Karnataka Times
Trending Stories, Viral News, Gossips & Everything in Kannada

QR Code: ಯುಪಿಐ ಸ್ಕ್ಯಾನ್ ಮಾಡುವಾಗ ಇದರಿಂದ ಎಚ್ಚೆತ್ತುಕೊಳ್ಳಿ, QR ಕೋಡ್ ವಂಚನೆ ಸಂಖ್ಯೆ ಬಹಳಷ್ಟು ಹೆಚ್ಚಳ!

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲೂ ಮೊಬೈಲ್ ಇದೆ.‌ ಹಾಗಾಗಿ ಆಧುನಿಕರಣ ಬೆಳೆದಂತೆ ಸುಲಭ ವಿಧಾನದ ಬಗ್ಗೆಯು ನಮ್ಮಲ್ಲಿ ಆಸಕ್ತಿ ಹೆಚ್ಚು. ಇಂದು ಡಿಜಿಟಲ್ ಪಾವತಿ (Digital Payment) ಗೆ ಜನ ಹೆಚ್ಚಿನ ಬೆಂಬಲ ಸಹ ನೀಡುತ್ತಿದ್ದಾರೆ‌. ಹಣ ಬೇಕು, ಅಥವಾ ಹಣ ಇನ್ನೊಬ್ಬರಿಗೆ ಕಳುಹಿಸ ಬೇಕು ಎಂದಾಗ ಈ ಗೂಗಲ್ ಪೇ (Google Pay), ಪೋನ್ ಪೇ (Phone Pe) ಯನ್ನೆ ಬಳಕೆ ಮಾಡುತ್ತಾರೆ. ಅದೇ ರೀತಿ ಇಂತಹ ಪಾವತಿ ವಿಧಾನಗಳು ಹೆಚ್ಚಾದಂತೆ ಮೋಸದ ವಂಚನೆಗಳು ಕೂಡ ಬಹಳಷ್ಟು ಹೆಚ್ಚಾಗಿವೆ. ಒಂದು ಸಣ್ಣ ವಸ್ತುವಿಗೂ ಇಂದು ಕ್ಯುಆರ್ ಕೋಡ್ (QR Code) ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತೇವೆ. ಆದರೆ ಈ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ.

QR Code Fraud:

 

 

ಇಂದು ವೈಯಕ್ತಿಕ ಮಾಹಿತಿಗಳನ್ನು ಪಡೆದು ಕೊಳ್ಳಲು ಅಪಾಯಕಾರಿ ಲಿಂಕ್ ಬಳಸುತ್ತಾರೆ. ಇದು ನಮಗೆ ತಿಳಿದಿರುವುದಿಲ್ಲ. ಇನ್ನು ಕೆಲವರು ಮೆಸೇಜ್ ಮೂಲಕ ಕ್ಯುಆರ್ ಕೋಡ್ (QR Code) ಕಳುಹಿಸಿ ಸ್ಕ್ಯಾನ್ ಮಾಡುವಂತೆ ಮಾಡುತ್ತಾರೆ. ಹೀಗಾಗಿ ನಿಮಗೆ ಗೊತ್ತಿಲ್ಲದ ಪರಿಚಯ ಇಲ್ಲದ ವ್ಯಕ್ತಿಗಳಿಗೆ ಈ ಕೋಡ್ ಅನ್ನು ಕಳುಹಿಸಿದಿರಿ‌. ಅದರಲ್ಲೂ ಸೈಬರ್ (Cyber) ಖದೀಮರ ಸಂಖ್ಯೆ ಹೆಚ್ಚಳ ವಾಗಿದ್ದು ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ನಿಮ್ಮ ಖಾತೆಯಲ್ಲಿನ ಹಣವನ್ನು ದೋಚುತ್ತಾರೆ. ಇಂಥಹ ಮೋಸದ ವಂಚನೆ ಗಳು ಬಹಳಷ್ಟು ಕಡೆ ನಡೆದಿದ್ದು ಈ ಬಗ್ಗೆ ಜಾಗೃತೆ ವಹಿಸುವುದು ಬಹಳ ಮುಖ್ಯವಾಗುತ್ತದೆ.

advertisement

ಈ ಬಗ್ಗೆ ಎಚ್ಚರಿಕೆ ವಹಿಸಿ:

  • ನಿಮಗೆ ತಿಳಿದಿಲ್ಲದ ಸ್ಥಳಗಳಲ್ಲಿ ಕ್ಯುಆರ್ (QR Code) ಕೋಡ್ ಸ್ಕ್ಯಾನ್ (Scan) ಮಾಡದಿರಿ. ವಾಟ್ಸ್ ಆ್ಯಪ್ ಅಥವಾ ಮೆಸೇಜ್ ನಲ್ಲಿ ಬಂದಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಲು ಹೋಗಲೇಬೇಡಿ.
  • ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಸುರಕ್ಷಿತ ವಾಗಿದೆಯೇ ಎಂದು ಖಚಿತ‌ಪಡಿಸಿಕೊಳ್ಳಿ.
  • ನಿಮ್ಮ ಮೊಬೈಲ್ ಮತ್ತು ವೈಯಕ್ತಿಕ ಮಾಹಿತಿಯನ್ನು ಗೌಪ್ಯ ವಾಗಿ ಇಡಲು ಹ ನಿಮ್ಮ ಮೊಬೈಲ್ ಒಎಸ್ (IOS) ಅನ್ನು ಮೊದಲಿಗೆ ಅಪ್ಡೇಟ್ ಮಾಡುವುದು ಸಹ ಬಹಳ ಮುಖ್ಯ.
  • ಕ್ಯುಆರ್ ಕೋಡ್ ನಲ್ಲಿ ನಲ್ಲಿ ಲಾಗಿನ್, ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಗಳನ್ನು ನಿಮ್ಮಲ್ಲೆ ಗೌಪ್ಯ ವಾಗಿ ಇಡಿ‌.

ಅಮೆರಿಕದ Federal Trade Commission ಎಚ್ಚರಿಕೆ:

ಇಂತಹ ಕ್ಯೂ ಅರ್ ಕೋಡ್ (QR Code) ಬಳಸಿ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಖದೀಮರ ಸಂಖ್ಯೆ ಬಹಳಷ್ಟು ಹೆಚ್ಚಳ ವಾಗಿದ್ದು ಅಪಾಯಕಾರಿ ಲಿಂಕ್ ಗಳ ಬಗ್ಗೆ ಜಾಗೃತೆ ವಹಿಸುವುದು ಸಹ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಾಗ ನಿಗಾ ವಹಿಸಿ ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮೀಷನ್ (Federal Trade Commission) ಎಚ್ಚರಿಕೆ ನೀಡಿದೆ. ಹೀಗಾಗಿ ಈ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

advertisement

Leave A Reply

Your email address will not be published.