Karnataka Times
Trending Stories, Viral News, Gossips & Everything in Kannada

HSRP Number Plate: ಇದುವರೆಗೂ HSRP ನಂಬರ್ ಪ್ಲೇಟ್ ಹಾಕದೆ ಇದ್ದವರಿಗೆ ಸಿಹಿಸುದ್ದಿ! ಇಂತಹವರಿಗೆ ದಂಡವಿಲ್ಲ

advertisement

HSRP ನಂಬರ್ ಪ್ಲೇಟ್ (HSRP Number Plate) ಅನ್ನುವುದು ಈಗ ದೇಶದಾದ್ಯಂತ ಕಡ್ಡಾಯವಾಗಿಬಿಟ್ಟಿದೆ. ಅದರಲ್ಲಿ ವಿಶೇಷವಾಗಿ ದೇಶದ ರಾಜಧಾನಿ ಆಗಿರುವಂತಹ ದೆಹಲಿಯ ಬಗ್ಗೆ ಮಾತನಾಡುವುದಾದರೆ ಈಗಾಗಲೇ HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಇರುವಂತಹ ನಾಲ್ಕು ಚಕ್ರಗಳ ವಾಹನಗಳ ಬಗ್ಗೆ ದಂಡವನ್ನು ವಿಧಿಸುವಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. ದ್ವಿಚಕ್ರ ವಾಹನಗಳನ್ನು ಸದ್ಯದ ಮಟ್ಟಿಗೆ ಈ ಸಾಲಿನಲ್ಲಿ ಸೇರಿಸಿಲ್ಲ. ಕೇವಲ HSRP ನಂಬರ್ ಪ್ಲೇಟ್ ಹಾಕುವುದು ಮಾತ್ರವಲ್ಲದೆ ಕೋಡೆಡ್ ಸ್ಟಿಕ್ಕರ್ ಅನ್ನು ಕೂಡ ಅಳವಡಿಸಬೇಕು ಎನ್ನುವುದಾಗಿ ನಿಯಮ ಜಾರಿಯಾಗಿದೆ. ಹೀಗಾಗಿ ಎರಡನ್ನು ಕೂಡ ಒಂದು ವೇಳೆ ನೀವು ಅಳವಡಿಸಿಕೊಳ್ಳದೆ ಹೋದಲ್ಲಿ ಬುಕಿಂಗ್ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂಬುದಾಗಿ ಇಲಾಖೆ ತಿಳಿಸಿದೆ.

ಹೀಗೆ ಮಾಡಿದ್ರೆ ದಂಡ ಕಟ್ಟ ಬೇಕಾಗಿಲ್ಲ

ಒಂದು ವೇಳೆ ನೀವು ಈಗಾಗಲೇ HSRP ನಂಬರ್ ಪ್ಲೇಟ್ (HSRP Number Plate) ಹಾಗೂ ಕೋಡೆಡ್ ಸ್ಟಿಕರ್ ಅನ್ನು ಬುಕಿಂಗ್ ಮಾಡಿದ್ರೆ ಆ ಸಂದರ್ಭದಲ್ಲಿ ನಿಮಗೆ ದಂಡವನ್ನು ವಿಧಿಸಲು ಟ್ರಾನ್ಸ್ಪೋರ್ಟ್ ಇಲಾಖೆ ಹೋಗುವುದಿಲ್ಲ. ನೀವು ಇದನ್ನು ಬುಕಿಂಗ್ ಮಾಡಿರುವಂತಹ ಸ್ಲಿಪ್ ಅನ್ನು ಹಿಡಿದುಕೊಂಡು 15 ದಿನಗಳವರೆಗೆ ಯಾವುದೇ ದಂಡ ಇಲ್ಲದೆ ತಿರುಗಾಡಬಹುದಾಗಿದೆ. ಆದರೆ ನೆನಪಿಟ್ಟುಕೊಳ್ಳಿ ಇದು ಕೇವಲ 15 ದಿನಗಳ ವರೆಗೆ ಮಾತ್ರ. ನೀವು ಈ ಸ್ಲಿಪ್ ಅನ್ನು ತೋರಿಸಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

