Karnataka Times
Trending Stories, Viral News, Gossips & Everything in Kannada

Ayushman Card: ಮಂಗನ ಕಾಯಿಲೆಗೆ ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್ ಬೇಕೇ ಬೇಕು, ಕೂಡಲೇ ಅಪ್ಲೈ ಮಾಡಿ!

advertisement

ಕಳೆದ ಕೆಲ ವರ್ಷದಿಂದ ಕೋವಿಡ್ ಎಂಬ ಮಾರಕ ರೋಗ ಇಡೀ ವಿಶ್ಚವನ್ನೇ ಬೆಚ್ಚಿ ಬೀಳಿಸಿತ್ತು. ಅನೇಕ ಸಾವು ನೋವು ಗಳು ಆದ ಬಳಿಕ ಕೊರೊನಾ ರೋಗ ಇದ್ದರೂ ಅದಕ್ಕೆಸೂಕ್ತ ಚಿಕಿತ್ಸೆ ವ್ಯಾಕ್ಸಿನ್ ಬಂದು ಅದರ ಮಾರಕತೆ ಮಟ್ಟ ಕಡಿಮೆ ಆಗಿದೆ‌. ಇದೀಗ ನಾಡಿನೆಲ್ಲೆಡೆ ಕೇಳಿ ಬರುವ ಹೆಸರೆಂದರೆ ಅದು ಮಂಗನ ಕಾಯಿಲೆ. ಮಂಗನ ಕಾಯಿಲೆ ಹೆಚ್ಚಾಗಿ ಹಸಿರು ಪ್ರದೇಶಗಳಲ್ಲಿ ಕಂಡು ಬರುತ್ತಿದ್ದು ಸರಿಯಾದ ಹಂತಕ್ಕೆ ರೋಗ ಪತ್ತೆ ಆಗದೆ ಸತ್ತ  ಅನೇಕ ಸಂಗತಿಗಳನ್ನಹ ಕಾಣಬಹುದು.

WhatsApp Join Now
Telegram Join Now

ಈಗಂತೂ ಕರ್ನಾಟಕದಲ್ಲಿ ಮಂಗನ ಕಾಯಿಲೆ ಹರುಡುವ ಪ್ರಮಾಣ ಅಧಿಕವಾಗಿದೆ. ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ತುಂಬಾ ಹೆಚ್ಚಾಗಿದ್ದು ತಿಳಿದು ಬಂದಿದ್ದು ಸಾಗರ, ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು ಇತರ ಭಾಗದಲ್ಲಿ ಮಂಗನ ಕಾಯಿಲೆ ಪ್ರಮಾಣ  ಅಧಿಕವಾಗುತ್ತಿದೆ. ಕಾಡಿನಲ್ಲಿ ಮಂಗಗಳು ಮೃತಪಟ್ಟು ಅದರ ಮೂಲಕ ಸಣ್ಣ ಜೀವಿಗಳಾದ ಉಣ್ಣೆ ಇತರ ಮೂಲಕ ಮನುಷ್ಯರಿಗೆ ಕಾಯಿಲೆ ಹರಡುತ್ತದೆ. ಈ ಕಾಯಿಲೆಗೆ ಕ್ಯಾಸನೂರು ಕಾಯಿಲೆ ಎಂಬ ಹೆಸರು ಕೂಡ ಇದೆ.

ಚಿಕಿತ್ಸೆಗೆ ನೂತನ ಕ್ರಮ:

ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡದೇ ಇದ್ದರೂ ಕೂಡ ಒಮ್ಮೆ ಮನುಷ್ಯರಿಗೆ ಬಂದರೆ ಸರಿಯಾಗಿ ಔಷಧ ಮಾಡದಿದ್ದರೆ ರೋಗದ ತೀವ್ರತೆ ಅಧಿಕ ಆಗಲಿದೆ ಹಾಗಾಗಿ ಜನರಿಗೆ ಈ ಬಗ್ಗೆ ಸಹಕಾರಿ ಆಗಲೆಂಬ ಉದ್ದೇಶಕ್ಕಾಗಿ ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ಬಿಡುಗಡೆಗಾಗಿ ಈಗಾಗಲೇ ICMR ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಅದರೊಂದಿಗೆ ಆಯುಷ್ಮಾನ್ ಕಾರ್ಡಿನ (Ayushman Card) ಅಡಿಯಲ್ಲಿ ಮಂಗನ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಆಯುಷ್ಮಾನ್ ವ್ಯವಸ್ಥೆ:

 

advertisement

ಪ್ರ

ಮುಖ ಆರೋಗ್ಯ ಸಮಸ್ಯೆಗಳಿಗೆ ಬಡವರಿಗೆ ಅನುಕೂಲ ಆಗಲೆಂದು ಆಯುಷ್ಮಾನ್ ಕಾರ್ಡ್ (Ayushman Card) ಅತೀ ಹೆಚ್ಚು ಉಪಯೋಗ ಆಗುತ್ತಿದೆ ಈಗ ಮಂಗನ ಕಾಯಿಲೆಗೆ ಲಸಿಕೆ ವಿತರಣೆ ಮಾಡಲು ಕೂಡ ಆಯುಷ್ಮಾನ್ ಕಾರ್ಡ್ ವ್ಯವಸ್ಥೆ ಬಳಸಲಾಗುವುದು. ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿವೀ ಚಿಕಿತ್ಸಾ ಸೇವೆ ಸಂಪೂರ್ಣ ಉಚಿತವಾಗೇ ಇರಲಿದೆ‌. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಮತ್ತು ಸಾಮಾನ್ಯರಿಗೆ ಈ ಸೇವೆ ಬಹಳ ಉಪಯೋಗ ಆಗಲಿದೆ.

ಆರೋಗ್ಯ ಸಚಿವರ ಮಹತ್ವದ ಮಾಹಿತಿ:

ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಅವರು ಇತ್ತೀಚೆಗೆ ಈ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಕೋವಿಡ್ ಬಳಿಕ ಮಂಗನ ಕಾಯಿಲೆ ಮಾರಕವಾಗಿ ಹಬ್ಬುತ್ತಿದ್ದು ಅದಕ್ಕೆ ಲಸಿಕೆ ನೀಡುವ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದ ಎಂದು ಅವರು ತಿಳಿಸಿದ್ದಾರೆ. ಮಳೆಗಾಲದ ಆರಂಭ ಹಾಗೂ ಅಂತ್ಯಕ್ಕೆ ಮಂಗನ ಕಾಯಿಲೆ ಹರಡುವ ಪ್ರಮಾಣ ಅಧಿಕ ಇರುತ್ತದೆ. ಮಾರ್ಚ್ ವರೆಗೆ ಈ ಬಗ್ಗೆ ಜಾಗೃತವಾಗುವುದು ತುಂಬಾ ಅವಶ್ಯಕ. KFD ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೇ ಬೇಕು‌. ಮಂಗನ ಕಾಯಿಲೆ ಎಂದಾಗ ತಾತ್ಸಾರ ಬೇಡ ಸೂಕ್ತ ಚಿಕಿತ್ಸೆ ಪಡೆದು ಗುಣಮುಖ ರಾಗಬೇಕು ಎಂದರು.

advertisement

Leave A Reply

Your email address will not be published.