Karnataka Times
Trending Stories, Viral News, Gossips & Everything in Kannada

Bank Holiday In December: ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ದಿನದಂದು ಬ್ಯಾಂಕ್ ಬಂದ್ ಇರಲಿದೆ ಗೊತ್ತಾ?

advertisement

ನೀವೇನಾದರೂ ಡಿಸೆಂಬರ್‌ನಲ್ಲಿ ಬ್ಯಾಂಕ್‌ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ಲಾನ್‌ಗಳನ್ನು ಮಾಡಿಕೊಂಡಿದ್ದರೆ ತಪ್ಪದೆ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ನೋಡಿಕೊಳ್ಳುವುದು ಒಳ್ಳೆಯದು. ರಜೆ ಹೊರತುಪಡಿಸಿ ಉಳಿದ ಯಾವ ದಿನಗಳಲ್ಲಿ ಬ್ಯಾಂಕ್‌ಗೆ ತೆರಳಿ ವ್ಯವಹಾರಗಳನ್ನು ನಡೆಸಬೇಕು ಅನ್ನೋದು ನಿಮಗೆ ಚೆನ್ನಾಗಿ ಮನವರಿಕೆಯಾಗುತ್ತದೆ.

ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ ಚಟುವಟಿಕೆಗಳು ಯಾವುದೇ ಅಡತಡೆಗಳು ಇಲ್ಲದೆ ಎಲ್ಲ ದಿನಗಳೂ ನಡೆಯುತ್ತವೆ. ಬ್ಯಾಂಕ್‌ ಒಕ್ಕೂಟಗಳು ಡಿಸೆಂಬರ್‌ನಲ್ಲಿ ಬರೋಬ್ಬರಿ 6 ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ಎಲ್ಲಾ ಬ್ಯಾಂಕ್‌ಗಳು ಈ ಆರೂ ದಿನ ಬಂದ್ ಆಗಿರುವುದಿಲ್ಲ. ಬದಲಾಗಿ ಒಂದೊಂದು ಬ್ಯಾಂಕ್ ಒಂದೊಂದು ದಿನ ಮುಷ್ಕರ ಮಾಡಲು ನಿರ್ಧರಿಸಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) 6 ದಿನಗಳ ಮುಷ್ಕರ ನಡೆಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಅದರ ಸಂಪೂರ್ಣ ವಿವರಗಳನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ಡಿಸೆಂಬರ್ 4 ಸೋಮವಾರ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಿಂದ ಮುಷ್ಕರ.

ಡಿಸೆಂಬರ್ 5 ಮಂಗಳವಾರ – ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಪ್ ಇಂಡಿಯಾದಿಂದ ಮುಷ್ಕರ.

advertisement

ಡಿಸೆಂಬರ್ 6 ಬುಧವಾರ – ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವತಿಯಿಂದ ಮುಷ್ಕರ.

ಡಿಸೆಂಬರ್ 7 ಗುರುವಾರ – ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್‌ಗಳಿಂದ ಮುಷ್ಕರ.

ಡಿಸೆಂಬರ್ 8 ಶುಕ್ರವಾರ – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರದ ವತಿಯಿಂದ ಮುಷ್ಕರ.

ಡಿಸೆಂಬರ್ 11 ಸೋಮವಾರ – ಎಲ್ಲಾ ಖಾಸಗಿ ಬ್ಯಾಂಕ್‌ಗಳಿಂದ ಮುಷ್ಕರ ನಡೆಯಲಿದೆ.

ಇವುಗಳ ಹೊರತಾಗಿ ಬ್ಯಾಂಕ್‌ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗಿರುತ್ತವೆ. ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳ ಅಥವಾ ಆ ರಾಜ್ಯಗಳಲ್ಲಿನ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.ಆರ್‌ಬಿಐ ಪಟ್ಟಿಯ ಪ್ರಕಾರ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ 11 ದಿನ ರಜೆಗಳಿವೆ. ಅದರಲ್ಲಿ ಕ್ರಿಸ್ಮಸ್ ರಜೆ ಕೂಡ ಸೇರಿದೆ.

advertisement

Leave A Reply

Your email address will not be published.