Image Source: YouTube

ಒಂದು ವೇಳೆ ನಿಮ್ಮ ವಾಹನದ ಮೇಲೆ ಇವೆರಡರಲ್ಲಿ ಎರಡು ವಸ್ತುಗಳನ್ನು ಅಳವಡಿಸಿಲ್ಲ ಅಂದ್ರೆ 5,500 ಫೈನ್ ಬೀಳುತ್ತದೆ. ಇದರಲ್ಲಿ ಯಾವುದಾದರೂ ಒಂದು ಇಲ್ಲ ಅಂದ್ರು ಕೂಡ ಅದೇ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಈ ಅಭಿಯಾನ ಪ್ರಾರಂಭವಾದ ಮೇಲಿಂದ ನಂಬರ್ ಪ್ಲೇಟ್ ಬುಕಿಂಗ್ ಸಂಖ್ಯೆ ಹೆಚ್ಚಾಗಿದ್ದು ಇದನ್ನು ಚೆಕ್ ಮಾಡಲು ಬೇರೆ ಬೇರೆ ಪ್ರಮುಖ ಸ್ಥಳಗಳಲ್ಲಿ ತಂಡಗಳು ಕೂಡ ಸಿದ್ಧವಾಗಿವೆ.

advertisement

HSRP Number Plate ಅಪ್ಲೈ ಮಾಡೋದು ಹೀಗೆ

HSRP ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಕೊಳ್ಳಲು ನೀವು bookmyhsrp.com/index.aspx ವೆಬ್ ಸೈಟ್ಗೆ ಭೇಟಿ ನೀಡಬೇಕಾಗಿರುತ್ತದೆ. ಇಲ್ಲಿ ನಿಮಗೆ ಪ್ರೈವೇಟ್ ಹಾಗೂ ಕೆಲಸಕ್ಕಾಗಿ ಬಳಸುವಂತಹ ವಾಹನಗಳ ಎರಡು ಆಪ್ಷನ್ ಗಳು ಸಿಗುತ್ತವೆ. ಇನ್ನು ಪ್ರೈವೇಟ್ ವಾಹನಕ್ಕೆ ಕ್ಲಿಕ್ ಮಾಡಿದ ನಂತರ ಅಲ್ಲಿ ವಾಹನದ ಇಂಧನದ ವಿಧಾನಗಳನ್ನು ಅಂದರೆ ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, CNG ಅಥವಾ CNG ಹಾಗೂ ಪೆಟ್ರೋಲ್ ಆಪ್ಶನ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇದಾದ ನಂತರ ನಿಮ್ಮ ವಾಹನ ಯಾವ ರೀತಿಯ ವಾಹನ ಅಂದ್ರೆ ಬೈಕ್ ಆಟೋ ಕಾರು ಎನ್ನುವಂತಹ ಆಪ್ಷನ್ ಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ.

Image Source: Times of India

ಇದಾದ ನಂತರ ವಾಹನದ ಬಗ್ಗೆ ಪ್ರತಿಯೊಂದು ಡೀಟೇಲ್ಸ್ ಹಾಗೂ ನಿಮ್ಮ ನಂಬರ್ ಅನ್ನು ಕೂಡ ಇಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನದ RC ಹಾಗೂ ಐಡಿ ಪ್ರೂಫ್ ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ. ನಂತರ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಿದ ನಂತರ ಪೇಮೆಂಟ್ ಮಾಡಬೇಕಾಗಿರುತ್ತದೆ. ಇಷ್ಟು ಪ್ರಕ್ರಿಯೆಗಳನ್ನು ಪೂರ್ತಿ ಗೊಳಿಸಿದರೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ತಿಗೊಂಡಂತೆ.

18001200201 ಇದು ಹೆಲ್ಪ್ಲೈನ್ ನಂಬರ್ ಆಗಿದ್ದು ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ಇಲ್ಲಿ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇಂತಹ ನಿಯಮಗಳು ಕರ್ನಾಟಕ ರಾಜ್ಯದಲ್ಲಿ ಕೂಡ ಇನ್ನಷ್ಟು ಬಿಗಿಗೊಳ್ಳಲಿದ್ದು ಆದಷ್ಟು ಬೇಗ ಆಗಬೇಕಾಗಿರುವಂತಹ ಕೆಲಸಗಳನ್ನು ಬೇಗನೆ ಮಾಡಿ ಮುಗಿಸಿದರೆ ದಂಡ ಕಟ್ಟುವುದರಿಂದ ಪಾರಾಗಬಹುದಾಗಿದೆ.

advertisement

Leave A Reply

Your email address will not be published.