Karnataka Times
Trending Stories, Viral News, Gossips & Everything in Kannada

Post Office Scheme: ಈ ಯೋಜನೆಯಲ್ಲಿ ಕೇವಲ 500 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿಯಲ್ಲಿ ರೂ 66,58,288 ಗರಿಷ್ಠ ಮೊತ್ತ ಪಡೆಯಿರಿ!

advertisement

ಉಳಿತಾಯ ಯೋಜನೆಯಲ್ಲಿ ಇಂದು ಸಂಘ ಸಂಸ್ಥೆ, ಸೊಸೈಟಿ ಎಷ್ಟೇ ಇದ್ದರೂ ಯಾವುದು ಹೆಚ್ಚು ಸುರಕ್ಷಿತ ಎಂದಾಗ ನಮ್ಮೆಲ್ಲರ ಮೊದಲ ಆಯ್ಕೆ ಅಂಚೆ ಇಲಾಖೆಯ ಉಳಿತಾಯ ಯೋಜ‌ನೆ (Post Office Savings Scheme) ಎನ್ನಬಹುದು. ಮಧ್ಯಮ ವರ್ಗದವರು ಅತೀ ಹೆಚ್ಚು ಅಂಚೆ ಇಲಾಖೆ ಉಳಿತಾಯ ಯೋಜನೆಯ ಫಲಾನುಭವಿಗಳಾಗಿದ್ದು ಇಲ್ಲಿ ನೀವು ಉಳಿತಾಯ ಯೋಜನೆ ಮಾಡಿದರೆ ನಿಮ್ಮ ಹಣ ಹೆಚ್ಚು ಸುರಕ್ಷಿತವಾಗಿರುವ ಜೊತೆಗೆ ಕೆಲ ವರ್ಷದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಲು ಬಹಳ ಅನುಕೂಲಕರವಾಗಲಿದೆ.

ಇಂದು ಅಧಿಕ ಬಡ್ಡಿ, ಹಣ ಡಬಲ್ ಎಂಬ ಆಮಿಷ ಒಡ್ಡಿ ಜನರಿಂದ ಹಣ ಪಡೆದು ಮೋಸಮಾಡುವ ಅನೇಕ ಪ್ರಕರಣವನ್ನು ನಾವು ಕಾಣಬಹುದು ಹಾಗಾಗಿ ಉಳಿತಾಯ ಯೋಜನೆಯಲ್ಲಿ ತೊಡಗಿ ಕೊಳ್ಳಲು ಸಹ ನಮಗೆ ಭಯ ಆಗುತ್ತದೆ. ಮಧ್ಯಮ ವರ್ಗದ ಜನರಿಗೆ ಉಳಿತಾಯ ಮಾಡುವಾಸೆ ಇದ್ದರೂ ಅಪಾಯ ಎಂದು ದೂರ ಉಳಿಯುವವರೇ ಅಧಿಕ ಇದ್ದಾರೆ. ಹಾಗಾಗಿ ಕೇಂದ್ರ ಸರಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ಒಂದಾದ ಪಿಪಿಎಫ್ ಯೋಜನೆ (PPF Scheme) ಯು ಬಹಳ ಮುಖ್ಯವಾಗಿದೆ. ಭಾರತೀಯ ಪ್ರಜೆಗಳಿಗೆ ಅಂಚೆ ಇಲಾಖೆಯ ಅಧೀನದಲ್ಲಿರುವ ಅನೇಕ ಯೋಜನೆಗೆ ಮಾನ್ಯತೆ ಇದೆ.

PPF Scheme:

