Karnataka Times
Trending Stories, Viral News, Gossips & Everything in Kannada

Marriage Certificate: ಇದೀಗ ಮದುವೆ ಪ್ರಮಾಣ ಪತ್ರ ಪಡೆಯುವುದು ಇನ್ನಷ್ಟು ಸುಲಭ ಆನ್ಲೈನ್ ಮೂಲಕವೇ ಸಿಗುತ್ತೆ ಸರ್ಟಿಫಿಕೇಟ್!

advertisement

ಮದುವೆ ಆದ ಮೇಲೆ ವಿವಾಹಕ್ಕೊಂದು ದಾಖಲೆ ಬೇಕು. ಅದಕ್ಕಾಗಿ ಸಾಮಾನ್ಯವಾಗಿ ಮದುವೆ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುತ್ತಾರೆ ಇದನ್ನು ಮಾಡಿಸಿದರೆ ವಿದೇಶಕ್ಕೆ ಪ್ರಯಾಣ ಬೆಳೆಸುವುದಿದ್ದರೆ ಅಥವಾ ಗಂಡ ಹೆಂಡತಿ ಜಂಟಿಯಾಗಿ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವುದಿದ್ದರೆ ಬಹಳ ಅನುಕೂಲವಾಗುತ್ತದೆ. ಆದರೆ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಉಪ ನೋಂದಾವಣಾ ಅಧಿಕಾರಿ ಕಚೇರಿಗೆ ಹೋಗಿ ಅಲ್ಲಿಯೇ ಸಾಕಷ್ಟು ಸಮಯ ಕಳೆಯಬೇಕಾಗುತ್ತದೆ. ಒಂದೇ ಸಲಕ್ಕೆ ಸರ್ಟಿಫಿಕೇಟ್ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈಗ ಇನ್ನು ಮುಂದೆ ಇಂತಹ ಸಮಸ್ಯೆ ಇರುವುದೇ ಇಲ್ಲ ಬಿಡಿ!

ಹೌದು, ನೀವೇನಾದರೂ ಮದುವೆ ಸರ್ಟಿಫಿಕೇಟ್ (Marriage Certificate) ಮಾಡಿಸಿಕೊಳ್ಳದೆ ಇದ್ದರೆ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಮದುವೆಯ ಕಾರ್ಡ್ ಗಂಡ ಹೆಂಡತಿಯ ಫೋಟೋ ಹಾಗೂ ಮತ್ತಿತರ ದಾಖಲೆಗಳನ್ನು ವೆಬ್ಸೈಟ್ನಲ್ಲಿ upload ಮಾಡುವುದರ ಮೂಲಕ ಆನ್ಲೈನ್ ನಲ್ಲಿ ಸರ್ಟಿಫಿಕೇಟ್ ಪಡೆಯಬಹುದು. ಕ್ಯೂಆರ್ ಕೋಡ್ (QR Code)ಇರುವ ಮದುವೆ ನೋಂದಣಿ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ನೀವು ಪಡೆಯಬಹುದು. ಇದನ್ನ ಡೌನ್ಲೋಡ್ ಮಾಡಿಕೊಂಡರೆ ಸಾಕು, ಸರ್ಕಾರಿ ವೆಬ್ಸೈಟ್ನಲ್ಲಿ ನಿಮ್ಮ ಮದುವೆ ಪ್ರಮಾಣ ಪತ್ರಕ್ಕೆ ಸಂಬಂಧ ಪಟ್ಟ ಮಾಹಿತಿಗಳು ಇರುತ್ತವೆ. ಕ್ಯೂಆರ್ ಮಾಡಿದ್ರೆ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತದೆ.

ಮದುವೆ ಪ್ರಮಾಣ ಪತ್ರ (Marriage Certificate) ಪಡೆದುಕೊಳ್ಳುವುದು ಹೇಗೆ?

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಇರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಮದುವೆ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವ ಪ್ರಕ್ರಿಯೆಗೆ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.

advertisement

ಮದುವೆ ನೋಂದಣಿ ಹೆಚ್ಚಿಸಲು ಈ ಕ್ರಮ!

ಕರ್ನಾಟಕದಲ್ಲಿ ಎಲ್ಲಿಯವರೆಗೆ ಶೇಕಡ 30% ನಷ್ಟು ಮಾತ್ರ ವಿವಾಹ ನೋಂದಣಿ ಆಗಿದೆ. ಮದುವೆಯ ದಾಖಲೆಗಳು ವಿಶೇಷವಾಗಿ ಜೀವನಾಂಶ ಆಸ್ತಿ ವಿಭಜನೆ, ಮದುವೆ ಪ್ರಮಾಣೀಕರಿಸುವಂತಹ ವಿಷಯಕ್ಕೆ ಅಗತ್ಯವಾಗಿರುವ ದಾಖಲೆಯಾಗಿದೆ. ಹಾಗಾಗಿ ಇದನ್ನ ಪ್ರತಿಯೊಬ್ಬ ದಂಪತಿ ಮಾಡಿಸಿಕೊಳ್ಳುವುದು ಅತ್ಯಗತ್ಯ. ಹೀಗಾಗಿ ಆನ್ಲೈನ್ ಮೂಲಕ ಮದುವೆ ರಿಜಿಸ್ಟ್ರೇಷನ್ ಗೆ ಅವಕಾಶ ನೀಡಿದೆ ಕರ್ನಾಟಕ ಸರ್ಕಾರ.

ಈ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಆಗಿ!

ಕಾವೇರಿ 2.0 (kaveri.karnataka.gov.in) ಗೆ ಭೇಟಿ ನೀಡಿ. ಆಧಾರ್ ಮದುವೆಯ ಆಮಂತ್ರಣ ಮದುವೆಯ ವಿಡಿಯೋ ಮೂವರು ಸಾಕ್ಷಿಗಳ ಸಹಿ ಹಾಗೂ ನಿಮ್ಮ ವಯಸ್ಸಿನ ಪುರಾವೆ ಪ್ರಮಾಣ ಪತ್ರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ನೀವು ಆನ್ಲೈನ್ ನಲ್ಲಿ ಮದುವೆಗೆ ಸಂಬಂಧಪಟ್ಟ ಈ ಎಲ್ಲಾ ವಿಷಯಗಳನ್ನು ನಮೂದಿಸಿದ ಬಳಿಕ, ಆ ಅರ್ಜಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಲಾಗುತ್ತದೆ. ಇದನ್ನು ಪರಿಶೀಲನೆ ಮಾಡಿ ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ಸಹಿ ಇರುವ ಡಿಜಿಟಲ್ ಮ್ಯಾರೇಜ್ ಸರ್ಟಿಫಿಕೇಟ್ ಅನ್ನು ಪಡೆದು ಕೊಳ್ಳುತ್ತೀರಿ. ಇತರ ನೀವು ಅದನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು. ಯಾವುದೇ ಅಗತ್ಯ ಸಂದರ್ಭದಲ್ಲಿ ಮದುವೆ ಸರ್ಟಿಫಿಕೇಟ್ ಬೇಕಾದಾಗ ಈ ಡಿಜಿಟಲ್ ಸರ್ಟಿಫಿಕೇಟ್ ಬಳಸಿಕೊಳ್ಳಬಹುದು.

advertisement

Leave A Reply

Your email address will not be published.