Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆ ಜಾರಿಗೆ ದಿನಾಂಕ ಫಿಕ್ಸ್, ಅರ್ಹತೆ ಇರುವವರು ಈ ದಾಖಲೆ ರೆಡಿ ಇಟ್ಟುಕೊಳ್ಳಿ.

advertisement

ಕಾಂಗ್ರೆಸ್ ಸರಾಕರದ ಗ್ಯಾರಂಟಿ ಯೋಜನೆಗಳು ನೀಡಿದ ಪ್ರಣಾಳಿಕೆ ‌ಯಂತೆ ಬಿಡುಗಡೆಯಾಗಿದೆ. ಈಗಾಗಲೇ‌ ಗೃಹಲಕ್ಷ್ಮಿ (Gruha Lakshmi Yojana), ಶಕ್ತಿಯೋಜನೆ (Shakti Yojana), ಅನ್ನಭಾಗ್ಯ (Anna Bhagya Yojana), ಗೃಹ ಜ್ಯೋತಿ ಯೋಜನೆ (Gruha Jyothi Yojana) ಗಳು‌ ಆರಂಭ ವಾಗಿದ್ದು ಯುವ ನಿಧಿ ಯೋಜನೆ‌ (Yuva Nidhi Scheme) ಯೊಂದೆ ಬಾಕಿ‌ ಇದೆ.‌ ಈಗಾಗಲೇ ಈ‌ ಯೋಜನೆಯನ್ನು ನಿರುದ್ಯೋಗ ಯುವಕ ಯುವತಿಯರಿಗೆ ಜಾರಿಗೆ ತಂದತಂಹ ಯೋಜನೆ ಇದಾಗಿದ್ದು, ಯಾರೆಲ್ಲ‌ ಅರ್ಜಿ ಹಾಕಬಹುದು, ದಾಖಲೆ ಏನೆಲ್ಲಾ ಬೇಕು ಎಂಬ ಮಾಹಿತಿ ಬೇಕಿದ್ದರೆ ಈ ಲೇಖನ‌ ಓದಿ.

ಎಷ್ಟು ಹಣ ದೊರೆಯುತ್ತದೆ?

ನಿರುದ್ಯೋಗಿ ಪದವೀಧರ ನಿರುದ್ಯೋಗ ಯುವಕ ಯುವತಿಯರಿಗೆ‌ ಪ್ರತಿ ತಿಂಗಳು 3,000 ರೂಪಾಯಿ ಹಾಗೂ ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಿದೆ. ಅದರೆ 2022- 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಜನವರಿಯಲ್ಲಿ ಜಾರಿ:

 

 

advertisement

ಯುವನಿಧಿ ಯೋಜನೆ (Yuva Nidhi Scheme) ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.‌ ಈ ಮೂಲಕ ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರಬಹುದು. ನಿರುದ್ಯೋಗದ ಯುವಕ‌ ಯುವತಿಯರು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಏನು?

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕೆಲವೊಂದು ಷರತ್ತುಗಳು ಅನ್ವಯವಾಗುತ್ತದೆ. ಅರ್ಜಿದಾರನು ಕರ್ನಾಟಕದ ಕಾಯಂ ನಿವಾಸಿ ಯಾಗಿದ್ದರೆ ಮಾತ್ರ ಅರ್ಜಿ ಹಾಕಬಹುದಾಗಿದೆ. ಅದೇ ರೀತಿ‌ 2022-2023 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿದ್ದವರು ಅರ್ಜಿ ಹಾಕಬಹುದಾಗಿದೆ. ಕೇವಲ ಎರಡು ವರ್ಷದ ವರೆಗೆ ಈ ಯೋಜನೆಯ ಸೌಲಭ್ಯ ಸಿಗಲಿದ್ದು ಉದ್ಯೋಗ ‌ಸಿಕ್ಕ ನಂತರ ಮಾಹಿತಿ‌ನೀಡಬೇಕು. ಪ್ರಸ್ತಕ ವರ್ಷದಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ಯುವಕರು ಅರ್ಜಿ ಹಾಕಬಹುದು. ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಳ್ಳದಿದ್ದರೆ ದಂಡ ವಿಧಿಸಲಾಗುವುದು. ಅದೇ ರೀತಿ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸುವವರ ವಿರುದ್ಧ ದಂಡ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ.

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಈ‌ ದಾಖಲಾತಿ ಬೇಕು:

  • ಮತದಾರರ ಗುರುತಿನ ಚೀಟಿ.
  • ಆಧಾರ್ ಕಾರ್ಡ್
  • 10ನೇ ತರಗತಿ ಅಂಕಪಟ್ಟಿ
  • ಪದವಿ ಅಭ್ಯರ್ಥಿಗಳಾಗಿದ್ದ ಅಂಕಪಟ್ಟಿ
  • ಡಿಪ್ಲೋಮೊ ಆಗಿದ್ದರೆ ಅಂಕಪಟ್ಟಿ ಶಿ
  • ಬ್ಯಾಂಕ್‌ ಖಾತೆ ಮಾಹಿತಿ
  • ಸೆಲ್ಫ್ ಡಿಕ್ಲೆರೇಷನ್ ಪ್ರತಿ
  • ಪೋಟೋ
  • ಮೊಬೈಲ್ ಸಂಖ್ಯೆ ಮಾಹಿತಿ.

advertisement

Leave A Reply

Your email address will not be published.