Karnataka Times
Trending Stories, Viral News, Gossips & Everything in Kannada

Property Rights: ಪತಿಯ ಮರಣದ ನಂತರ ಆತನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ ಗೊತ್ತಾ; ಏನನ್ನುತ್ತದೆ ಕಾನೂನು?

advertisement

ಭಾರತದಲ್ಲಿ ಆಸ್ತಿಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ರೀತಿಯ ಕಾನೂನುಗಳು ಕೂಡ ಇವೆ. ಅದೇ ರೀತಿ ಈ ಕಾನೂನುಗಳು ಪ್ರತ್ಯೇಕವಾಗಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಉದಾಹರಣೆಗೆ ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಗಂಡು ಮಕ್ಕಳಿಗೆ ತಂದೆಯ ಆಸ್ತಿ (Fathers Property) ಯಲ್ಲಿ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕನ್ನು ಹೆಣ್ಣು ಮಕ್ಕಳಿಗೂ ಕೂಡ ನೀಡಲಾಗುತ್ತದೆ.

WhatsApp Join Now
Telegram Join Now

ಒಬ್ಬ ಹೆಣ್ಣು ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ನಂತರವೂ ಕೂಡ ಆಕೆಗೆ ತಂದೆಯ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಹಕ್ಕು ಇರುತ್ತದೆ. ಸಾಮಾನ್ಯವಾಗಿ ಉಯಲಿನಲ್ಲಿ ಯಾರ ಹೆಸರನ್ನ ಬರೆಯಲಾಗುತ್ತದೆಯೋ ಅವರಿಗೆ ಉತ್ತರಾಧಿಕಾರಿ ಹಕ್ಕು ಸಿಗುತ್ತದೆ. ಇನ್ನು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಮಕ್ಕಳನ್ನು ಹೊರತುಪಡಿಸಿ ಬೇರೆಯವರಿಗೂ ಕೂಡ ತನ್ನ ಆಸ್ತಿ ಪಾಲನ್ನು ಬರೆದು ಕೊಡಬಹುದು.

ಪತಿಯ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇದೆಯೇ?

ಇನ್ನು ಗಂಡನ ಮನೆ ಸೇರಿದ ಹೆಣ್ಣು ಒಂದು ವೇಳೆ ಪತಿಯ ಮರಣದ ನಂತರ ಆತನ ಆಸ್ತಿಯಲ್ಲಿಯೂ ಪಾಲು ಪಡೆಯುತ್ತಾಳೆಯೇ ಎನ್ನುವ ಸಂದೇಹ ಸಾಕಷ್ಟು ಜನರಲ್ಲಿ ಇರುತ್ತದೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

 

advertisement

 

ಹೌದು, ಮದುವೆಯಾದ ನಂತರ ಪತಿ ತೀರಿಕೊಂಡಾಗ ಆತನ ಆಸ್ತಿಗೆ ಹೆಂಡತಿ ವಾರಸುದಾರಳಾಗುತ್ತಾಳೆ. ಆದರೆ ಪತಿ ಆ ಆಸ್ತಿಯ ಹಕ್ಕನ್ನು ಆಕೆಯ ಹೆಸರಿಗೆ ಉಯಿಲು ಮಾಡಿಸಿ ಇಡುವುದು ಬಹಳ ಮುಖ್ಯ. ಪತಿ ಸಾಯುವ ಮುನ್ನ ತನ್ನ Will ಅಥವಾ ಉಯಿಲಿನಲ್ಲಿ ತನ್ನ ಆಸ್ತಿಯ ಮಾಲೀಕತ್ವವನ್ನು ಹೆಂಡತಿಗೆ ನೀಡಿದ್ದರೆ ಆ ಆಸ್ತಿ ಆಕೆಯ ಹೆಸರಿಗೆ ಸೇರುತ್ತದೆ ಆಗ ಸೊಸೆಗೆ ಅಂದರೆ, ಮೃತಪಟ್ಟ ಪತಿಯ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ. ಅತ್ತೆಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದು ಸೊಸೆಯ ಪಾಲಿಗೆ ಸಿಗುವುದಿಲ್ಲ.

ಮಹಿಳೆಯ ಪತಿ ಮತ್ತು ಆಕೆಯ ಮಾವ ತೀರಿಕೊಂಡ ನಂತರ ಆಸ್ತಿಯ ಹಕ್ಕುಗಳು ಸಾಮಾನ್ಯವಾಗಿ ಕುಟುಂಬದ ಸೊಸೆಯರಿಗೆ ಸಲ್ಲುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಾತ್ರ ಸೊಸೆ ಆ ಆಸ್ತಿಯ ಮೇಲೆ ಹಕ್ಕನ್ನು ಸಾಧಿಸುತ್ತಾಳೆ. ಆದರೆ ಇದಕ್ಕೂ ಒಂದು ಶರತ್ತು ಇದೆ. ಅತ್ತೆ, ಮಾವ ಹಾಗೂ ಗಂಡ ಮೂವರು ತೀರಿಕೊಂಡಾಗ ಸೊಸೆಗೆ ಆಸ್ತಿಯಲ್ಲಿ ಹಕ್ಕು ಸಿಗುತ್ತದೆ. ಆದರೆ ಉಯಲಿನಲ್ಲಿ ಆಕೆಯ ಹೆಸರು ಇರಬೇಕು ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ. ಆಕೆಯ ಹೆಸರು ಉಯಿಲಿನಲ್ಲಿ ಬರೆಯದೆ ಇದ್ದರೆ ಆಕೆಗೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ.

ಅತ್ತೆ ಅಥವಾ ಮಾವ ಜೀವಂತ ಇಲ್ಲದೆ ಇದ್ದರೆ ಅಥವಾ ಪತಿ ತನ್ನ ಆಸ್ತಿಯನ್ನು ಹೆಂಡತಿಯ ಹೆಸರಿನಲ್ಲಿ ಬರೆದಿಟ್ಟಾಗ ಮಾತ್ರ ಗಂಡನ ಆಸ್ತಿಯ ಮೇಲಿನ ಹಕ್ಕನ್ನು ಹೆಂಡತಿ ಪಡೆಯುತ್ತಾಳೆ. ಹಾಗೂ ಆಕೆಯಿಂದ ಆಕೆಯ ಮಕ್ಕಳಿಗೆ ಆ ಆಸ್ತಿಯ ಹಕ್ಕು ವಿಸ್ತರಣೆ ಆಗುತ್ತದೆ. ಇನ್ನು ಪತಿ ತೀರಿಕೊಂಡಾಗ ಆಕೆಯ ಹೆಸರಿನಲ್ಲಿ ಆಸ್ತಿ ಬರೆದು ಇಡದೆ ಇದ್ದ ಸಂದರ್ಭದಲ್ಲಿ ಆಕೆಗೆ ಆತನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲವಾದರೂ ಆಕೆಯ ಮನೆಯವರು ಆಕೆಯನ್ನು ಮನೆಯಿಂದ ಹೊರಗೆ ಹಾಕುವಂತಿಲ್ಲ ಎನ್ನುವ ಕಾನೂನು ಜಾರಿಯಲ್ಲಿ ಇದೆ.

advertisement

Leave A Reply

Your email address will not be published.