Karnataka Times
Trending Stories, Viral News, Gossips & Everything in Kannada

Train Ticket: ನಿಮ್ಮ ಕನ್ಫರ್ಮ್ ಟ್ರೈನ್ ಟಿಕೆಟ್ ನಲ್ಲಿ ಬೇರೆಯವರು ಕುಳಿತಿದ್ದರೆ ಹೀಗೆ ಮಾಡಿ! ಹೊಸ ರೂಲ್ಸ್

advertisement

ಇಂದು ಹೆಚ್ಚಿನ ಜನರು ದೂರದ ಊರುಗಳಿಗೆ, ಆರಾಮ ದಾಯಕವಾದ ಪ್ರಯಾಣ ಮಾಡಬೇಕೆಂದು ರೈಲು ಪ್ರಯಾಣ ವನ್ನೆ ಹೆಚ್ಚಾಗಿ ಇಷ್ಟ ಪಡುತ್ತಾರೆ. ಈ ಪ್ರಯಾಣವು ಹಿತಕರ ಮತ್ತು ಬಸ್ ಗಿಂತ ಬೇಗನೆ ಸ್ಥಳಕ್ಕೆ ತಲುಪಲಿದೆ.ಇಂದು ರೈಲ್ವೆ ಇಲಾಖೆ ಕೂಡ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಹಲವು ರೀತಿಯ ಸೇವೆಗಳನ್ನು ಜಾರಿಗೆ ತಂದಿದೆ. ಹೌದು ಇಂದು ಟಿಕೆಟ್ ಕೂಡ ಆನ್ ಲೈನ್ ಮೂಲಕ ಬುಕ್ ಮಾಡಲು ಅವಕಾಶ ಇದ್ದು ಕಡಿಮೆ ಸಮಯದಲ್ಲೇ ಟಿಕೆಟ್ (Train Ticket) ಬುಕ್ ಮಾಡಬಹುದಾಗಿದೆ.

ಮಾರ್ಗಸೂಚಿ ಬಿಡುಗಡೆ:

ಅದೇ ರೀತಿ ಪ್ರಯಾಣಿಕರಿಗೆ ಆರಾಮದಾಯಕ ಖಾತರಿಪಡಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಕೆಲವೊಂದು ಹೊಸದಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾದ ಧ್ವನಿಯಲ್ಲಿ ಮಾತನಾಡುವಂತಿಲ್ಲ ಎಂಬ ನಿಯಮ ಕಡ್ಡಾಯ ಮಾಡಿದೆ. ರಾತ್ರಿ 10 ಗಂಟೆಯ ನಂತರ ಯಾವುದೇ ಪ್ರಯಾಣಿಕರಿಗೆ ದೀಪಗಳನ್ನು ಆನ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ಇನ್ನು ರೈಲಿನಲ್ಲಿ ಧೂಮಪಾನ, ಮದ್ಯಪಾನ ಮಾಡಿದ್ರೆ ದಂಡ ವಿಧಿಸಲಾಗುತ್ತದೆ.

ಸೀಟ್ ಸಿಕ್ಕಿಲ್ಲವೇ? ಹೀಗೆ ಮಾಡಿ:

 

advertisement

Image Source: Trainman Blog

 

ರೈಲುಗಳಲ್ಲಿ, ಕಾಯ್ದಿರಿಸಿದ ಕೋಚ್‌ಗಳಿಗೆ ಭಾರಿ ಬೇಡಿಕೆಯಿದ್ದು ಲಭ್ಯವಿರುವ ಸೀಟುಗಳು ಸೀಮಿತವಾಗಿರುವುದರಿಂದ, ಕಾಯ್ದಿರಿಸದ ಕೋಚ್‌ಗಳು ಹೆಚ್ಚಾಗಿ ತುಂಬಿರುತ್ತವೆ. ಅದರಲ್ಲೂ ಟಿಕೆಟ್ (Train Ticket) ಮಾಡಿಯೂ ಸೀಟ್ ಸಿಗದೇ ಇದ್ದರೆ ಇದಕ್ಕಾಗಿ ನೀವು ಹೊಸ ಕ್ರಮ ಕೈಗೊಳ್ಳಬಹುದು. ಹೌದು ಭಾರತೀಯ ರೈಲ್ವೇಯ ಅಧಿಕೃತ ಗ್ರಾಹಕ ಸೇವೆಯಲ್ಲಿ ರೈಲ್ವೇ ಸೇವಾ ಅಥವಾ ದೂರದ ಪ್ರಯಾಣದಲ್ಲಿ ಯಾರಾದರೂ ನಿಮ್ಮ ಕಾಯ್ದಿರಿಸಿದ ಸೀಟ್ ಅನ್ನು ತೆಗೆದುಕೊಂಡಿದ್ದರೆ, ‘RailMadad’ ಗೆ ದೂರು ನೀಡಬಹುದು ಅಥವಾ 139 ಸಂಖ್ಯೆಗೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಿ.

ಈ ಸೌಲಭ್ಯವೂ ಇದೆ:

ಅದೇ ರೀತಿ ಟಿಕೆಟ್ ಇಲ್ಲದ ಸಂದರ್ಭದಲ್ಲಿ‌ ರೈಲಿನೊಳಗೆ ಟಿಕೆಟ್ (Train Ticket) ನೀಡುವ ಸೌಲಭ್ಯವನ್ನೂ ರೈಲ್ವೇ ಇಲಾಖೆ ಪ್ರಾರಂಭ ಮಾಡಿದೆ. ಟಿಕೆಟ್ ಇಲ್ಲದ ಪ್ರಯಾಣಿಕರು ಟಿಟಿಇಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬಹುದಾಗಿದೆ. ಒಂದು ವೇಳೆ ರೈಲು ಸೀಟು ಬುಕ್ ಮಾಡಿದ ವ್ಯಕ್ತಿಗಳು ಬಂದಿಲ್ಲ ದಿದ್ದಲ್ಲಿ‌ ಅವರ ಸೀಟಲ್ಲಿ ಬೇರೊಬ್ಬರು ತತ್‌ಕ್ಷಣವೇ ಕೂರುವಂತಿಲ್ಲ. ಆ ವ್ಯಕ್ತಿ ಬರಬೇಕಿದ್ದ ಸಮಯದಿಂದ ಒಂದು ಗಂಟೆ ನಂತರ ಅಥವಾ 2 ನಿಲ್ದಾಣಗಳ ಬಳಿಕ ಟಿಟಿಇ ಸೀಟನ್ನು ಬೇರೊಬ್ಬರಿಗೆ ನೀಡಲಿದೆ.

advertisement

Leave A Reply

Your email address will not be published.