Karnataka Times
Trending Stories, Viral News, Gossips & Everything in Kannada

RTO New Rules: ಸ್ವಂತ ಬೈಕ್ ಹೊಂದಿರುವ ರಾಜ್ಯದ ಎಲ್ಲಾ ಮನೆಗಳಿಗೂ ಹೊಸ ರೂಲ್ಸ್! RTO ಘೋಷಣೆ

advertisement

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವುದು ಕಾನೂನು ನಿಯಮ ಉಲ್ಲಂಘನೆ ಮಾಡಿದಂತೆ ಎಂದು ಹೇಳಬಹುದು. ಹಾಗಿದ್ದರೂ ನಿಯಮ ಎಲ್ಲ ತಿಳಿದ ಪೋಷಕರು ಕೂಡ ತಮ್ಮ ಮಕ್ಕಳಿಗೆ ವಾಹನ ನೀಡಿ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು ವಾಹನ ಕೊಂಡು ಹೋದಾಗ ಅದರಿಂದ ಏನಾದರು ಅಪಘಾತ ಆದರೆ ಅದಕ್ಕೆ ಯಾರು ಹೊಣೆ ಎಂಬುದಕ್ಕೆ ರಾಜ್ಯದ ಹೈಕೋರ್ಟ್ ಈಗ ಸ್ಪಷ್ಟನೆ ನೀಡಿದೆ. ಈ ಮೂಲಕ ಸ್ವಂತ ಬೈಕ್, ಮೋಟಾರ್ ವಾಹನ ಹೊಂದಿದ್ದವರಿಗೆ ಇನ್ನು ಮುಂದೆ ಹೊಸ ರೂಲ್ಸ್ (RTO New Rules) ಜಾರಿ ಆಗಲಿದೆ.

WhatsApp Join Now
Telegram Join Now

ಹಾಗಾಗಿ ನೀವು ಕೂಡ ಮಕ್ಕಳಿಗೆ ವಾಹನ ನೀಡುತ್ತಿದ್ದರೆ ಅಥವಾ ಬೇರೆ ಯಾರಾದರೂ ಅಪ್ರಾಪ್ತರಿಗೆ ವಾಹನ ನೀಡುವುದು ನಿಮ್ಮ ಗಮನಕ್ಕೆ ಬಂದಿದ್ದರೆ ಕೂಡಲೇ ಈ ಮಾಹಿತಿ ಶೇರ್ ಮಾಡಿ ಮುಂದೆ ಆಗುವ ನಷ್ಟಕ್ಕೆ ಮೊದಲೇ ಈಗಲೇ ಜಾಗೃತವಾಗಿ.

ಮಕ್ಕಳಿಗೆ ವಾಹನ ನೀಡುವುದು ಅಪಾಯಕಾರಿ ಎಂದು ತಿಳಿದೇ ಇದೆ. DL , RC ಇಲ್ಲದೆ ವಾಹನ ಓಡಿಸುವಾಗ ಅನುಸರಿಸುವ ಸಾಮಾನ್ಯ ನಿಯಮ ಕೂಡ ತಿಳಿಯದೇ ಮಕ್ಕಳು ವಾಹನ ಚಲಾಯಿಸಿ ಅದರಿಂದ ಅಪಘಾತ ನಡೆದ ಸಂದರ್ಭದಲ್ಲಿ ಇನ್ನು ಮುಂದೆ ಈ ಕಾರಣಕ್ಕೆ ವಿಮೆ ಮೊತ್ತ ನೀಡಲು ಸಾಧ್ಯವಿರಲಾರದು. ಸಾಮಾನ್ಯ ಅಪಘಾತ ಆದ ಸಂದರ್ಭದಲ್ಲಿ ಗಾಡಿ ವಿಮೆಯನ್ನು ಕ್ಲೈಮ್ ಮಾಡಬಹುದು ಆದರೆ ಮಕ್ಕಳು ವಾಹನ ಚಲಾಯಿಸಿ ಅಪಘಾತ ಆದ ಸಂದರ್ಭದಲ್ಲಿ ವಿಮೆ ನೀಡದಂತೆ ರಾಜ್ಯದ ಹೈಕೋರ್ಟ್ (State High Court) ಈ ಬಗ್ಗೆ ತೀರ್ಪು ನೀಡಿದೆ. ಹಾಗಾಗಿ ಇನ್ನು ಮುಂದೆ ಸ್ವಂತ ಬೈಕ್ ಹೊಂದಿದ್ದವರು ಇಂತಹ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡರೆ ಅಪ್ರಾಪ್ತ ವಯಸ್ಕರ ಪೋಷಕರೇ ನೇರ ವಿಮೆ ಮೊತ್ತ ನೀಡಬೇಕಾಗಿ ಬರಲಿದೆ.

ಯಾವುದು ಈ ಪ್ರಕರಣ?

