Karnataka Times
Trending Stories, Viral News, Gossips & Everything in Kannada

Yuva Nidhi Yojana: ಯುವನಿಧಿ ಯೋಜನೆಯ ಬಗ್ಗೆ ಸೀರಿಯಸ್ ಆದ ಸರ್ಕಾರ! ಮೊದಲ ಕಂತಿನ ಹಣಕ್ಕೆ ಹೊಸ ಸೂಚನೆ

advertisement

ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡ್ತಾ ಇದ್ದು ಅದರಲ್ಲಿ ಯುವನಿಧಿ ಯೋಜನೆ ಕೂಡ ಒಂದಾಗಿದೆ. ಹೌದು ಈ ಯೋಜನೆಯ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ಸಹಾಯಧನ ನೀಡಲಾಗುತ್ತದೆ. ಇಂದು ದೇಶದಲ್ಲಿ ವಿದ್ಯಾವಂತರು ಆಗಿದ್ದರು ಸಹ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ.‌ ಎಷ್ಟೋ ವಿದ್ಯಾವಂತರು ಮನೆಯಲ್ಲೇ ಕಾಲ ಕಳೆಯುವಂತೆ ಆಗಿದೆ.‌ ಮುಖ್ಯ ಕಾರಣ ಸರಿಯಾದ ಉದ್ಯೋಗ ದೊರೆಯದೇ ಇರುವುದು. ಇದಕ್ಕಾಗಿ ಸರಕಾರ ಕೂಡ ನಿರುದ್ಯೋಗಿಗಳಿಗೆ ಬೆಂಬಲ ನೀಡ್ತಾ ಇದೆ.‌ಇದಕ್ಕಾಗಿ ಸ್ವಯಂ ಉದ್ಯೋಗ ಕಲ್ಪಿಸಿ ಕೊಡಲು ಸಹಾಯಧನ,ತರಬೇತಿ ಇತ್ಯಾದಿ ನೀಡ್ತಾ ಇದೆ.

WhatsApp Join Now
Telegram Join Now

ಅದೇ ರೀತಿ ರಾಜ್ಯ ಸರಕಾರ ಯುವನಿಧಿ ಯೋಜನೆ (Yuva Nidhi Yojana) ಕೂಡ ಜಾರಿ ಮಾಡಿದೆ. ಈ ಯುವನಿಧಿ ಯೋಜನೆಯನ್ನು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯಕ್ಕಾಗಿ ಸರ್ಕಾರದ ಈ ಗ್ಯಾರಂಟಿ ಯೋಜನೆಯನ್ನು ಆರಂಭಿಸಿದೆ.ಈ ಗ್ಯಾರಂಟಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1,500 ರೂ. ಸಿಗಲಿದೆ. ಈ ಯುವ ನಿಧಿ ಯೋಜನೆ (Yuva Nidhi Yojana) ಯ ಸೌಲಭ್ಯವನ್ನು ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ.

 

Image Source: Hindustan Times

 

advertisement

ಇದೀಗ ಸರಕಾರ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು ಯುವನಿಧಿ ಯೋಜನೆ (Yuva Nidhi Yojana) ಯಡಿ ಫಲಾನುಭವಿಯಾಗಲು ಸೇವಾಸಿಂಧು ಪೋರ್ಟಲ್‍ನಲ್ಲಿ ಹೆಸರು ನೋಂದಾಯಿಸಬೇಕಿತ್ತು. ಆದರೆ ಈಗ ಹೊಸ ನಿಯಮ ಜಾರಿ ಮಾಡಿದ್ದು ಅರ್ಜಿ ಸಲ್ಲಿಕೆ ಮಾಡುವವರು ಈ ಬಗ್ಗೆ ತಿಳಿಯಬೇಕು‌.. ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕಪತ್ರಗಳು, ಆಧಾರ್ ಕಾರ್ಡ್ (Aadhar Card) ಹಾಗೂ ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಪರಿಶೀಲನೆಗೆ ಹಾಜರಾಗುವುದು ಕಡ್ಡಾಯ ಎಂದಿದೆ, ಅದೇ ರೀತಿ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗಳು ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ಸ್ವಯಂ ಘೋಷಣೆ ನೀಡುವುದು ‌ಕೂಡ ಕಡ್ಡಾಯ ವಾಗಿ ಇರುತ್ತದೆ.

 

Image Source: Udayavani

 

ಹಾಗೆಯೇ ಯಾವುದೇ ಉದ್ಯೋಗ ಸಿಕ್ಕಿಲ್ಲ‌ ಅನ್ನೋ ಮೇರೆಗೆ 6 ತಿಂಗಳ ತಮ್ಮ ಅಧಿಕೃತ ಬ್ಯಾಂಕ್ ಖಾತೆಯ ವಹಿವಾಟು ಸ್ಟೇಟ್‌ಮೆಂಟ್ (Bank Account Transactions Statement) ಪ್ರತಿ ಸಲ್ಲಿಸಬೇಕು, ಇನ್ನು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರು ನಿರುದ್ಯೋಗ ಪರಿಶೀಲನೆ ಮಾಡಿಸುವುದು ಕಡ್ಡಾಯ ವಾಗಿದ್ದು ಉದ್ಯೋಗ ಹೊಂದಿದ್ದರೂ ಕೂಡ ಯುವನಿಧಿ’ ಯೋಜನೆ ಲಾಭವನ್ನು ಪಡೆದುಕೊಂಡರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರ ನೀಡಲಾಗಿದೆ.

advertisement

Leave A Reply

Your email address will not be published.