Karnataka Times
Trending Stories, Viral News, Gossips & Everything in Kannada

PM Kisan: ಇಂಥವರಿಗೆ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ಮಾಡದೆ ಇರಲು ನಿರ್ಧರಿಸಿದ ಸರ್ಕಾರ; ಯಾರಿಗೆ ಗೊತ್ತೇ?

advertisement

ದೇಶದಲ್ಲಿ ಇಂದು ಕೋಟ್ಯಾಂತರ ರೈತರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಮೂಲಕ ರೈತರ ಆರ್ಥಿಕ ಸ್ವಾವಲಂಬನೆ ಜೀವನವನ್ನು ಸರ್ಕಾರ ಉತ್ತೇಜಿಸುತ್ತಿದೆ.

PM Kisan Samman Nidhi Yojana:

 

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ಸರ್ಕಾರ ರೈತರ ಖಾತೆಗೆ ಪ್ರತಿ ವರ್ಷ 6,000ಗಳನ್ನು ವರ್ಗಾವಣೆ ಮಾಡುತ್ತದೆ. ನಾಲ್ಕು ತಿಂಗಳ ಮಧ್ಯಂತರದಲ್ಲಿ ವರ್ಷಕ್ಕೆ ಮೂರು ಬಾರಿ ತಲಾ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು.

advertisement

ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಸಮ್ಮಾನ್ ನಿಧಿ ಯೋಜನೆ (PM Kisan) ಯ 15 ಕಂತುಗಳ ಹಣ ವರ್ಗಾವಣೆ ಮಾಡಲಾಗಿದೆ. ಸದ್ಯ ರೈತರು 16ನೇ ಕಂತಿನ ಹಣ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಆದರೆ ಕಿಸಾನ್ ಸ್ಕೀಮ್ನ ಫಂಡ್ ಬಿಡುಗಡೆ ಆಗಿ 16ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ನಿಮ್ಮ ಖಾತೆಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ.

16ನೇ ಕಂತಿನ ಹಣ ಬರಲು ಈ ಕೆಲಸ ಮಾಡಿ:

ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan) ಯ 16ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಹಣ ವರ್ಗಾವಣೆ ಆಗುವ ಸಾಧ್ಯತೆ ಇದೆ. ಆದರೆ ಹೀಗೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲು ನೀವು e-KYC ಮಾಡಿಸಿಕೊಳ್ಳುವುದು ಮತ್ತು ಭೂ ದಾಖಲೆಗಳನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಎರಡು ಪ್ರಮುಖ ಕಾರ್ಯಗಳನ್ನು ಮಾಡದೆ ಇದ್ದಲ್ಲಿ ಮುಂದಿನ ಕಂತಿನ ಕಿಸಾನ್ ಯೋಜನೆ ಹಣ ನಿಮ್ಮ ಖಾತೆಗೆ ಬಿಡುಗಡೆ ಆಗುವುದಿಲ್ಲ.

ನೀವು ಆನ್ಲೈನ್ ಮೂಲಕ ಈ ಕೆಲಸ ಮಾಡಬಹುದು ಅಥವಾ ನಿಮ್ಮ ಬ್ಯಾಂಕ್ ಖಾತೆ ಯಾವ ಬ್ಯಾಂಕ್ ಶಾಖೆಯಲ್ಲಿ ಇದೆಯೋ ಅಲ್ಲಿಗೆ ಹೋಗಿ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ ಹಾಗೂ ದಾಖಲೆಗಳ ಅಪ್ಡೇಟ್ ಮಾಡಿಸಿ. ಈ ರೀತಿ ಮಾಡುವುದರಿಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಣ ನಿಮ್ಮ ಖಾತೆಗೆ ಯಾವುದೇ ಸಮಸ್ಯೆ ಇಲ್ಲದೆ ಜಮಾ ಆಗುತ್ತದೆ.

advertisement

Leave A Reply

Your email address will not be published.