 

Image Source: InsuranceDekho

 

advertisement

2008ರಲ್ಲಿ ಭಟ್ಕಳದ ರಂಗಿನ ಕಟ್ಟ ಎಂಬಲ್ಲಿ ಅಪ್ರಾಪ್ತರೊಬ್ಬರು ಮೋಟಾರ್ ವಾಹನ ಕೊಂಡು ಹೋಗಿದ್ದು ಹಸನ್ ಶಬೀಬ್ ಎನ್ನುವವರಿಗೆ ಅಪಘಾತವಾಗಿ ಬಳಿ ಆಸ್ಪತ್ರೆಗೂ ಸೇರಿಸಲು ಮುಂದಾಗಿದ್ದು ಆಸ್ಪತ್ರೆ ತಲುಪುವ ಮುನ್ನವೇ ಶಬೀಬ್ ಅವರು ಮೃತ ಪಟ್ಟಿದ್ದಾರೆ. ಹಾಗಾಗಿ ಮೋಟಾರ್ ವಾಹನದ ಮಾಲಕರು ಶಬೀಬ್ ಅವರಿಗೆ ವಿಮೆ ಕ್ಲೈಮ್ (Insurance Claim) ಗೆ ಪ್ರಯತ್ನಿಸಿದ್ದಾರೆ. 2.56ಲಕ್ಷ ರೂಪಾಯಿ ಪರಿಹಾರ ಕೋರಿ ವಿಮೆ ಕಂಪೆನಿಗೆ ಟ್ರಿಬ್ಯೂನಲ್ ತೀರ್ಪು ನೀಡಲಾಗಿದೆ.

ಈ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿ ತೀರ್ಪನ್ನು ನೀಡಲಾಗಿದೆ:

 

Image Source: Dreamstime.com

 

ವಿಮೆ ಕಂಪೆನಿಯೂ ಈ ಅಪಘಾತ ನಡೆದಿದ್ದು 16 ವರ್ಷದ ಅಪ್ರಾಪ್ತರಿಂದ ಹಾಗಾಗಿ ವಿಮೆ ನೀಡುವ ಬಗ್ಗೆ ಪ್ರಶ್ನೆ ಮಾಡಿದೆ. ವಾಹನ ಚಾಲಕ ಅಪ್ರಾಪ್ತ ವಯಸ್ಕನಾಗಿದ್ದು ವಾಹನ ಪರವಾನಿಗೆ ಹೊಂದಿಲ್ಲ ಕಾನೂನು ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಕಾರಣಕ್ಕೆ ವಿಮೆ (Insurance) ಕಂಪೆನಿ ಈ ಹೊಣೆ ಭರಿಸಲಾರದು ಎಂದು ತಿಳಿಸಿದೆ. 2014ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ಸಂಬಂಧ ಪಟ್ಟ ಮೃತ ವ್ಯಕ್ತಿಯ ಕುಟುಂಬಕ್ಕೆ ವಾರ್ಷಿಕ 8% ಬಡ್ಡಿಯಂತೆ 2.56ಲಕ್ಷ ರೂಪಾಯಿ ವಿಮೆ ಮೊತ್ತ ನೀಡುವಂತೆ ಈ ಸಂಬಂಧಿತ ತಾಲೂಕು ಕೋರ್ಟ್ ನಲ್ಲಿ ವಿಮಾ ಕಂಪೆನಿಗೆ ಆದೇಶ ನೀಡಲಾಗಿದೆ.

ಹಾಗಾಗಿ ವಿಮೆ ಕಂಪೆನಿಯಾದ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪೆನಿ ಲಿಮಿಟೆಡ್ ರಾಜ್ಯದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಇದನ್ನು ವಿಚಾರಣೆ ನಡೆಸಿದ್ದ ಬಳಿಕ ಅಪಘಾತದಲ್ಲಿ ಮೃತರಾದ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡಿ ಅದರಿಂದ ಅಪಘಾತ ಆದರೆ ಆಗ ವಾಹನದ ಮಾಲಕರು ಪರಿಹಾರ ನೀಡಬೇಕು. ಇದು ಪೋಷಕರ ನಿರ್ಲಕ್ಷ್ಯದಿಂದ ಆದ ಅಪಘಾತ ಇದಕ್ಕೆ ವಿಮೆ ಕಂಪೆನಿ ಹೊಣೆ ಆಗಲಾರದು.

ಮೋಟಾರ್ ವಾಹನ ಅಪಘಾತ ನ್ಯಾಯ ಮಂಡಳಿಯಲ್ಲಿ ನೀಡಿದ್ದ ತೀರ್ಪು ರದ್ದು ಮಾಡಿ,‌ನ್ಯಾಯಮೂರ್ತಿ ಹಂಚಾಟೆ ಸಂದೀಪ್ ಕುಮಾರ್ ಅವರು ವಿಮೆ ಕಂಪೆನಿಯ ವಿರುದ್ಧ ಬಂದ ಆದೇಶವನ್ನು ತಳ್ಳಿ ಹಾಕಿದೆ.ಸಂಪೂರ್ಣ ವಿಮೆ ಮೊತ್ತ 2.56 ಲಕ್ಷ ರೂಪಾಯಿ ವಾರ್ಷಿಕವಾಗಿ 6% ಬಡ್ಡಿಯಂತೆ ಅಪಘಾತದಲ್ಲಿ ಮೃತರಾದ ಕುಟುಂಬದವರಿಗೆ ಈ ಮೊತ್ತ ಪಾವತಿ ಮಾಡುವಂತೆ ಹೈಕೋರ್ಟ್ ಆದೇಶ ಕೂಡ ನೀಡಿದೆ.

advertisement

Leave A Reply

Your email address will not be published.