ಅಂಚೆ ಇಲಾಖೆಯ ಅಧೀನದಲ್ಲಿ ಪಿಪಿಎಫ್ ಯೋಜನೆಗೆ ಭಾರತೀಯ ಪ್ರಜೆಗಳು ಅರ್ಹರಾಗಿದ್ದು ಇಲ್ಲಿ ಖಾತೆ ತೆತೆಯಬಹುದಾಗಿದೆ. ಪಿಪಿಎಫ್ ಯೋಜನೆಯನ್ನು ಸಾರ್ವಜನಿಕ ಭವಿಷ್ಯ ನಿಧಿ ಎಂದು ಸಹ ಕರೆಯುತ್ತಾರೆ. ಈ ಹಣವನ್ನು ನಿಮ್ಮ ಕಷ್ಟ ಕಾಲಕ್ಕೆ ನೆರವಾಗಲೂ ಸಹ ಬಳಸಬಹುದಾಗಿದೆ.ಮಕ್ಕಳ ಮದುವೆ, ಉದ್ಯಮ ಸಂಸ್ಥೆ ಸ್ಥಾಪನೆ, ಮನೆ ಖರೀದಿ ಇನ್ನು ಅನೇಕ ಕಾರಣಕ್ಕೆ ಈ ಹಣ ನಿಮಗೆ ಅನುಕೂಲ ಆಗಲಿದೆ. ಇದರಲ್ಲಿ ಸಿಗುವ ಲಾಭಾಂಶ ಹೇಗೆ, ಯಾವ ರೀತಿ ಹೂಡಿಕೆ ಕ್ರಮ ಇತ್ಯಾದಿ ವಿವರ ಈ ಲೇಖನದಲ್ಲಿ ನೀವು ತಿಳಿಯಬಹುದು.

advertisement

ಕೇವಲ 500 ರೂ ಹೂಡಿಕೆ ಮಾಡಿ:

 

 

ಪೋಸ್ಟ್ ಆಫೀಸ್ ಯೋಜನೆ (Post Office Scheme) ಯಲ್ಲಿ ನೀವು ಕೇವಲ 500 ರೂ ಹೂಡಿಕೆ ಮಾಡಿ ಮೆಚ್ಯೂರಿಟಿಯಲ್ಲಿ ರೂ 66,58,288 ಪಡೆಯಬಹುದು. ನೀವು‌ ಪಿಪಿಎಫ್ ಯೋಜನೆ (PPF Scheme) ರೂ 500 ನೊಂದಿಗೆ ಪ್ರಾರಂಭ ಮಾಡಿ , ಪ್ರತಿ ವರ್ಷ ಗರಿಷ್ಠ ರೂ 1.5 ಲಕ್ಷವನ್ನು ಠೇವಣಿ ಮಾಡಬಹುದು. ನೀವು 15 ವರ್ಷಗಳ ವರೆಗೆ PPF ನಲ್ಲಿ ಪ್ರತಿ ವರ್ಷ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆಯು 22,50,000 ರೂ ಆಗಿರುತ್ತದೆ, ಅದರಲ್ಲಿ 7.1 ಪರ್ಸೆಂಟ್ ಬಡ್ಡಿ ಯಾಗಿ ನೀವು ಒಟ್ಟು 40,68,209 ರೂಪಾಯಿಗಳನ್ನು ಪಡೆಯಬಹುದಾಗಿದೆ. ನೀವು 20 ವರ್ಷಗಳಲ್ಲಿ ಒಟ್ಟು ರೂ 30,00,000 ಹೂಡಿಕೆ ಮಾಡಿದ್ರೆ, 7.1 ರ ಪ್ರಕಾರ, ನೀವು 36,58,288 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಮೆಚ್ಯೂರಿಟಿಯಲ್ಲಿ ಒಟ್ಟು 66,58,288 ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು.

Post Office Term Deposit:

ಈ ಯೋಜನೆಯಲ್ಲಿ ಬಡ್ಡಿ ಪ್ರಯೋಜನ ಲಭ್ಯವಿದ್ದು ಪೋಸ್ಟ್ ಆಫೀಸ್ ಸಮಯ ಠೇವಣಿ (Post Office Term Deposit) ಹಣವನ್ನು ದ್ವಿಗುಣಗೊಳಿಸುತ್ತದೆ.‌ ಇದರಲ್ಲಿ, 1 ರಿಂದ 3 ವರ್ಷಗಳ ಠೇವಣಿ ಮೇಲೆ ಶೇ. 5.8ರಷ್ಟು ಬಡ್ಡಿ ಲಭ್ಯವಿದೆ. ‌5 ವರ್ಷ ಅವಧಿಗೆ ಠೇವಣಿ ಮಾಡಿದರೆ ಶೇ. 6.7ರಷ್ಟು ಬಡ್ಡಿ ದೊರೆಯುತ್ತದೆ.

advertisement

Leave A Reply

Your email address will not be published.