Karnataka Times
Trending Stories, Viral News, Gossips & Everything in Kannada

Jio: ಜಿಯೋ ವಿಶೇಷ ಪ್ಲಾನ್, ಕೇವಲ‌ 148 ರೂ ರೀಚಾರ್ಜ್‌ನಲ್ಲಿ 12 OTT ಅಪ್ಲಿಕೇಶನ್‌ ಉಚಿತ!

advertisement

ಇಂದು ಮೊಬೈಲ್ ಎಷ್ಟು ಅಗತ್ಯ ವಾದ ಸಾಧನ ಎಂಬುದು ಪ್ರತಿಯೊಬ್ಬರಿಗೂ ತಿಳಿದೆ ಇದೆ. ವ್ಯಕ್ತಿಯಿಂದ ‌ವ್ಯಕ್ತಿಗೆ ಸಂಪರ್ಕ ಕಲ್ಪಿಸುವ ಜೊತೆಗೆ ನಮಗೆ ಬೇಕಾದ ಮಾಹಿತಿ, ಡಾಟಾ ಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು. ಹಾಗಾಗಿ ಮೊಬೈಲ್ ಅನ್ನೋದು ಹಿರಿಯರಿಂದ ಹಿಡಿದು ಮಕ್ಕಳ ವರೆಗೂ ನೆಚ್ಚಿನ ಸಾಧನ ಎನಿಸಿಕೊಂಡಿದೆ.ಇಂದು ಮಾರುಕಟ್ಟೆ ಗೂ ನನಾ ರೀತಿಯ ಮೊಬೈಲ್ ಗಳು ಬಂದಿದ್ದು ‌ಉತ್ತಮ ಪೀಚರ್ಸ್ ನೊಂದಿಗೆ ಕಡಿಮೆ ಬೆಲೆಯಲ್ಲಿಯೂ ಗ್ರಾಹಕರು ಖರೀದಿ ಮಾಡಬಹುದು.

ಮೊಬೈಲ್ ಅಂತ ಬಂದಾಗ ಅದಕ್ಕೆ ಅನುಗುಣವಾದ ಸಿಮ್ ಕೂಡ ಅಗತ್ಯವಾಗಿ ಬೇಕು. ಅದರಲ್ಲಿ ಇಂದು ರಿಲಯನ್ಸ್ ಜಿಯೋ ವಾಯರ್‌ಲೆಸ್‌ ಚಂದಾದಾರರ ಸಂಖ್ಯೆಯಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಪೂರೈಕೆ ಹೊಂದಿರುವ ಕಂಪನಿಯಾಗಿದೆ. ಇಂದು ಜಿಯೋ (Jio) ಸಿಮ್ ಕಾರ್ಡ್‌ಗಳನ್ನು ಖರೀದಿ ಮಾಡುವ ಸಂಖ್ಯೆಯು ಹೆಚ್ಚಾಗಿದ್ದು ಗ್ರಾಹಕರು ಸುಲಭವಾಗಿ ಸಿಮ್ ಖರೀದಿ ಅಥವಾ ಪೋರ್ಟ್ ಮಾಡುತ್ತಾರೆ.

ಇದೀಗ Jio ಗ್ರಾಹಕರಿಗಾಗಿ ಹೊಸ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದ್ದು ಕಡಿಮೆ ರಿಚಾರ್ಜ್ ಮೂಲಕ ಹೆಚ್ಚಿನ ಸೌಲಭ್ಯ ವನ್ನು ಜಿಯೋ ಗ್ರಾಹಕರು ಪಡೆಯಬಹುದು.

Jio Rs 148 Recharge Plan:

 

 

ಹೌದು ಜಿಯೋ (Jio) ರೂ 148 ರೀಚಾರ್ಜ್‌ನಲ್ಲಿ, 10GB ಹೆಚ್ಚುವರಿ ಡೇಟಾ, ಪ್ರೈಮ್ ವೀಡಿಯೊ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆ ಲಭ್ಯವಿದ್ದು ಬಳಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಆಗಿದೆ. ಈ ಯೋಜನೆಯು 28 ದಿನಗಳ ವರೆಗೆ ಲಭ್ಯವಿರುತ್ತದೆ. ಅದೇ ರೀತಿ ಈ ಯೋಜನೆಯು 12 OTT ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಸಹ ನೀಡಲಿದೆ.

advertisement

Jio Rs 1198 Recharge Plan:

ಅದೇ ರೀತಿ ಜಿಯೋದ 1198 ರಿಚಾರ್ಜ್ ಯೋಜನೆ ಕೂಡ ತುಂಬಾ ಬಳಕೆಯಲ್ಲಿದೆ. ಈ ಯೋಜನಡಯಲ್ಲಿ ನಿಮಗೆ 14 OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಅದೇ ರೀತಿ ನೀವು ಪ್ರತಿದಿನ 2GB ಡೇಟಾವನ್ನು ಸಹ ಪಡೆಯಬಹುದು. ಅನಿಯಮಿತ ಕರೆಯೊಂದಿಗೆ ಪ್ರತಿದಿನ 100 SMS ಸಹ ಲಭ್ಯವಿದ್ದು 18GB ಡೇಟಾ ಸೌಲಭ್ಯ ಲಭ್ಯವಿದೆ.

Jio Rs 179 Recharge Plan:

179 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯು 24 ದಿನಗಳವರೆಗೆ ಲಭ್ಯವುದ್ದು, ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ.ದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಾಗಲಿದೆ.ಅದೇ ರೀತಿ 1 ಜಿಬಿ ಡೇಟಾ ಸೌಲಭ್ಯವೂ ಇದೆ

Jio Rs 398 Recharge:

ಜಿಯೋದ ರೂ 398 ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರಲಿದೆ.ಈ‌ ಯೋಜನೆಯಲ್ಲಿ 6GB ಹೆಚ್ಚುವರಿ ಡೇಟಾ ಸಹ ಲಭ್ಯವಿದೆ.

advertisement

Leave A Reply

Your email address will not be published.