Karnataka Times
Trending Stories, Viral News, Gossips & Everything in Kannada

Electricity Bill: ಕರೆಂಟ್ ಬಿಲ್ ಕಟ್ಟಲು ಸಾಧ್ಯವಾಗದವರು ಈ ಯೋಜನೆಗೆ ಅರ್ಜಿ ಹಾಕಲು ಮನವಿ

advertisement

ರಾಜ್ಯ ಸರಕಾರವು ರಾಜ್ಯದ ಜನತೆಗಾಗಿ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ.‌ಈ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಕೂಡ ಫಲಾನುಭವಿಗಳು ಪಡೆಯುತ್ತಿದ್ದಾರೆ.ಇನ್ನೂರು ಯುನಿಟ್ ವರೆಗೆ ಉಚಿತ ವಿದ್ಯುತ್ ಸಿಗಲಿದ್ದು ಶೂನ್ಯ ಮೊತ್ತವನ್ನು ನೋಂದಣಿ ಮಾಡಿದ ಫಲಾನುಭವಿಗಳು ಪಡಿತಾ ಇದ್ದಾರೆ. ಇದರ ಬೆನ್ನಲೇ ಕೆಂದ್ರ ಸರಕಾರ ಕೂಡ ರಾಜ್ಯದ ಜನತೆಗಾಗಿ ಗುಡ್ ನ್ಯೂಸ್ ನೀಡಿದ್ದು ಹೊಸ ಯೋಜನೆಯನ್ನು ಜಾರಿ ಮಾಡಿದ್ದಾರೆ ಯಾವುದು ಈ ಯೋಜನೆ ತಿಳಿಯಲು ಲೇಖನ‌ ಪೂರ್ತಿಯಾಗಿ ಓದಿರಿ.

WhatsApp Join Now
Telegram Join Now

ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ (PM Surya Ghar Muft Bijli Yojana) ಯನ್ನು ಜಾರಿ ಮಾಡಿದ್ದು ಇದರ ಅಡಿಯಲ್ಲಿ ಉಚಿತ ವಿದ್ಯುತ್ (Free Electricity ) ಅನ್ನು ಪಡೆಯ ಬಹುದು. ಇದೀಗ ಈ ಯೋಜನೆಯನ್ನು ಅಳವಡಿಸಿಕೊಳ್ಳಲು ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ದೇಶದ 1 ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫ‌ಲಕಗಳನ್ನು ಅಳವಡಿಸುವ ಯೋಜನೆ ಇದಾಗಿದ್ದು ಬಡ ವರ್ಗದ ಜನತೆಗೆ ಇದು ಹೆಚ್ಚು ನೆರವು ಆಗಲಿದೆ. ಮನೆಗಳ ಮೇಲ್ಛಾವಣಿಯಲ್ಲಿ ಸೌರಫ‌ಲಕಗಳನ್ನು ಅಳವಡಿಸಲು ಸಬ್ಸಿಡಿಯನ್ನು ಮಾತ್ರವಲ್ಲದೆ ಸಾಲವನ್ನು ಕೂಡ ಒದಗಿಸಲಿದೆ. ಈ ಯೋಜನೆಯಡಿ ಫ‌ಲಾನುಭವಿಗಳು ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯಲಿದ್ದಾರೆ.

ಸಬ್ಸಿಡಿ ಸಿಗಲಿದೆ:

 

Image Source: TV9 Bharatvarsh

 

ಇದಕ್ಕಾಗಿ ಸೌರ ಫಲಕಗಳನ್ನು ಅಳವಡಿಕೆ ಮಾಡಲು 1 ಕಿಲೋವ್ಯಾಟ್ ಗೆ ಸುಮಾರು 90 ಸಾವಿರ ರೂಪಾಯಿ ಮೊತ್ತ, 2 ಕಿಲೋವ್ಯಾಟ್ ಗೆ ಸುಮಾರು 1.5 ಲಕ್ಷ ರೂಪಾಯಿ, ಮತ್ತು 3 ಕಿಲೋವ್ಯಾಟ್ ಗೆ 2 ಲಕ್ಷ ರೂ. ಖರ್ಚು ಇರಲಿದ್ದು ಇದಕ್ಕೆ ಸಬ್ಸಿಡಿ ಕೂಡ ಸಿಗಲಿದೆ. 2 ಕಿಲೋವ್ಯಾಟ್‌ಗೆ ರೂ 30,000 ರಿಂದ ರೂ 60,000, 3 ಕಿಲೋವ್ಯಾಟ್‌ಗೆ ರೂ 60,000 ರಿಂದ ರೂ 78,000 ಮತ್ತು 3 ಕಿಲೋ ವ್ಯಾಟ್‌ಗೆ ರೂ 78,000 ವರೆಗೆ ಸಬ್ಸಿಡಿ ಸಿಗಲಿದೆ.

advertisement

ಅರ್ಹತೆ ಏನು?

ಭಾರತೀಯ ಪ್ರಜೆಯಾಗಿದ್ದು ಕರ್ನಾಟಕದಲ್ಲಿ ವಾಸಿಸಬೇಕು, ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗಿರಬೇಕು. ಆಧಾರ್‌ನೊಂದಿಗೆ ಬ್ಯಾಂಕ್‌ ಖಾತೆ ಲಿಂಕ್‌ ಆಗಿರಬೇಕು.ಅರ್ಜಿದಾರರು 18 ವರ್ಷ ಮೇಲ್ಪಟ್ಟ ವ ರಾಗಿರಬೇಕು,ಇನ್ನು ಡಿಸ್ಕಾಂಗಳಿಂದ ಒಪ್ಪಿಗೆ ಲಭಿಸಿದ ಬಳಿಕಲ ಫ‌ಲಾನುಭವಿಗಳಿಗೆ ಸಬ್ಸಿಡಿ ದೊರಕಲಿದೆ.

 

Image Source: Aaj Tak

 

ಈ ದಾಖಲೆ ಬೇಕು:

  • ಆಧಾರ್‌ ಕಾರ್ಡ್‌
  • ಪಡಿತರ ಚೀಟಿ
  • ಮತದಾರರ ಗುರುತಿನ ಚೀಟಿ
  • ಮೊಬೈಲ್‌ ಸಂಖ್ಯೆ
  • ಪಾಸ್‌ಪೋರ್ಟ್‌ ಗಾತ್ರದ ಫೋಟೋ
  • ಬ್ಯಾಂಕ್‌ ಖಾತೆ
  • ಆದಾಯ ಪ್ರಮಾಣ ಪತ್ರ
  • ವಿಳಾಸ ದೃಢೀಕರಣ ಪ್ರಮಾಣಪತ್ರ

ಈ ಯೋಜನೆ (PM Surya Ghar Muft Bijli Yojana) ಗೆ ಅರ್ಜಿ ಸಲ್ಲಿಕೆ ಮಾಡಲು https://pmsuryaghar.gov.in/ ಇಲ್ಲಿಗೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿದೆ.

advertisement

Leave A Reply

Your email address will not be published.