕೂಡ ಮಾಹಿತಿ ತೆರೆದುಕೊಳ್ಳಲಿದೆ. ಅರ್ಜಿ ಮೇಲೆ ಕ್ಲಿಕ್ ಮಾಡಿ ಆಗ ಆನ್ಲೈನ್ ಕೆಲ ಅಗತ್ಯ ಮಾಹಿತಿ ಕೇಳಲಾಗುವುದು ಅದನ್ನು ನೀವು ಫಿಲ್ ಮಾಡಬೇಕು. ಎಲ್ಲ ಅಗತ್ಯ ವಿವರಗಳೊಂದಿಗೆ ನಿಮ್ಮ ಅರ್ಜಿಯನ್ನು ಅಪ್ಲೋಡ್ ಮಾಡಿದರೆ ಅರ್ಜಿ ಪ್ರಕ್ರಿಯೆ ಪೂರ್ಣವಾಗಲಿದೆ.

advertisement

Leave A Reply

Your email address will not be published.