Karnataka Times
Trending Stories, Viral News, Gossips & Everything in Kannada

Gold Rate: ಚಿನ್ನ ಬೆಳ್ಳಿ ಖರೀದಿಗೆ ಇದು ಸಕಾಲ, ಮಾರುಕಟ್ಟೆಯಲ್ಲಿ ಬಂಗಾರದ ದರ ಹೇಗಿದೆ?

advertisement

ಚಿನ್ನದ ಬೆಲೆ (Gold Rate) ಕಡಿಮೆಯಾದಷ್ಟು ಅದು ಚಿನ್ನ ಪ್ರಿಯರ ಮನಸ್ಸಿನಲ್ಲಿ ಮಂದಹಾಸ ಮೂಡಿಸುತ್ತದೆ. ಅದಾಗ್ಯೂ ಚಿನ್ನ ಬೆಳ್ಳಿಯ ಬೆಲೆ ಹಾವು ಏಣಿ ಆಟದಂತೆ ಒಮ್ಮೆ ಚಿನ್ನದ ದರ ಏರಿದರೆ ಇನ್ನೊಮ್ಮೆ ಇಳಿಕೆಯಾಗುತ್ತದೆ. ಒಟ್ಟಿನಲ್ಲಿ ಬಂಗಾರದ ದರ ಕಡಿಮೆಯಾದಾಗ ಖರೀದಿ ಮಾಡುವುದು ಜಾಣತನ. ಚಿನ್ನ..ಫಳ ಫಳ ಹೊಳೆಯುವ ಈ ಹಳದಿ ಲೋಹ ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಮಹಿಳೆಯರಿಗೆ ಅಂತೆಯೇ ಪುರುಷರಿಗೂ ಈಗೀಗ ಚಿನ್ನವೆಂದರೆ ಅಚ್ಚು ಮೆಚ್ಚು ಎನ್ನಬಹುದು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಸಹಜವಾಗಿ ಇದ್ದೆ ಇರುತ್ತದೆ.

ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರ ಹೇಗಿದೆ

advertisement

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 57,190 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,790, ರೂ. 57,190, ರೂ. 57,190 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 57,340 ರೂ. ಆಗಿದೆ.ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ನೋಡುವುದಾದರೆ ಒಂದು ಗ್ರಾಂ (1GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 4,679 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,719 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,239 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 37,568 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 45,752 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 49,912 ಆಗಿದೆ.ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 46,790 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 57,190 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 62,390 ಆಗಿದೆ. ಇನ್ನು ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 4,67,900 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,71,900 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,23,900 ಆಗಿದೆ.

ಇನ್ನು, ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ಏರಿಳಿತಗಳು ಪ್ರತಿಷ್ಠಿತ ಆಭರಣಕಾರರ ಇನ್ಪುಟ್ ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಬಂಗಾರಕ್ಕೆ ಇರುವ ಜಾಗತಿಕ ಬೇಡಿಕೆ, ಕರೆನ್ಸಿ ಏರಿಳಿತಗಳು, ಚಾಲ್ತಿಯಲ್ಲಿರುವ ಬಡ್ಡಿದರಗಳು ಮತ್ತು ಚಿನ್ನದ ಮಾರುಕಟ್ಟೆಗೆ ಸಂಬಂಧಿಸಿದ ಸರ್ಕಾರಿ ನಿಯಮಗಳಂತಹ ಅಂಶಗಳು ಈ ಏರಿಳಿತಗಳಿಗೆ ಕಾರಣವಾಗುತ್ತವೆ. ಇದರ ಜೊತೆಗೆ ವಿಶ್ವ ಆರ್ಥಿಕತೆಯ ಸ್ಥಿತಿ ಮತ್ತು ಜಾಗತಿಕ ಘಟನೆಗಳು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate)ಗಳ ಮೇಲೆ ಪರಿಣಾಮ ಬೀರುತ್ತವೆ.

advertisement

Leave A Reply

Your email address will not be published.