Karnataka Times
Trending Stories, Viral News, Gossips & Everything in Kannada

IPL Auction 2024: ಐಪಿಎಲ್ ಹರಾಜಿಗೆ ದಿನಾಂಕ, ಸ್ಥಳ ಫಿಕ್ಸ್!

advertisement

ಇತ್ತೀಚೆಗಷ್ಟೇ ವಿಶ್ವಕಪ್ ಮುಗಿದ ಬಳಿಕ ಅದರ ಬೆನ್ನಲ್ಲೇ IPL ಪಂದ್ಯದ ಬಗ್ಗೆ ಬಿಗ್ ಅಪ್ಡೇಟ್ ಸಿಗುತ್ತಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಅದರ ಹರಾಜಿನ ಪ್ರಕ್ರಿಯೆ ಆರಂಭವಾಗುತ್ತಿದ್ದು ಈ ಮೂಲಕ ಆಟಗಾರರ ಆಯ್ಕೆ ವಿಚಾರ ಸದ್ಯ ಎಲ್ಲೆಡೆ ಚರ್ಚಿತವಾಗುವ ವಿಷಯವಾಗುತ್ತಿದೆ. ಕಳಪೆ ಪಂದ್ಯ ಮತ್ತು ಇತರ ಕಾರಣದಿಂದ ಕೆಲ ನಾಯಕರು ಆಯ್ಕೆ ಆದರೆ ಇನ್ನು ಕೆಲವರನ್ನು ಪಂದ್ಯದಿಂದ ಕೈ ಬಿಡಲಾಗುತ್ತಿದೆ.

ಈ ಬಾರಿ ಎಲ್ಲಿ ಹರಾಜು

BCCI ನ ಐಪಿಎಲ್ ಹರಾಜನ್ನು ಈ ಬಾರಿ ವಿದೇಶದಲ್ಲಿ ನಡೆಸಲು ತೀರ್ಮಾನಿಸಲಾಗುತ್ತಿದೆ. ಐಪಿಎಲ್ 2024ರ ಹರಾಜನ್ನು ದುಬೈನಲ್ಲಿ ಡಿಸೆಂಬರ್ 19ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಆಟಗಾರರ ಮೇಲೆ ಬಿಡ್ ಮೊತ್ತ ನಿರ್ಧಾರ ವಾಗಲಿದ್ದು ಈ ಬಾರಿ ಎಲ್ಲ ತಂಡಗಳಲ್ಲಿ ಬಹುತೇಕ ಉತ್ತಮ ಪೈಪೋಟಿ ರೆಡಿಯಾಗಲಿದೆ. ಕಳೆದ ಬಾರಿ ಗಿಂತ ಈ ಬಾರಿ ಬಿಡ್ ಮೊತ್ತ 5ಕೋಟಿ ರೂ. ಏರಿಸಲಾಗಿದೆ.

ಈ ಬಾರಿಯೂ ಅದೇ ನಿಯಮ ಇರಲಿದೆ

advertisement

ಐಪಿಎಲ್ ಸಮಿತಿಯ ನಿಯಮ ಈ ಬಾರಿ ಕೂಡ ಅದೇ ಇರಲಿದೆ. ಆಗ ಪ್ರತೀ ಫ್ರ್ಯಾಂಚೈಸಿ ತಮ್ಮ ತಂಡದಲ್ಲಿ ಗರಿಷ್ಠ 8 ವಿದೇಶಿ ಆಟಗಾರರನ್ನು ಒಳಗೊಂಡ 25 ಆಟಗಾರರನ್ನು ಹೊಂದುವ ಅವಕಾಶ ಇರಲಿದೆ. 11ಜನರು ಆಡುವಾಗ ಒಮ್ಮೆಲೆ ಮೈದಾನಕ್ಕೆ 4 ವಿದೇಶಿ ಆಟಗಾರರನ್ನು ಬಳಸಿಕೊಳ್ಳಬಹುದು.

ಈ ಎಲ್ಲ ತಂಡಗಳು ಇಷ್ಟು ಮೊತ್ತ ಹೊಂದಿರಲಿದೆ ಎಂದು ನೀವು ಓದಿ ತಿಳಿಯಬಹುದು.

  • ಗುಜರಾತ್ ಟೈಟಾನ್ಸ್ ಮೊತ್ತ 4.45ಕೋಟಿ ರೂಪಾಯಿ ಯಿಂದ 5ಕೋಟಿ ಹೆಚ್ಚಳವಾದ ಕಾರಣ 9.45ಕೋಟಿ ರೂಪಾಯಿ ಆಗಿದೆ.
  • ಸನ್ ರೈಸ್ ಹೈದ್ರಾಬಾದ್ ಮೊತ್ತ ಈಗ 11.55 ಕೋಟಿ ರೂಪಾಯಿಯಾಗಿದೆ‌.
  • ಪಂಜಾಬ್ ಕಿಂಗ್ಸ್ 12.20 ಕೋಟಿ ಇದ್ದದ್ದು 17.20ಕೋಟಿ ರೂಪಾಯಿ ಆಗಲಿದೆ.
  • RCB 1.75ಕೋಟಿ ರೂಪಾಯಿ ಇದ್ದದ್ದು 6.75ಕೋಟಿ ರೂಪಾಯಿ ಏರಿಕೆಯಾಗಿದೆ.
  • ಚೆನ್ನೈ ಸೂಪರ್ ಕಿಂಗ್ಸ್ 6.5 ಕೋಟಿ ರೂಪಾಯಿ ಏರಿಕೆಯಾಗಿದೆ.
  • ಡೆಲ್ಲಿ ಕೆಪಿಟಲ್ಸ್ 9.45 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
  • ಲಕ್ನೋ ಸೂಪರ್ ಜೈಂಟ್ಸ್ 3.55 ಕೋಟಿ ಇದ್ದದ್ದು 8.55 ಕೋಟಿ ರೂಪಾಯಿ ಏರಿದೆ.
  • ಮುಂಬೈ ಇಂಡಿಯನ್ಸ್ 50 ಲಕ್ಷದಿಂದ 5.50ಕೋಟಿ ಆಗಲಿದೆ.

IPL ಆಟದಲ್ಲಿ ಆಟಗಾರರನ್ನು ಉಳಿಸಲು ಪಟ್ಟಿ ಸಲ್ಲಿಸುವ ಗಡುವಿನ ದಿನಾಂಕ ನಿಗಧಿಯಾಗಿದ್ದು ನವೆಂಬರ್ 26ರ ವರೆಗೆ ಅವಕಾಶ ನೀಡಲಾಗಿತ್ತು. ಅದೇ ರೀತಿ ಹರಾಜಿನ ಪ್ರಕ್ರಿಯೇ ವಿದೇಶದಲ್ಲಿ ನಡೆಯುತ್ತಿರುವುದಕ್ಕೆ ಕೂಡ ಕಾರಣ ಇದೆ. ಈಗ ಅನೇಕ ಕಾರ್ಯಕ್ರಮಗಳು ಸರಣಿಯಾಗಿ ಸಿಗುವ ಕಾರಣ ಆಟಗಾರರಿಗೆ ಹೊಟೇಲ್ ಇತರ ವ್ಯವಸ್ಥೆ ನೀಡುವುದು ಕಷ್ಟವಾಗಲಿದೆ‌. ಹಾಗಾಗಿ ದುಬೈ ನಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಲಾಗಿದೆ.

advertisement

Leave A Reply

Your email address will not be published.